newsfirstkannada.com

ಮೃತ ಅಭಿಮಾನಿಗಳ ಕುಟುಂಬಕ್ಕೆ ಪರಿಹಾರ ನೀಡಿದ ರಾಕಿಂಗ್ ಸ್ಟಾರ್ ಯಶ್.. ಎಷ್ಟು ಲಕ್ಷ ರೂ ಕೊಟ್ಟಿದ್ದಾರೆ..?

Share :

Published January 17, 2024 at 12:23pm

Update January 17, 2024 at 12:30pm

  ಯಶ್ ಬರ್ತ್​ಡೇ ದಿನ ಮೂವರು ಅಭಿಮಾನಿಗಳು ಸಾವು

  ಕಟೌಟ್ ನಿಲ್ಲಿಸುವಾಗ ವಿದ್ಯುತ್ ಹರಿದು ಸಾವನ್ನಪ್ಪಿದ್ದರು

  ಯಶ್ ಆಪ್ತರು ಮನೆಗೆ ತೆರಳಿ ಪರಿಹಾರ ವಿತರಣೆ

ನಟ ಯಶ್​ ಜನ್ಮದಿನದಂದು ಅಭಿಮಾನಿಗಳ‌ ದಾರುಣ ಸಾವು ಪ್ರಕರಣ ಹಿನ್ನೆಲೆ ಇಂದು ಗದಗದ ಸೂರಣಗಿ ಗ್ರಾಮಕ್ಕೆ ಯಶ್ ಆಪ್ತರು ಭೇಟಿ ನೀಡಿ ಪರಿಹಾರ ವಿತರಿಸಿದ್ದಾರೆ. ಯಶ್ ಸ್ನೇಹಿತರಾದ ರಾಕೇಶ್, ಚೇತನ್ ಹಾಗೂ ಗದಗ ಜಿಲ್ಲೆಯ ಯಶ್ ಅಭಿಮಾನಿ ಬಳಗದ‌ ಅಧ್ಯಕ್ಷ ಮಂಜುನಾಥ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.

ಬಳಿಕ ಮೃತ ಮೂವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದಾರೆ. ಮೃತಪಟ್ಟ ಹನಮಂತ ಹರಿಜನ (21), ಮುರಳಿ ನಡವಿನಮನಿ (20) ನವೀನ್ ಗಾಜಿ (19) ಕುಟುಂಬಕ್ಕೆ ಪರಿಹಾರ ನೀಡಿದ್ದಾರೆ. ಇನ್ನು ಗಾಯಾಳುಗಳಿಗೂ ಪರಿಹಾರದ ಭರವಸೆಯನ್ನು ನೀಡಿದ್ದಾರೆ. ದುರಂತ ಪ್ರಕರಣದಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಜನವರಿ 8 ರಂದು ನಟ ಯಶ್​ ಜನ್ಮದಿನ ಹಿನ್ನೆಲೆ ಅದರ ಹಿಂದಿನ ದಿನ ಅಭಿಮಾನಿಗಳು ಸೆಲೆಬ್ರೇಷನ್​​ಗಾಗಿ ಕಟೌಟ್​​ ನಿಲ್ಲಿಸುವಾಗ ನಡೆದ ವಿದ್ಯುತ್​​ ಅವಘಡದಲ್ಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ನಡೆದ ಮರುದಿನವೇ ಅಂದರೆ ತಮ್ಮ ಜನ್ಮದಿನದಂದು ನಟ ಯಶ್​​ ಮೃತ ಯುವಕರ‌ ಕುಟುಂಬಸ್ಥರನ್ನು ಭೇಟಿ ಮಾಡಿ‌ ಸಾಂತ್ವನ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೃತ ಅಭಿಮಾನಿಗಳ ಕುಟುಂಬಕ್ಕೆ ಪರಿಹಾರ ನೀಡಿದ ರಾಕಿಂಗ್ ಸ್ಟಾರ್ ಯಶ್.. ಎಷ್ಟು ಲಕ್ಷ ರೂ ಕೊಟ್ಟಿದ್ದಾರೆ..?

https://newsfirstlive.com/wp-content/uploads/2024/01/YASH-1-1.jpg

Load More