newsfirstkannada.com

×

Robotaxi: ಸ್ಟೀರಿಂಗ್​ ಇಲ್ಲ, ಪೆಡಲ್​ ಇಲ್ಲ.. AI ಚಾಲಿತ ರೋಬೋಟ್ಯಾಕ್ಸಿ ಪರಿಚಯಿಸಿದ ಎಲಾನ್​ ಮಸ್ಕ್​

Share :

Published October 12, 2024 at 8:07am

Update October 12, 2024 at 8:28am

    ಟೆಸ್ಲಾ ಕಂಪನಿ ಪರಿಚಯಿಸಿದೆ ಹೊಸ ರೋಬೋಟ್ಯಾಕ್ಸಿ

    ಹಾಲಿವುಡ್​ ಸ್ಟುಡಿಯೋದಲ್ಲಿ ನೂತನ ವಾಹನ ಬಿಡುಗಡೆ

    ಬೆಲೆ ಎಷ್ಟು ಗೊತ್ತಾ? ಇಷ್ಟು ಕಡಿಮೆಗೆ ಖರೀದಿಗೆ ಸಿಗುತ್ತಾ?

ಎಲಾನ್​ ಮಸ್ಕ್​ ಒಡೆತನದ ಟೆಸ್ಲಾ ಕಂಪನಿ ತನ್ನ ಬಹುನಿರೀಕ್ಷಿತ ರೋಬೋಟ್ಯಾಕ್ಸಿಯನ್ನು ಗುರುವಾರದಂದು ಪರಿಚಯಿಸಿದೆ. ಹಾಲಿವುಡ್​ ಸ್ಟುಡಿಯೋದಲ್ಲಿ ನೂತನ ರೋಬೋಟ್ಯಾಕ್ಸಿಯನ್ನು ರಾತ್ರಿ ಅನಾವರಣಗೊಳಿಸಿದೆ.

ಎಲಾನ್​ ಮಸ್ಕ್​ ಪರಿಚಯಿಸಿರುವ ರೋಬೋಟ್ಯಾಕ್ಸಿ AI ಚಾಲಿತವಾಗಿದ್ದು, ಸ್ಟೀರಿಂಗ್​​, ಪೆಡಲ್​ಗಳನ್ನು ಹೊಂದಿಲ್ಲ. ಸ್ವಾಯತ್ತ ಚಾಲನಾ ತಂತ್ರಜ್ಞಾನದಲ್ಲಿ ಮಾನವ ಹಸ್ತಕ್ಷೇಪವಿಲ್ಲದೆ ವಾಹನವನ್ನು ಓಡಿಸಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಫೋನ್​​ನಲ್ಲಿ ಇವರ ನಂಬರ್ ಇದೆಯಾ? ಇಲ್ಲದಿದ್ರೆ ಈಗಲೇ ಸೇವ್ ಮಾಡಿಕೊಳ್ಳಿ..

ಟೆಸ್ಲಾ ಕಂಪನಿ 9 ವರ್ಷಗಳ ಹಿಂದೆ ಸ್ವಯಂ ಚಾಲನೆಯತ್ತ ಹೆಚ್ಚು ಒತ್ತು ನೀಡಲು ಶುರುಮಾಡಿತ್ತು. ಆದರೆ ಅದರ ವಿಶ್ವಾಸಾರ್ಹತೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಆದರೀಗ ಪೂರ್ಣ ಸ್ವಯಂ ಚಾಲನೆ ಮಾಡುವ ರೋಬೋಟಿಕ್​​ ಟ್ಯಾಕ್ಸಿಯನ್ನ ಉತ್ಪಾದಿಸಿ ಅನಾವರಣ ಮಾಡಿದೆ. ಇದರಲ್ಲಿ ಪ್ರಯಾಣಿಕರು ನಿದ್ರಿಸಬಹುದಾಗಿದೆ. ತಲುಪುವ ಜಾಗದಲ್ಲಿ ಎಚ್ಚರಗೊಳ್ಳಬಹುದಾಗಿದೆ.

ಟೆಸ್ಲಾ ಪರಿಚಯಿಸಿರುವ ರೋಬೋಟ್ಯಾಕ್ಸಿ $30,000ಕ್ಕಿಂತ ಕಡಿಮೆ ವೆಚ್ಚದಲ್ಲಿ ಸಿಗಲಿದೆ ಎಂದು ಎಲಾನ್​ ಮಸ್ಕ್​ ಹೇಳಿದ್ದಾರೆ. 2026ರ ವೇಳೆಗೆ ಈ ವಾಹನ ಗ್ರಾಹಕರ ಕೈಸೇರಲಿದೆ. ಮಾತ್ರವಲ್ಲದೆ, ಮುಂದಿನ ವರ್ಷ ಟೆಕ್ಸಾಸ್​​ ಮತ್ತು ಕಾಲಿಫೋರ್ನಿಯಾದಲ್ಲಿ ತನ್ನ ಜನಪ್ರಿಯ ಮಾಡೆಲ್​​ 3 ಮತ್ತು ಮಾಡೆಲ್​ ವೈ ವಾಹನಗಳಲ್ಲಿ ಪೂರ್ಣ ಸ್ವಯಂ ಚಾಲನಾ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ: ಈ ಗ್ರಾಮದಲ್ಲಿ ವರ ಕುದುರೆ ಮೇಲೆ ಕೂರುವಂತಿಲ್ಲ; ಕಾರಣ ಕೇಳಿದ್ರೆ ಶಾಕ್​ ಆಗೋದು ಪಕ್ಕಾ!

ನೂತನ ರೋಬೋಟ್ಯಾಕ್ಸಿ ಸ್ವಯಂ ಚಾಲನೆಯಲ್ಲಿ ಸಾಗುವುದರ ಜೊತೆಗೆ 20 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ನೋಡಲು ಮಿನಿ ಬಸ್​ನಂತೆ ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Robotaxi: ಸ್ಟೀರಿಂಗ್​ ಇಲ್ಲ, ಪೆಡಲ್​ ಇಲ್ಲ.. AI ಚಾಲಿತ ರೋಬೋಟ್ಯಾಕ್ಸಿ ಪರಿಚಯಿಸಿದ ಎಲಾನ್​ ಮಸ್ಕ್​

https://newsfirstlive.com/wp-content/uploads/2024/10/Tesla.jpg

Load More