Advertisment

ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆ

author-image
AS Harshith
Updated On
ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆ
Advertisment
  • ಕಾರು ಅಡ್ಡಗಟ್ಟಿ ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ
  • ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ನೆಪ.. ಬಳಿಕ ಹಲ್ಲೆ
  • ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಬೈಕ್​ನಲ್ಲಿ ಬಂದು ದರೋಡೆ

ಕೊಪ್ಪಳ: ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ಹಣ ದರೋಡೆ ಮಾಡಿದ ಘಟನೆ ಕೊಪ್ಪಳದ ಕುಷ್ಟಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ತಾವರಗೇರಾ ಸಮೀಪದ ಕಿಲ್ಲಾರಹಟ್ಟಿ ಬಳಿ ಘಟನೆ ನಡೆದಿದೆ.

Advertisment

ನಿನ್ನೆ ಮಧ್ಯಾಹ್ನ ನಡೆದ ಘಟನೆ ಇದಾಗಿದೆ. ಲಿಂಗಸೂರಿನಿಂದ ಕೊಪ್ಪಳದ ಕಡೆಗೆ ಹೊಗುವಾಗ ಕಿಲ್ಲಾರಹಟ್ಟಿ ಡಗ್ಗಿ ಬಳಿ ಖದೀಮರು ಕಾರು ಅಡ್ಡಗಟ್ಟಿದ್ದಾರೆ. ಬಳಿಕ ದರೋಡೆ ಮಾಡಿದ್ದಾರೆ.

ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ನೆಪ ತೆಗೆದು ಮೊದಲಿಗೆ ಹಲ್ಲೆ ಮಾಡಿದ್ದಾರೆ. ಲಿಂಗಸೂರ ಮೂಲದ ಚಾಲಕ ವಿಜಯಮಹಾಂತೇಶ ಮೇಲೆ ಮೊದಲು ಹಲ್ಲೆ ನಡೆಸಿ ಖಾರದ ಪುಡಿ ಎರಚಿದ್ದಾರೆ. ಬಳಿಕ ಖಾಲೀದ್ ಮತ್ತು ಶಿವಾನಂದ ಎನ್ನುವವರ ಮೇಲೆ ಹಲ್ಲೆ ಮಾಡಿ ಖಾರದ ಪುಡಿ ಎರಚಿದ್ದಾರೆ.

ಇದನ್ನೂ ಓದಿ: ಮಳೆ ಬಂತು ಮಳೆ.. ಏಕಾಏಕಿ ಹೆಚ್ಚಿದ ಒಳಹರಿವು.. KRS ಡ್ಯಾಂನ ನೀರಿನ ಮಟ್ಟ ನಿನ್ನೆಗಿಂತ ಜಾಸ್ತಿ!

Advertisment

ಕಾರು ಅಡ್ಡಗಟ್ಟಿ ಚಾಲಕ ಹಾಗೂ ಮಾಲೀಕರಿಂದ ಸುಮಾರು ₹5 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿದ್ದಾರೆ.

ಇದನ್ನೂ ಓದಿ: ಇಸ್ಪೀಟ್ ಆಡುವಾಗ ಪೊಲೀಸರ ದಾಳಿ.. ತೆಪ್ಪ ಮಗುಚಿ 2 ಸಾವು, ಇಬ್ಬರ ರಕ್ಷಣೆ.. ಐವರಿಗಾಗಿ ಮುಂದುವರೆದ ಶೋಧಕಾರ್ಯ

ಖದೀಮರು ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಬೈಕ್​ನಲ್ಲಿ ಬಂದು ದರೋಡೆ ಮಾಡಿದ್ದಾರೆ. ಸದ್ಯ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment