newsfirstkannada.com

ವಿದ್ಯುತ್ ಶಾಕ್​ಗೆ ಒಳಗಾಗಿದ್ದ ಯಶ್ ಅಭಿಮಾನಿಗಳು ಚೇತರಿಕೆ; ಘಟನೆ ನೆನೆದು ಕಣ್ಣೀರಿಟ್ಟ ಗಾಯಾಳು

Share :

Published January 11, 2024 at 1:46pm

Update January 11, 2024 at 1:49pm

  ಆಸ್ಪತ್ರೆಗೆ ಭೇಟಿ ಕೊಟ್ಟಾಗ ಯಶ್ ಏನ್ ಹೇಳಿದ್ರಂತೆ ಗೊತ್ತಾ..?

  ಕೌಟೌಟ್ ನಿಲ್ಲಿಸುವ ವೇಳೆ ಮೂವರು ಯಶ್ ಫ್ಯಾನ್ಸ್ ಸಾವು

  ಗಾಯಗೊಂಡಿದ್ದ ಇಬ್ಬರು ಚೇತರಿಕೆ, ವಾರ್ಡ್​ಗೆ ಶಿಫ್ಟ್

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಕಟೌಟ್ ನಿಲ್ಲಿಸುತ್ತಿದ್ದಾಗ ವಿದ್ಯುತ್ ಸ್ಪರ್ಷಿಸಿ ಮೂವರು ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಗಾಯಗೊಂಡಿದ್ದ ಇಬ್ಬರು ಅಭಿಮಾನಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರನ್ನು ತೀವ್ರ ನಿಗಾ ಘಟಕದಿಂದ ಜನರಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.

ಗಾಯಾಳು ಮಂಜುನಾಥ್ ಪೂಜಾರಿ ನ್ಯೂಸ್​ಫಸ್ಟ್ ಜೊತೆ ಮಾತನಾಡಿದರು. ಮೂವರು ಗೆಳೆಯರ ಸಾವಿನಿಂದ ಆಘಾತವಾಗಿದೆ. ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಬರ್ತ್​ಡೇ ಗ್ರ್ಯಾಂಡ್ ಆಗಿ ಆಚರಣೆಗೆ ಪ್ಲಾನ್ ಮಾಡಿದ್ದೇವು. ಎಲ್ಲಾ ಆಸೆ ದುರಂತದಲ್ಲಿ‌ ಮುಳುಗಿ ಹೋಯ್ತು. 8 ರಂದು ಬೆಳಗ್ಗೆ ಬೃಹತ್ ಕೇಕ್ ತಂದು ಅದ್ಧೂರಿ ಬರ್ತಡೇ ಆಚರಣೆಗೆ ತಯಾರಿ ಮಾಡಿದಾಗ ಹೀಗೆ ಆಯಿತು ಎಂದು ಕಣ್ಣೀರು ಇಟ್ಟರು.

ಜನವರಿ 7 ರಂದು ಎಂಟು ಜನ ಗೆಳೆಯರೆಲ್ಲರೂ ಸೇರಿ ಬೃಹತ್ ಕಟೌಟ್ ಮಾಡಿಸಿದ್ವಿ. ರಾತ್ರಿ 10 ಗಂಟೆವರೆಗೆ ಕಟೌಟ್ ರೆಡಿಯಾಗಿತ್ತು. ಮಧ್ಯರಾತ್ರಿ 12.30 ರ ವೇಳೆಗೆ ಎಲ್ಲರೂ ಸೇರಿ ಕಟೌಟ್ ಅಂಬೇಡ್ಕರ್ ನಗರದಲ್ಲಿ ಹಾಕುತ್ತಿದ್ದೇವು. ದೊಡ್ಡ ಕಟೌಟ್ ಎಲ್ಲರೂ ಸೇರಿ ಮೇಲೆತ್ತಿದಾಗ ತಂತಿಗೆ ತಾಗಿ ದುರಂತ ನಡೆದಿದೆ. 8 ಮಂದಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ‌‌. ಮೂವರಿಗೆ ಗಾಯವಾಗಿವೆ, ಇಬ್ಬರು ಪಾರಾಗಿದ್ದಾರೆ. ನಾನೂ ಕಟೌಟ್ ಹಿಡಿದಿದ್ದೆ, ತಂತಿಗೆ ಅದು ತಾಗಿದ್ದರಿಂದ ಹಾರಿ ನೆಲಕ್ಕೆ ಬಿದ್ದೆ. ತಲೆಗೆ ಬಲವಾಗಿ ಪೆಟ್ಟು ಬಿತ್ತು.

ಕೊನೆಗೆ ಜನರು ಬಂದು ನೀರು ಹಾಕಿ ಎಬ್ಬಿಸಿದ್ದರು. ಅಷ್ಟರಲ್ಲೇ ನನ್ನ ಮೂರು ಗೆಳೆಯರು ಸಾವನ್ನಪ್ಪಿದ್ದರು. ದುರಂತದ ಬಳಿಕ ಸ್ನೇಹಿತರ ಸುಟ್ಟ ದೇಹಗಳ ನೋಡಿ ಆಘಾತವಾಯ್ತು. ನಾನು, ಹನಮಂತ ಗಂಭೀರ ಗಾಯಗೊಂಡಿದ್ರಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮಗೆ ಯಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ಹೇಳಿದರು. ಇನ್ನೊಮ್ಮೆ ಈ ರೀತಿ ಮಾಡಲು ಹೋಗಬೇಡಿ ಎಂದಿದ್ದಾರೆ. ಇನ್ಮುಂದೆ ಯಾವ ಬರ್ತ್ ಡೇ ಆಚರಣೆಯ ಗೋಜಿಗೆ ಹೋಗುವುದಿಲ್ಲ ಎಂದು ಮಂಜುನಾಥ್ ಕಣ್ಣೀರು ಇಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯುತ್ ಶಾಕ್​ಗೆ ಒಳಗಾಗಿದ್ದ ಯಶ್ ಅಭಿಮಾನಿಗಳು ಚೇತರಿಕೆ; ಘಟನೆ ನೆನೆದು ಕಣ್ಣೀರಿಟ್ಟ ಗಾಯಾಳು

https://newsfirstlive.com/wp-content/uploads/2024/01/YASH-FAN-1.jpg

Load More