newsfirstkannada.com

ಭಾರತದ ಆರ್ಥಿಕ ಬೆಳವಣಿಗೆಗೆ ಅಚ್ಚರಿಯ ವೇಗ; GDP ಶೇ 8.4ರಷ್ಟು ಬೆಳವಣಿಗೆ.. ಮೋದಿ ಏನಂದ್ರು ಗೊತ್ತಾ..?

Share :

Published March 1, 2024 at 6:47am

    ಮೂರು ತ್ರೈಮಾಸಿಕದಲ್ಲಿ ಜಿಡಿಪಿ ಗಣನೀಯ ಏರಿಕೆ

    2023-24ರ ಮೊದಲ ಕ್ವಾರ್ಟರ್‌ನಲ್ಲಿ ಶೇ.7.8 ಇದ್ದ ಜಿಡಿಪಿ

    ಈ ಹಣಕಾಸು ವರ್ಷದ 2ನೇ ಕ್ವಾರ್ಟರ್‌ನಲ್ಲಿ ಶೇ.7.6 ಇತ್ತು

ಜಿಡಿಪಿ.. ಒಂದು ದೇಶದ ಆರ್ಥಿಕ ಪ್ರಗತಿಯ ಅಳತೆಗೋಲು. ಆರ್ಥಿಕ ಚಟುವಟಿಕೆಯ ಮಾಪನ. ಇದೀಗ ಭಾರತದ ಜಿಡಿಪಿ ಕಳೆದ ವರ್ಷದ ತ್ರೈಮಾಸಿಕದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಜಿಡಿಪಿಯ ವೇಗ ಹೆಚ್ಚಿದೆ. ಇದು ಲೋಕಸಮರದ ಹೊತ್ತಲ್ಲಿ ಬಿಜೆಪಿ ಆಡಳಿತಕ್ಕೆ ಮತ್ತಷ್ಟು ಬೂಸ್ಟ್‌ ಕೊಟ್ಟಿದೆ.

ಭಾರತದ ಆರ್ಥಿಕತೆ ಮತ್ತೊಮ್ಮೆ ಎಲ್ಲರ ನಿರೀಕ್ಷೆಗಳನ್ನ ಮೀರಿಸಿ ವೇಗವಾಗಿ ಬೆಳೆದಿದೆ. 023-24ರ ಹಣಕಾಸು ವರ್ಷದ ಮೂರನೇ ಕ್ವಾರ್ಟರ್​ಗೆ ವಿವಿಧ ಆರ್ಥಿಕ ತಜ್ಞರ ಎಣಿಕೆ ತಲೆಕೆಳಗಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತದ ಆರ್ಥಿಕತೆಗೆ ಭಾರೀ ವೇಗ ಸಿಕ್ಕಿದೆ.

ಭಾರತದ ಆರ್ಥಿಕ ಬೆಳವಣಿಗೆಗೆ ಅಚ್ಚರಿಯ ವೇಗ
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ ಭಾರೀ ಏರಿಕೆ ಕಂಡಿದೆ. ಮೊನ್ನೆಯವರೆಗೂ ಹಲವು ಆರ್ಥಿಕ ತಜ್ಞರು ಕಳೆದ ತ್ರೈಮಾಸಿಕ ಕ್ವಾರ್ಟರ್​ನಲ್ಲಿ ಶೇ. 6ರಿಂದ 7ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದ್ರು. ಜೊತೆಗೆ ಆರ್​ಬಿಐ ಮಾಡಿದ ಅಂದಾಜು ಕೂಡ ಶೇ. 7ರ ಆಸುಪಾಸು ಇತ್ತು. ಆದ್ರೀಗ ಭಾರತದ ನೈಜ ಜಿಡಿಪಿ ವೃದ್ಧಿ ಎಲ್ಲರನ್ನೂ ಅಚ್ಚರಿಗೊಳಿಸುವ ಮಟ್ಟಿಗೆ ದಾಪುಗಾಲಿಟ್ಟಿದೆ.

ಜಿಡಿಪಿಗೆ ಆನೆ ಬಲ!

  • 2023-24ರ ಮೊದಲ ಕ್ವಾರ್ಟರ್‌ನಲ್ಲಿ ಶೇ.7.8 ಇದ್ದ ಜಿಡಿಪಿ
  • ಈ ಹಣಕಾಸು ವರ್ಷದ 2ನೇ ಕ್ವಾರ್ಟರ್‌ನಲ್ಲಿ ಶೇ.7.6 ಇತ್ತು
  • ಮೂರನೇ ಕ್ವಾರ್ಟರ್ ಇನ್ನೂ ಹೆಚ್ಚಿನ ಅಚ್ಚರಿ ಮೂಡಿಸಿದೆ
  • ಮೊದಲ ಮೂರು ಕ್ವಾರ್ಟರ್ ಅವಧಿಯಲ್ಲಿ ಜಿಡಿಪಿಗೆ ವೇಗ
  • ಜಿಡಿಪಿ ಬೆಳವಣಿಗೆ ಸರಾಸರಿ ಶೇ. 8ರ ಸಮೀಪಕ್ಕೆ ಬಂದಿತ್ತು
  • ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಶೇಕಡ 8.4ಕ್ಕೆ ಏರಿಕೆ
  • ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ ವೇಗ ಹೆಚ್ಚಳ

ಜಿಡಿಪಿ ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ
ಭಾರತದ ಜಿಡಿಪಿಯ ವೇಗ ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಇದು ವಿಕಸಿತ ಭಾರತ ರಚನೆಗೆ ಸಹಾಯಕ ಅಂತ ಅಭಿಪ್ರಾಯ ಪಟ್ಟಿದ್ದಾರೆ..

ವಿಕಸಿತ ಭಾರತಕ್ಕೆ ಸಹಾಯ!
2023-24ರ ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಜಿಡಿಪಿಯು ಶೇಕಡ 8.4ರಷ್ಟು ಬೆಳವಣಿಗೆ ಕಂಡಿದೆ.. ಇದು ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಅದರ ಸಾಮರ್ಥ್ಯವನ್ನು ತೋರಿಸುತ್ತದೆ. 140 ಕೋಟಿ ಭಾರತೀಯರು ಉತ್ತಮ ಜೀವನ ನಡೆಸಲು ಮತ್ತು ವಿಕಸಿತ ಭಾರತವನ್ನು ರಚಿಸಲು ಸಹಾಯ ಮಾಡುತ್ತದೆ. ಅಲ್ಲದೇ ವೇಗದ ಆರ್ಥಿಕ ಬೆಳವಣಿಗೆಯನ್ನು ತರಲು ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ –ನರೇಂದ್ರ ಮೋದಿ, ಪ್ರಧಾನಮಂತ್ರಿ

ಒಟ್ಟಾರೆ, ಲೋಕಸಭಾ ಚುನಾವಣೆ ಹೊತ್ತಲ್ಲಿ ಮೋದಿ ಸರ್ಕಾರಕ್ಕೆ ಈ ಬೆಳವಣಿಗೆ ಬೂಸ್ಟ್ ಕೊಟ್ಟಿದೆ.. ಜೊತೆಗೆ ದೇಶದ ಆರ್ಥಿಕತೆಯ ಬೆಳವಣಿಗೆಗೆ ಬೂಸ್ಟರ್‌ ಡೋಸ್‌ನಂತೆ ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಆರ್ಥಿಕ ಬೆಳವಣಿಗೆಗೆ ಅಚ್ಚರಿಯ ವೇಗ; GDP ಶೇ 8.4ರಷ್ಟು ಬೆಳವಣಿಗೆ.. ಮೋದಿ ಏನಂದ್ರು ಗೊತ್ತಾ..?

https://newsfirstlive.com/wp-content/uploads/2024/02/NIRMALA-SEETARAMAN-4.jpg

Load More