/newsfirstlive-kannada/media/post_attachments/wp-content/uploads/2025/01/YASH_BIRTH_DAY_1.jpg)
ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಜನುಮದಿನ. ಹುಟ್ಟುಹಬ್ಬವನ್ನು ಫ್ಯಾನ್ಸ್​ ಜೊತೆ ಆಚರಣೆ ಮಾಡುತ್ತಿಲ್ಲವಾದರೂ ಸಣ್ಣದಾಗಿ ಟಾಕ್ಸಿಕ್ ಚಿತ್ರತಂಡದ ಜೊತೆ ಸೆಲೆಬ್ರೆಷನ್ ಮಾಡಿದ್ದಾರೆ. ಇದರ ಜೊತೆಗೆ ಟಾಕ್ಸಿಕ್ ಮೂವಿಯ ಫಸ್ಟ್​ ಲುಕ್ ಬಿಡುಗಡೆ ಮಾಡಲಾಗಿದ್ದು ಯಶ್ ಮತ್ತೆ ಹೊಸ ಲುಕ್​ನಲ್ಲಿ ಅಭಿಮಾನಿಗಳಿಗೆ ಸರ್​ಪ್ರೈಸ್ ಕೊಟ್ಟಿದ್ದಾರೆ.
ಯಶ್ ಅವರ ಬರ್ತ್​ಡೇ ಹಿನ್ನೆಲೆಯಲ್ಲಿ ಅವರ ಟಾಕ್ಸಿಕ್ ಮೂವಿಯ ಫಸ್ಟ್ ಲುಕ್ ವಿಡಿಯೋ ರಿವೀಲ್ ಮಾಡಿದ್ದಾರೆ. ಇದರಲ್ಲಿ ಯಶ್ ಸಖತ್ ಸ್ಟೈಲೀಶ್ ಆಗಿ ಕಾಣಿಸಕೊಂಡಿದ್ದು ಹಾಲಿವುಡ್​ ಆ್ಯಕ್ಟರ್ ಅಂತೆ ಇದ್ದಾರೆ. ಸಿನಿಮಾ ಡ್ರಗ್ ಮಾಫಿಯಾ ಕುರಿತ ಕಥೆ ಇರಬಹುದು ಎಂದು ಊಹಿಸಿ ಹೇಳಬಹುದು. ಪಬ್​ನಲ್ಲಿರುವ ದೃಶ್ಯಗಳು ಫಸ್ಟ್​ ಲುಕ್​ನಲ್ಲಿ ಕಾಣಬಹುದಾಗಿದೆ.
/newsfirstlive-kannada/media/post_attachments/wp-content/uploads/2025/01/YASH-1.jpg)
ಇನ್ನು ರಿಲೀಸ್ ಮಾಡಿರುವ ವಿಡಿಯೋದಲ್ಲಿ ಎಲ್ಲ ವಿದೇಶಿ ಮಹಿಳೆಯರೇ ಪಬ್​ನಲ್ಲಿ ಡ್ಯಾನ್ಸ್ ಮಾಡುತ್ತಾ ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ. ಇಲ್ಲಿಗೆ ಕಾರಲ್ಲಿ ಬರುವ ಯಶ್ ಧಮ್ ಎಳೆಯುತ್ತಾ ಎಂಟ್ರಿ ಕೊಟ್ಟಿದ್ದಾರೆ. ಫಾರಿನ್ ಗರ್ಲ್​ ಜೊತೆ ರೊಮ್ಯಾನ್ಸ್ ಮಾಡಿ, ಅವರ ಮೇಲೆ ಬಾಟಲಿಯಲ್ಲಿನ ಮದ್ಯ ಸುರಿಯುವ ದೃಶ್ಯ ಕೂಡ ಇದೆ.
ಯಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೊದಲಿನಂದ ಹುಟ್ಟುಹಬ್ಬವನ್ನು ದೊಡ್ಡದಾಗಿ ಸಂಭ್ರಮದಿಂದ ಆಚರಣೆ ಮಾಡಿಕೊಳ್ಳದೇ ಚಿಕ್ಕದಾಗಿ ಆಚರಿಸಿಕೊಂಡಿದ್ದಾರೆ. ಅದು ಬೇರೆ ಮಂಗಳೂರಿನ ಬೀಚ್​ವೊಂದರಲ್ಲಿ ಮಧ್ಯರಾತ್ರಿ ಚಿತ್ರತಂಡದ ಸದಸ್ಯರ ಜೊತೆಗೂಡಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಕೆವಿಎನ್ ನಿರ್ಮಾಪಕರು, ಸಿನಿಮಾ ತಂಡದ ಇತರೆ ಸದಸ್ಯರು ಇದ್ದರು. ಮಂಗಳೂರಿನ ಕಡಲ ತೀರದಲ್ಲಿ ಮಧ್ಯರಾತ್ರಿ ಯಶ್ ಬರ್ತ್​ಡೇ ಕೇಕ್ ಕಟ್ ಮಾಡುವಾಗ ಅವರ ಕುಟುಂಬ ಕೂಡ ಭಾಗಿಯಾಗಿತ್ತು. ರಾಧಿಕಾ ಪಂಡಿತ್ ಹಾಗೂ ಇಬ್ಬರು ಮಕ್ಕಳು ಕೂಡ ವೈರಲ್ ಆದ ಫೋಟೋದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us