/newsfirstlive-kannada/media/post_attachments/wp-content/uploads/2024/07/Chahal_RCB.jpg)
ರಾಯಲ್​ ಚಾಲೆಂಜರ್ಸ್​ ತಂಡದ ಮಾಜಿ ಕ್ರಿಕೆಟರ್​​ ರಾಬಿನ್ ಉತ್ತಪ್ಪ. ಇವರನ್ನು ಬೆದರಿಸಿ ಐಪಿಎಲ್ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿದ್ದ ಆಘಾತಕಾರಿ ವಿಚಾರವೀಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತಾಡಿದ ರಾಬಿನ್ ಉತ್ತಪ್ಪ, ತಮಗೆ ಐಪಿಎಲ್​ನಲ್ಲಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ. 2009ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸಂದರ್ಭದಲ್ಲಿ ತನಗೆ ಬೆದರಿಕೆಯೊಡ್ಡಿ ಐಪಿಎಲ್ ಟ್ರಾನ್ಸ್​ಫರ್ ಮಾಡಿಸಿಕೊಂಡಿದ್ದರು ಎಂಬ ವಿಚಾರ ಬಹಿರಂಗಪಡಿಸಿದ್ದಾರೆ.
ರಾಬಿನ್​ ಉತ್ತಪ್ಪ ಹೇಳಿದ್ದೇನು?
2009ರಲ್ಲಿ ನನಗೆ ಬೆದರಿಕೆ ಹಾಕಿ ಐಪಿಎಲ್ ಟ್ರಾನ್ಸ್​ಫರ್ ಮಾಡಿಸಿಕೊಂಡಿದ್ದರು. ಈ ಟ್ರಾನ್ಸ್​ಫರ್​​ಗೆ ನಾನು ಒಪ್ಪಿರಲಿರಲಿಲ್ಲ. ಟ್ರಾನ್ಸ್​ಫರ್​ ಪೇಪರ್‌ಗಳಿಗೆ ಸಹಿ ಹಾಕಲು ಆಗಲ್ಲ ಎಂದಿದ್ದೆ. ನೀವು ಈ ಟ್ರೇಡ್ ಪತ್ರಗಳಿಗೆ ಸಹಿ ಮಾಡದಿದ್ರೆ, ತಂಡದಲ್ಲಿ ಆಡಲು ಅವಕಾಶ ನೀಡಲ್ಲ ಎಂದು ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಉಸ್ತುವಾರಿ ಬೆದರಿಕೆ ಹಾಕಿದ್ದರು ಎಂದರು ಉತ್ತಪ್ಪ.
Robin Uthappa's candid sharing of his mental health challenges highlights the personal nature of depression and its varied impacts. As a prominent cricketer, Uthappa has openly discussed his struggles with anxiety and depression, #robinuthappa#ipl#msdhoni#CSK#GujaratTitanspic.twitter.com/NAHLzZPHZD
— MANAS FOUNDATION (@ManasFoundation)
Robin Uthappa's candid sharing of his mental health challenges highlights the personal nature of depression and its varied impacts. As a prominent cricketer, Uthappa has openly discussed his struggles with anxiety and depression, #robinuthappa#ipl#msdhoni#CSK#GujaratTitanspic.twitter.com/NAHLzZPHZD
— MANAS FOUNDATION (@ManasFoundation) August 30, 2024
">August 30, 2024
ಇನ್ನು, ಈ ಬೆಳವಣಿಗೆ ನಂತರ ನಾನು ಖಿನ್ನತೆಗೆ ಒಳಗಾದೆ. ನಾನು 2009ರಲ್ಲಿ ಆರ್​ಸಿಬಿ ಪರ ಉತ್ತಮವಾಗಿ ಆಡಿದೆ. ಆದರೆ 2011 ರಲ್ಲಿ ನಾನು ನನ್ನ ಮೇಲಿನ ಸಂಪೂರ್ಣ ಕಂಟ್ರೋಲ್ ಕಳೆದುಕೊಂಡಿದ್ದೆ. ನನ್ನ ತಾಯಿ ನೆರವಿಗೆ ನಿಂತರು. ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು ಎಂದರು.
ಇದನ್ನೂ ಓದಿ: 7 ಪಂದ್ಯದಲ್ಲಿ ಕೇವಲ 84 ರನ್; ದ್ರಾವಿಡ್​ ಪುತ್ರ ಸಮಿತ್​ ಕಳಪೆ ಪ್ರದರ್ಶನಕ್ಕೆ ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us