ಸುಂದರ ಬೆಂಗಳೂರನ್ನು ಮತ್ತಷ್ಟು ಅಂದವಾಗಿಡಲು ರೋಬೋ.. ಮಳೆ ಬಂದ್ರೂ ಚಿಂತೆ ಮಾಡಬೇಕಾಗಿಲ್ಲ..

author-image
Ganesh
ಸುಂದರ ಬೆಂಗಳೂರನ್ನು ಮತ್ತಷ್ಟು ಅಂದವಾಗಿಡಲು ರೋಬೋ.. ಮಳೆ ಬಂದ್ರೂ ಚಿಂತೆ ಮಾಡಬೇಕಾಗಿಲ್ಲ..
Advertisment
  • ಗ್ರೇಟರ್ ಬೆಂಗಳೂರು ಅಥಾರಿಟಿಯಿಂದ ಮಾಸ್ಟರ್ ಪ್ಲಾನ್
  • ‘ಬ್ಯಾಂಡಿಕೂಟ್’ ರೊಬೋಟ್ ಹೇಗೆ ಕೆಲಸ ಮಾಡ್ತದೆ..?
  • ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ

ಮಳೆ ಬಂತು ಅಂದ್ರೆ ರಾಜಧಾನಿ ಜನ್ರಿಗೆ ಇನ್ನಿಲ್ಲದ ಕಸರತ್ತು. ಮಳೆ ಬಂದ್ರೆ.. ಚರಂಡಿ ಬ್ಲಾಕ್​​, ಸ್ವಚ್ಛತೆ ಕಥೆ ಕೇಳ್ಬೇಕಾ? ಆ ಟೈಮ್​ನಲ್ಲಿ ಸವಾರರ ಕಸರತ್ತಿನ ಸಾಹಸ.. ಚರಂಡಿ ಸ್ವಚ್ಛತೆ ವಿಷ್ಯವಂತೂ ಅಧಿಕಾರಿಗಳಿಗೆ ಹೈಪರ್​ ತಲೆ ನೋವು.. ಜನರ ಶಾಪ ಕೇಳಿ ಕೇಳಿ ಬೆಂಡಾದ ಆಫೀಸರ್ಸ್​​ ಇದಕ್ಕಂತನೇ ಬಳಸ್ತಿರೋ ಆಯುಧವೇ ಈ ಬ್ಯಾಂಡಿಕೂಟ್ ರೋಬೋಟ್​​​.

ಇದನ್ನೂ ಓದಿ: ಪ್ಲೇ-ಆಫ್ ಎಂಟ್ರಿ ಖುಷಿಯಲ್ಲಿ ಮೈಮರೆತರೆ ಕಷ್ಟ.. ಆರ್​ಸಿಬಿ ಮುಂದಿನ ಪಂದ್ಯ ಯಾವಾಗ?

publive-image

ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಅಥಾರಿಟಿ ಆಗಿ ಬದ್ಲಾದ ಮೇಲೆ ಟೆಕ್ನಾಲಜಿ ಮೊರೆ ಹೋಗಿದೆ. ಬ್ಯಾಂಡಿಕೂಟ್​​ ಹೆಸರಿನ ಈ ರೋಬೋಟ್​ ಬಳಸಿ ಸ್ವಚ್ಛತಾ ಕಾರ್ಯಕ್ಕೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ಲ್ಯಾನ್​ ಮಾಡಿದೆ. ಈಗಾಗ್ಲೇ ಚೆನ್ನೈ, ತಿರುವನಂತಪುರ ಸೇರಿ ಹಲವೆಡೆ ಈ ರೋಬೋಟ್​​ ಬಳಕೆಯಾಗ್ತಿದೆ. ಹೀಗಾಗಿ ರಾಜಧಾನಿಯಲ್ಲೂ ಇದೇ ಬ್ಯಾಂಡಿಕೂಟ್​​ ತಂತ್ರಜ್ಞಾನ ಜಾರಿಗೆ ಪ್ಲ್ಯಾನ್​ ಮಾಡ್ಲಾಗಿದೆ.

ಇದನ್ನೂ ಓದಿ: ಕಲಿಯುಗದ ಮಹದೇಶ್ವರ, ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯ

publive-image

‘ಬ್ಯಾಂಡಿಕೂಟ್’ ಕೆಲಸ ಹೇಗಿದೆ?

  • ಸೆಮಿ ಸ್ವಯಂಚಾಲಿತ 50 ಕೆಜಿ ತೂಕದ ಬ್ಯಾಂಡಿಕೂಟ್​​ ರೋಬೋ
  •  ಚರಂಡಿಯ ಮೂಲೆ ಮೂಲೆಯ ಘನ ತಾಜ್ಯ ವಸ್ತು ಹೀರಿಕೊಳ್ಳುತ್ತೆ
  •  ಎಲ್ಲಾ ತ್ಯಾಜ್ಯ ಹೊರತೆಗೆದು ಬಕೆಟ್​ನಲ್ಲಿ ಸಂಗ್ರಹಿಸಿ, ಸ್ವಚ್ಛಗೊಳಿಸುತ್ತೆ
  •  ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ
  •  ರೋಬೋ 4 ಚಕ್ರ ಹೊಂದಿದ್ದು, ಕಸವನ್ನ ಸುಗಮವಾಗಿ ಸಾಗಿಸುತ್ತೆ

ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಸರ್ಕಾರದ ಈ ನಿರ್ಧಾರದಿಂದ ಫೀಸ್​​ ಡಬಲ್ ಆಗೋ ಸಾಧ್ಯತೆ

publive-image

ಅತ್ತ ರಾಜಧಾನಿಗೆ ಬ್ಯಾಂಡಿಕೂಟ್​​ ಪರಿಚಯಿಸಲು ಅಧಿಕಾರಿಗಳು ರೆಡಿಯಾಗಿದ್ರೆ ಇತ್ತ ಸಿಟಿ ಜನ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.. ರೋಬೋಟ್ ಹೆಸರಲ್ಲಿ ಜನರ ಹಣ ಲೂಟಿ ಮಾಡಬೇಡಿ ಅಂತಿದ್ದಾರೆ. ಒಟ್ಟಾರೆ, ಬೆಂಗಳೂರಿನ ಮ್ಯಾನ್​ಹೋಲ್, ಡ್ರೈನೇಜ್‌​ ಸ್ವಚ್ಛತೆಗೆ ಬ್ಯಾಂಡಿಕೂಟ್​​ ರೋಬೋಟ್​ ಬಳಕೆಗೆ ಅಧಿಕಾರಿಗಳು ನಿರ್ಧರಿಸಿದ್ದು, ಇದು ಜನ್ರಿಗೆ ಸಹಕಾರಿಯಾದ್ರೆ ಓಕೆ. ಆದ್ರೆ ರೋಬೋ ಹೆಸರನಲ್ಲಿ ಜನರ ದಡ್ಡು ಪೋಲಾಗಬಾರದಷ್ಟೇ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ವರುಣನ ಅಬ್ಬರ.. ಮಳೆಯಿಂದ ಹಲವೆಡೆ ಅವಾಂತರಗಳು; ಎಲ್ಲಿ? ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment