newsfirstkannada.com

ಅಮೇಥಿ ರಣರಂಗಕ್ಕೆ ರಾಬರ್ಟ್‌ ವಾದ್ರಾ ಎಂಟ್ರಿ; ಸ್ಮೃತಿ ಇರಾನಿಗೆ ಟಕ್ಕರ್ ಕೊಡ್ತಾರಾ ಪ್ರಿಯಾಂಕಾ ಪತಿ?

Share :

Published April 4, 2024 at 8:44pm

Update April 4, 2024 at 8:36pm

    ಅಮೇಥಿ ಗಾಂಧಿ ಪರಿವಾರದ ಅತ್ಯಾಪ್ತ, ರಾಜೀವ್ ಗಾಂಧಿ ಭದ್ರಕೋಟೆ

    2019ರಲ್ಲಿ ಸ್ಮೃತಿ ಇರಾನಿ ಅವರ ವಿರುದ್ಧ ರಾಹುಲ್ ಗಾಂಧಿ ಸೋಲು

    ಸ್ಮೃತಿ ಇರಾನಿ ವಿರುದ್ಧ ಗುಡುಗಿದ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ

ನವದೆಹಲಿ: ಅಮೇಥಿ ಗಾಂಧಿ ಪರಿವಾರದ ಅತ್ಯಾಪ್ತ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭದ್ರಕೋಟೆಯಾಗಿದ್ದ ಲೋಕಸಭಾ ಕ್ಷೇತ್ರ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೂ ರಾಜಕೀಯದಲ್ಲಿ ಆಶ್ರಯ ನೀಡಿದ್ದ ಅಮೇಥಿ ಈ ಬಾರಿಯೂ ಜಿದ್ದಾಜಿದ್ದಿನ ಮತಯುದ್ಧಕ್ಕೆ ಸಾಕ್ಷಿಯಾಗುವ ಸುಳಿವು ಸಿಕ್ಕಿದೆ.

2019ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ರಾಹುಲ್ ಗಾಂಧಿ ಅವರು ಸೋಲು ಅನುಭವಿಸಿದ್ದರು. ಇದೀಗ 2024ರಲ್ಲಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿರುವ ರಾಹುಲ್ ಗಾಂಧಿ ಅವರು ಅಮೇಥಿ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುವುದು ಅನುಮಾನವಾಗಿದೆ. ಅಮೇಥಿಗೆ ರಾಹುಲ್ ಗಾಂಧಿ ಸ್ಪರ್ಧಿಸಿದಿದ್ದರೆ ಪ್ರಿಯಾಂಕಾ ವಾದ್ರಾ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸದಿದ್ದರೆ ಯಾರಿಗೆ ಅಮೇಥಿ ಟಿಕೆಟ್ ಸಿಗಲಿದೆ ಅನ್ನೋದು ಇನ್ನೂ ತೀರ್ಮಾನ ಆಗಿಲ್ಲ.

ಅಮೇಥಿ ಲೋಕಸಭಾ ಚುನಾವಣೆಯ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿರುವಾಗಲೇ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ ಅವರು ಹೊಸ ದಾಳ ಉರುಳಿಸಿದ್ದಾರೆ. ಅಮೇಥಿ ಮತದಾರರು ಮತ್ತೊಮ್ಮೆ ಗಾಂಧಿ ಪರಿವಾರವನ್ನೇ ಬಯಸುತ್ತಿದ್ದಾರೆ.

ಇದನ್ನೂ ಓದಿ: ಗಾಂಧಿ ಪರಿವಾರದ ಅತ್ಯಾಪ್ತ ಅಮೇಥಿ ಲೋಕಸಭಾ ಕ್ಷೇತ್ರ.. ಅದರ ಚುನಾವಣಾ ರಾಜಕೀಯದ ಚರಿತ್ರೆ ಹೇಗಿದೆ..?

ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಮೇಲೆ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅಮೇಥಿ ಜನ ಈಗ ಗಾಂಧಿ ಪರಿವಾರವನ್ನೇ ಎದುರು ನೋಡುತ್ತಿದ್ದಾರೆ. ನಾನು ಸ್ಪರ್ಧಿಸುವುದನ್ನೇ ಎದುರು ನೋಡುತ್ತಿದ್ದಾರೆ. ನನ್ನ ರಾಜಕೀಯ ಕ್ಷೇತ್ರದ ಆರಂಭ ಅಮೇಥಿಯಿಂದಲೇ ಆಗಬೇಕು ಎಂಬ ಹೇಳಿಕೆ ನೀಡಿದ್ದಾರೆ.

ಹಾಲಿ ಸಂಸದೆ ಸ್ಮೃತಿ ಇರಾನಿ ಅವರಿಂದ ಅಮೇಥಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಗಾಂಧಿ ಕುಟುಂಬದ ವಿರುದ್ಧ ಮಾತನಾಡುವುದನ್ನ ಬಿಟ್ಟು ಬೇರೆ ಏನನ್ನು ಮಾಡಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗಿದೆ. ರಾಯ್‌ಬರೇಲಿ, ಅಮೇಥಿ ಯಾವುದೇ ಲೋಕಸಭಾ ಕ್ಷೇತ್ರವಾದರೂ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವವರ ಅಗತ್ಯವಿದೆ ಎಂದಿದ್ದಾರೆ.

ಈ ಮೂಲಕ ರಾಬರ್ಟ್ ವಾದ್ರಾ ಅವರು ಇದೇ ಮೊದಲ ಬಾರಿಗೆ ರಾಜಕೀಯ ಎಂಟ್ರಿ ಆಗುವ ಮಹತ್ವದ ಸುಳಿವು ನೀಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅಮೇಥಿಯಿಂದ ಯಾರು ಸ್ಪರ್ಧಿಸುತ್ತಾರೆ ಅನ್ನೋ ಕುತೂಹಲದ ಮಧ್ಯೆ ರಾಬರ್ಟ್ ವಾದ್ರಾ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೇಥಿ ರಣರಂಗಕ್ಕೆ ರಾಬರ್ಟ್‌ ವಾದ್ರಾ ಎಂಟ್ರಿ; ಸ್ಮೃತಿ ಇರಾನಿಗೆ ಟಕ್ಕರ್ ಕೊಡ್ತಾರಾ ಪ್ರಿಯಾಂಕಾ ಪತಿ?

https://newsfirstlive.com/wp-content/uploads/2024/04/Amethi-Robert-Vadra.jpg

Load More