/newsfirstlive-kannada/media/post_attachments/wp-content/uploads/2024/10/Tesla.jpg)
ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ತನ್ನ ಬಹುನಿರೀಕ್ಷಿತ ರೋಬೋಟ್ಯಾಕ್ಸಿಯನ್ನು ಗುರುವಾರದಂದು ಪರಿಚಯಿಸಿದೆ. ಹಾಲಿವುಡ್ ಸ್ಟುಡಿಯೋದಲ್ಲಿ ನೂತನ ರೋಬೋಟ್ಯಾಕ್ಸಿಯನ್ನು ರಾತ್ರಿ ಅನಾವರಣಗೊಳಿಸಿದೆ.
ಎಲಾನ್ ಮಸ್ಕ್ ಪರಿಚಯಿಸಿರುವ ರೋಬೋಟ್ಯಾಕ್ಸಿ AI ಚಾಲಿತವಾಗಿದ್ದು, ಸ್ಟೀರಿಂಗ್, ಪೆಡಲ್ಗಳನ್ನು ಹೊಂದಿಲ್ಲ. ಸ್ವಾಯತ್ತ ಚಾಲನಾ ತಂತ್ರಜ್ಞಾನದಲ್ಲಿ ಮಾನವ ಹಸ್ತಕ್ಷೇಪವಿಲ್ಲದೆ ವಾಹನವನ್ನು ಓಡಿಸಬಹುದಾಗಿದೆ.
ಇದನ್ನೂ ಓದಿ: ನಿಮ್ಮ ಫೋನ್ನಲ್ಲಿ ಇವರ ನಂಬರ್ ಇದೆಯಾ? ಇಲ್ಲದಿದ್ರೆ ಈಗಲೇ ಸೇವ್ ಮಾಡಿಕೊಳ್ಳಿ..
ಟೆಸ್ಲಾ ಕಂಪನಿ 9 ವರ್ಷಗಳ ಹಿಂದೆ ಸ್ವಯಂ ಚಾಲನೆಯತ್ತ ಹೆಚ್ಚು ಒತ್ತು ನೀಡಲು ಶುರುಮಾಡಿತ್ತು. ಆದರೆ ಅದರ ವಿಶ್ವಾಸಾರ್ಹತೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಆದರೀಗ ಪೂರ್ಣ ಸ್ವಯಂ ಚಾಲನೆ ಮಾಡುವ ರೋಬೋಟಿಕ್ ಟ್ಯಾಕ್ಸಿಯನ್ನ ಉತ್ಪಾದಿಸಿ ಅನಾವರಣ ಮಾಡಿದೆ. ಇದರಲ್ಲಿ ಪ್ರಯಾಣಿಕರು ನಿದ್ರಿಸಬಹುದಾಗಿದೆ. ತಲುಪುವ ಜಾಗದಲ್ಲಿ ಎಚ್ಚರಗೊಳ್ಳಬಹುದಾಗಿದೆ.
Robotaxi & Robovan pic.twitter.com/pI2neyJBSL
— Tesla (@Tesla)
Robotaxi & Robovan pic.twitter.com/pI2neyJBSL
— Tesla (@Tesla) October 11, 2024
">October 11, 2024
ಟೆಸ್ಲಾ ಪರಿಚಯಿಸಿರುವ ರೋಬೋಟ್ಯಾಕ್ಸಿ $30,000ಕ್ಕಿಂತ ಕಡಿಮೆ ವೆಚ್ಚದಲ್ಲಿ ಸಿಗಲಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. 2026ರ ವೇಳೆಗೆ ಈ ವಾಹನ ಗ್ರಾಹಕರ ಕೈಸೇರಲಿದೆ. ಮಾತ್ರವಲ್ಲದೆ, ಮುಂದಿನ ವರ್ಷ ಟೆಕ್ಸಾಸ್ ಮತ್ತು ಕಾಲಿಫೋರ್ನಿಯಾದಲ್ಲಿ ತನ್ನ ಜನಪ್ರಿಯ ಮಾಡೆಲ್ 3 ಮತ್ತು ಮಾಡೆಲ್ ವೈ ವಾಹನಗಳಲ್ಲಿ ಪೂರ್ಣ ಸ್ವಯಂ ಚಾಲನಾ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ವರ ಕುದುರೆ ಮೇಲೆ ಕೂರುವಂತಿಲ್ಲ; ಕಾರಣ ಕೇಳಿದ್ರೆ ಶಾಕ್ ಆಗೋದು ಪಕ್ಕಾ!
ನೂತನ ರೋಬೋಟ್ಯಾಕ್ಸಿ ಸ್ವಯಂ ಚಾಲನೆಯಲ್ಲಿ ಸಾಗುವುದರ ಜೊತೆಗೆ 20 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ನೋಡಲು ಮಿನಿ ಬಸ್ನಂತೆ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ