ರಿಷಬ್​ ಶೆಟ್ಟಿಗೆ ರಾಕಿಂಗ್​ ಸ್ಟಾರ್​, ಜ್ಯೂನಿಯರ್​ NTR ಕಡೆಯಿಂದ ಬಂತು ಹೀಗೊಂದು ವಿಶ್​​.. ಏನಂದ್ರು?

author-image
AS Harshith
Updated On
ರಿಷಬ್​ ಶೆಟ್ಟಿಗೆ ರಾಕಿಂಗ್​ ಸ್ಟಾರ್​, ಜ್ಯೂನಿಯರ್​ NTR ಕಡೆಯಿಂದ ಬಂತು ಹೀಗೊಂದು ವಿಶ್​​.. ಏನಂದ್ರು?
Advertisment
  • 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿತರಣೆ
  • ಟ್ವೀಟ್​ ಮಾಡುವ ಮೂಲಕ ಶುಭಾಶಯ ತಿಳಿಸಿದ ಯಶ್​​
  • ರಿಷಬ್​ ಸಿನಿಮಾವನ್ನು ಹಾಡಿ ಹೊಗಳಿದ ಜ್ಯೂನಿಯರ್​ ಎನ್​ಟಿಆರ್

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಜೇತರಿಗೆ ನಟ ರಾಕಿಂಗ್​​ ಸ್ಟಾರ್​​ ಯಶ್​​, ಜ್ಯೂನಿಯರ್​ ಎನ್​ಟಿಆರ್​ ಶುಭಕೋರಿದ್ದಾರೆ. ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್​ನಲ್ಲಿ ನಟ ಯಶ್​, ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ರಿಷಭ್ ಶೆಟ್ಟಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಕಾಂತಾರ ಹಾಗೂ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್​ಗೆ ಶುಭಾಶಯ ಹೇಳಿದ್ದಾರೆ. ಮಾತ್ರವಲ್ಲದೆ, ನಿರ್ದೇಶಕ ಪ್ರಶಾಂತ್​ ನೀಲ್​ಗೆ ಧನ್ಯವಾದ ಸಮರ್ಪಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನಿಮಾಗಳು ಮಿಂಚುತ್ತಿರುವ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ.


">August 16, 2024

ಇದನ್ನೂ ಓದಿ: ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?


">August 16, 2024

ಟಾಲಿವುಡ್​ ನಟ ಜ್ಯೂನಿಯರ್​ ಎನ್​ಟಿಆರ್​ ಕೂಡ ಟ್ವೀಟ್​ ಮಾಡುವ ಮೂಲಕ ರಿಷಬ್​ ಶೆಟ್ಟಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾಂತಾರ ಸಿನಿಮಾಗೆ ಅರ್ಹವಾದ ಅತ್ಯುತ್ತಮ ನಟನ ಗೆಲುವು. ಮನಸ್ಸಿಗೆ ಮುದ ನೀಡುವ ನಿಮ್ಮ ಅಭಿನಯ ನನ್ನಲ್ಲಿ ಹುಬ್ಬೇರಿಸುತ್ತಿದೆ. ಜೊತೆಗೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಗೆದ್ದ ಕಾಂತಾರ ತಂಡಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ.


">August 16, 2024

ಇದಲ್ಲದೆ, ಜ್ಯೂನಿಯರ್​ ಎನ್​ಟಿಆರ್ ಅವರು ಯಶ್​​, ಪ್ರಶಾಂತ್​ ನೀಲ್​ ಮತ್ತು ಕೆಜಿಎಫ್​ ಸಿನಿಮಾ ತಂಡಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್​ ಮಾಡುವ ಮೂಲಕ ಕನ್ನಡದ ಎರಡು ನಟರು ಮತ್ತು ಅವರ ಸಿನಿಮಾಗೆ ಧನ್ಯವಾದ ಹೇಳಿದ್ದಾರೆ.


">August 16, 2024

ಸಂಸದ ಪ್ರತಾಪ್​ ಸಿಂಹ ಕೂಟ ಟ್ವೀಟ್​ ಮಾಡಿದ್ದಾರೆ. ಕಾಂತಾರ ಚಿತ್ರ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಶುಭಾಶಯಗಳು. ನಿಮ್ಮ ಅಪ್ರತಿಮ ಪ್ರತಿಭೆ ಮತ್ತು ಸಮರ್ಪಣೆ ನಿಮ್ಮನ್ನು ಕರುನಾಡಿನ ನಿಜವಾದ ರತ್ನವನ್ನಾಗಿ ಮಾಡಿದೆ. ನೀವು ಮುಂದೆ ಅನೇಕ ಸಾಧನೆ ಮಾಡಲಿದ್ದೀರಿ. ನಮಗೆಲ್ಲರಿಗೂ ನೀವು ಹೊಳೆಯುತ್ತಿರಿ ಮತ್ತು ಸ್ಫೂರ್ತಿ ನೀಡುತ್ತಿರಿ ಎಂದು ಬರೆದುಕೊಂಡಿದ್ದಾರೆ.


">August 16, 2024

ಕರ್ನಾಟಕ ಬಿಜೆಪಿ ಪಕ್ಷ ಕೂಡ ಟ್ವೀಟ್​ ಮಾಡುವ ಮೂಲಕ ರಿಷಬ್​ ಶೆಟ್ಟಿ ಮತ್ತು ಕಾಂತಾರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment