ವಿಶ್ವದ ಮೊಟ್ಟ ಮೊದಲ ಕೇಸ್​.. ರೋಬೋಟ್ ಆತ್ಮಹತ್ಯೆಗೆ ಶರಣು..!

author-image
Ganesh
Updated On
ವಿಶ್ವದ ಮೊಟ್ಟ ಮೊದಲ ಕೇಸ್​.. ರೋಬೋಟ್ ಆತ್ಮಹತ್ಯೆಗೆ ಶರಣು..!
Advertisment
  • ರೋಬೋಟ್ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲು
  • ಮೆಟ್ಟಿಲುಗಳಿಂದ ಜಿಗಿದು ಸಾವನ್ನಪ್ಪಿರುವ ಬಗ್ಗೆ ಮಾಹಿತಿ
  • ರೋಬೋಟ್​​ನ ಭಾಗಗಳ ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ

ಇಡೀ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಕೂಡ ಒಂದು. ಇಷ್ಟುದಿನ ಮನುಷ್ಯರು, ಭಾವನೆಗಳನ್ನು ಹೊಂದಿರುವ ಪ್ರಾಣಿಗಳು ಸಾವಿಗೆ ಶರಣಾಗಿರುವ ಬಗ್ಗೆ ಕೇಳಿದ್ದೀರಿ. ಆದರೆ ರೋಬೊಟ್​ಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಬಗ್ಗೆ ನೀವು ಕೇಳಿರಲಿಕ್ಕಿಲ್ಲ.

ಅಚ್ಚರಿ ಹಾಗೂ ಆಘಾತಕಾರಿ ವಿಚಾರವೊಂದು ಹೊರಬಂದಿದೆ. ದಕ್ಷಿಣ ಕೊರಿಯಾದಲ್ಲಿ ರೋಬೋಟ್ ಆತ್ಮಹತ್ಯೆಗೆ ಶರಣಾಗಿದೆ. ಮಧ್ಯ ದಕ್ಷಿಣ ಕೊರಿಯಾದ ಪುರಸಭೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಬೋಟ್​ ಮೆಟ್ಟಿಲುಗಳ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದೆ ಎಂದು ವರದಿಯಾಗಿದೆ. ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿರುವ ವರದಿ ಇದಾಗಿದೆ.

ಇದನ್ನೂ ಓದಿ:ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ದಾರುಣ ಸಾವು

publive-image

ಆತ್ಮಹತ್ಯೆ ಮಾಡಿಕೊಂಡ ಬಳಿಕ ರೋಬೋಟ್​ನ ಭಾಗಗಳನ್ನು ಸಂಗ್ರಹಿಸಲಾಗಿದೆ. ಮತ್ತು ಅದನ್ನು ವಿನ್ಯಾಸಗೊಳಿಸಿದ ಕಂಪನಿಯು ವಿಶ್ಲೇಷಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತ್ಮಹತ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಧಿಕಾರಿ.. ಮುನ್ಸಿಪಾಲ್ ಕಾರ್ಪೊರೇಷನ್​​ನ ಕೆಲಸದಲ್ಲಿ ರೋಬೋಟ್ ಸಹಾಯ ಮಾಡುತ್ತಿತ್ತು. ಕಳೆದ ಒಂದು ವರ್ಷದಿಂದ ಗುಮಿ ನಗರದ ನಿವಾಸಿಗಳಿಗೆ ಆಡಳಿತಾತ್ಮಕ ಕೆಲಸದಲ್ಲಿ ಬ್ಯುಸಿ ಆಗಿತ್ತು. ಕಳೆದ ವಾರ ಮೆಟ್ಟಿಲುಗಳ ಕೆಳಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ರೋಬೋಟ್ ಪತ್ತೆಯಾಗಿದೆ. ಪ್ರತ್ಯಕ್ಷದರ್ಶಿಗಳು ರೋಬೋಟ್ ಬೀಳುವ ಮೊದಲು ಓಡಾಡುತ್ತಿರೋದನ್ನು ನೋಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕೆಲಸ ಮಾಡುತ್ತಿತ್ತು. ಯಾಕೆ ಹಾಗೆ ಮಾಡಿಕೊಂಡಿತು ಅನ್ನೋದ್ರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೋಬೋಟ್​ನ ಭಾಗಗಳನ್ನು ಸಂಗ್ರಹಿಸಲಾಗಿದೆ. ಮೃತ ರೋಬೋಟ್​ ಅಧಿಕೃತವಾಗಿ ಪಾಲಿಕೆಯ ಭಾಗವಾಗಿತ್ತು. ಕ್ಯಾಲಿಫೋರ್ನಿಯಾದ ಬೇರ್ ರೋಬೋಟಿಕ್ಸ್​ ಇದನ್ನು ಅಭಿವೃದ್ಧಿಪಡಿಸಿತ್ತು. ಇದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಕೆಲಸ ಮಾಡುತ್ತಿತ್ತು. ತನ್ನದೆಯಾದ ಸೇವಾ ಕಾರ್ಡ್​​ ಕೂಡ ಹೊಂದಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ:ಪ್ರಿಯತಮೆ ಮೇಲೆ ಗುಂಡಿನ ಸುರಿಮಳೆಗೈದ ಪ್ರಿಯಕರ.. ಬಳಿಕ ತಾನೂ ಸಾವನ್ನಪ್ಪಿದ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment