Advertisment

BSY ಮೊಮ್ಮಗನ ಆರತಕ್ಷತೆ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್​ ಯಶ್.. ನವ ಜೋಡಿಗೆ ಗಣ್ಯರಿಂದ ಶುಭ ಹಾರೈಕೆ

author-image
Ganesh
Updated On
BSY ಮೊಮ್ಮಗನ ಆರತಕ್ಷತೆ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್​ ಯಶ್.. ನವ ಜೋಡಿಗೆ ಗಣ್ಯರಿಂದ ಶುಭ ಹಾರೈಕೆ
Advertisment
  • ಬಿ.ವೈ.ರಾಘವೇಂದ್ರರ ಪುತ್ರ ಸುಭಾಷ್‌ ಆರತಕ್ಷತೆ ಕಾರ್ಯಕ್ರಮ
  • ಬೆಂಗಳೂರಿನ ಅರಮನೆಯಲ್ಲಿ ನಡೆದ ಮದುವೆ ಸಂಭ್ರಮ
  • ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಗಿ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗನ ಆರತಕ್ಷತೆಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಭಾಗಿಯಾಗಿದ್ರು.

Advertisment

ಬಿ.ಎಸ್.ಯಡಿಯೂರಪ್ಪ ಕುಟುಂಬದಲ್ಲಿ ವಿವಾಹ ಸಂಭ್ರಮ ಜೋರಾಗಿದೆ. ಯಡಿಯೂರಪ್ಪ ಮೊಮ್ಮಗ, ಸಂಸದ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್‌ ಆರತಕ್ಷತೆ ಅದ್ಧೂರಿಯಾಗಿ ನಡೆದಿದೆ. ಆರತಕ್ಷತೆಯಲ್ಲಿ ಯಶ್‌ ಭಾಗಿಯಾಗಿ ನವ ಜೋಡಿ ಜೋಡಿಗೆ ಹಾರೈಸಿದ್ರು. ಆ ವೇಳೆ ಫ್ಯಾನ್ಸ್ ಸೆಲ್ಫ್​ಗಾಗಿ ಮುಗಿಬಿದಿದ್ದಾರೆ. ಸದ್ಯ ಯಶ್​ ಬ್ಯುಸಿ ಶೆಡ್ಯೂಲ್​ನಲ್ಲಿ ಯಡಿಯೂರಪ್ಪ ಮೊಮ್ಮಗ ಆರತಕ್ಷತೆಯಲ್ಲಿ ಭಾಗಿಯಾಗಿರುವ ಫೋಟೋ ವಿಡಿಯೋಸ್ ಸಾಮಾಜಿಕ ಭಾರೀ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಇದನ್ನೂ ಓದಿ: ಕಮಲ್ ಹಾಸನ್ ಬಳಿಕ ರಾಮ್ ಗೋಪಾಲ್ ವರ್ಮಾ ಕನ್ನಡ ವಿರೋಧಿ ಹೇಳಿಕೆ; ಗೋಲ್ಡನ್ ಸ್ಟಾರ್ ಗಣೇಶ್ ತಿರುಗೇಟು

Advertisment

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಸೋಶಿಯಲ್ ಟ್ವೀಟ್ ಮಾಡಿರುವ ಡಿಕೆಶಿ, ಇಂದು ಬೆಂಗಳೂರಿನ ಅರಮನೆಯಲ್ಲಿ ನಡೆದ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಮತ್ತು ತೇಜಸ್ವಿನಿ ಅವರ ಪುತ್ರನಾದ ಸುಭಾಷ್ ಹಾಗೂ ಶ್ರಾವಣ ಅವರ ಮದುವೆ ಅರತಕ್ಷತೆಯಲ್ಲಿ ಪಾಲ್ಗೊಂಡು ವಧು-ವರನಿಗೆ ಶುಭ ಹಾರೈಸಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೊದಲು ಶಿವಣ್ಣನ ಭೇಟಿ ಮಾಡ್ತೀನಿ; ಜೈಲಿನಿಂದ ರಿಲೀಸ್ ಆದ ಮಡೆನೂರು ಮನು ಹೇಳಿದ್ದೇನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment