Advertisment

ಕಾವೇರಿ ನದಿ ದಡದಲ್ಲಿ ಸಿಕ್ತು ರಾಕೆಟ್​ ಲಾಂಚರ್​! ಇದು ಎಲ್ಲಿಂದ ಬಂತು?

author-image
AS Harshith
Updated On
ಕಾವೇರಿ ನದಿ ದಡದಲ್ಲಿ ಸಿಕ್ತು ರಾಕೆಟ್​ ಲಾಂಚರ್​! ಇದು ಎಲ್ಲಿಂದ ಬಂತು?
Advertisment
  • ಭಾರೀ ಕುತೂಹಲಕ್ಕೆ ಕಾರಣವಾದ ರಾಕೆಟ್​​ ಲಾಂಚರ್​
  • ರಾಕೆಟ್​ ಲಾಂಚರ್​ ಎಲ್ಲಿಂದ ಬಂತು? ಶುರುವಾಗಿದೆ ತನಿಖೆ
  • ದೇವಸ್ಥಾನದ ನದಿಯ ದಡದಲ್ಲಿ ಕಾಣಿಸಿದ ರಾಕೆಟ್​ ಲಾಂಚರ್​

ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ದೇವಸ್ಥಾನದ ಬಳಿ ಇರುವ ಕಾವೇರಿ ನದಿಯ ದಡದಲ್ಲಿ ರಾಕೆಟ್​ ಲಾಂಚರ್​ ಪತ್ತೆಯಾಗಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು ಅದನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ್ದಾರೆ.

Advertisment

ಬುಧವಾರದಂದು ಸಂಜೆ ಅಂದನಲ್ಲೂರು ದೇವಸ್ಥಾನ ಬಳಿ ಹರಿಯುವ ಕಾವೇರಿ ನದಿ ದಡದಲ್ಲಿ ರಾಕೆಟ್​ ಲಾಂಚರ್​ ಕಾಣಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಇದು ಮೊದಲು ಸಿಕ್ಕಿದೆ. ತಿಳಿ ನೀಲಿ ಮತ್ತು ಕಪ್ಪು ಲೋಹದ ವಸ್ತುವನ್ನು ಕಂಡ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶ್ವಾನದ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಕೊಟ್ಟ ದುಷ್ಟರು! ಇಬ್ಬರು ಕೈಗೆ ಸಿಗುವರೆಗೂ ವಿಡಿಯೋ ಹಂಚಿ ಎಂದ ನೆಟ್ಟಿಗರು

ಸ್ಥಳಕ್ಕೆ ಬಂದ ಪೊಲೀಸರು ರಾಕೆಟ್​ ಲಾಂಚರ್​ ಅನ್ನು 117 ಪದಾತಿ ದಳದ ಬೆಟಾಲಿಯನ್​ಗೆ ಹಸ್ತಾಂತರಿಸಿದ್ದಾರೆ. ಸದ್ಯ ಈ ಲಾಂಚರ್​ ಎಲ್ಲಿಂದ ಬಂತು? ಅದು ಹೇಗೆ ನದಿದಲ್ಲಿ ತೇಲಿ ಬಂತು? ಇವೆಲ್ಲದರ ಕುರಿತು ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment