ಉಜ್ಜಯಿನಿ ಮಹಾಕಾಳೇಶ್ವರನ ಮೊರೆ ಹೋದ ರಾಕಿಂಗ್ ಸ್ಟಾರ್ ಯಶ್​.. ಟಾಪ್ ಫೋಟೋಸ್ ಇಲ್ಲಿವೆ!

author-image
Veena Gangani
Updated On
ಹೊಸ ಕೆಲಸಕ್ಕೆ ಮುಂದಾದ ರಾಕಿಂಗ್​ ಸ್ಟಾರ್ ತಂದೆ-ತಾಯಿ; ಏನದು ವಿಶೇಷ?
Advertisment
  • ರಾಮಾಯಣದಲ್ಲಿ ರಾವಣನಾಗಿ ಮಿಂಚೋಕೆ ಯಶ್​ ರೆಡಿ
  • ಸಾಲು ಸಾಲು ಸಿನಿಮಾ ಶೂಟಿಂಗ್​ನಲ್ಲಿ ಸ್ಟಾರ್ ನಟ ಬ್ಯುಸಿ
  • ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಯಶ್​ ಭೇಟಿ

ರಾಕಿಂಗ್​ ಸ್ಟಾರ್​ ಯಶ್​​ ಸಾಲು ಸಾಲು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ನಟ ಯಶ್ ರಾವಣನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯಕ್ಕೆ ನಟ ಯಶ್​ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಮಹಾನಟಿ ಗಗನಾ ಕೊಟ್ಟ ಸರ್​ಪ್ರೈಸ್​ಗೆ ವೇದಿಕೆ ಮೇಲೆ ಡ್ರೋನ್​ ಪ್ರತಾಪ್ ಕಣ್ಣೀರು.. VIDEO

publive-image

ನಟ ಯಶ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಯಾವುದೇ ಕೆಲಸ ಶುರು ಮಾಡುವ ಮೊದಲು ದೇವರಿಗೆ ವಿಶೇಷವಾದ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗಾಗಿ, ‘ರಾಮಾಯಣ’ ಸಿನಿಮಾದ ಶೂಟ್​ಗೂ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

publive-image

ಹೌದು, ನಾಳೆಯಿಂದ ರಾಮಾಯಾಣ 2 ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಹೀಗಾಗಿ ಶೂಟಿಂಗ್ ಆರಂಭಕ್ಕೂ ಪ್ರಾರಂಭಿಸುವ ಮೊದಲು ನಟ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಿ ವಿಶೇಷವಾಗಿ ಪೂಜೆ ಸಲ್ಲಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..

publive-image

ಟಾಕ್ಸಿಕ್ ಸಿನಿಮಾದ ಮಧ್ಯೆ ರಾಮಾಯಣ ಚಿತ್ರೀಕರಣದಲ್ಲಿ ನಟ ಯಶ್​ ಭಾಗಿಯಾಗಲಿದ್ದಾರೆ. ಈ ಚಿತ್ರದಲ್ಲಿ ನಟ ಯಶ್​ ಕೇವಲ ಹೀರೋ ಮಾತ್ರವಲ್ಲದಲ್ಲೇ ಸಹ ನಿರ್ಮಾಪಕ ಕೂಡ ಆಗಿದ್ದಾರೆ. ಬಹು ನಿರೀಕ್ಷಿತ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ನಟಿಸುತ್ತಿದ್ದಾರೆ.

publive-image

ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಹನುಮಂತನಾಗಿ ಸನ್ನಿ ದಿಯೋಲ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರಲ್ಲಿ ತೆರೆಗೆ ಬರಲಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment