Advertisment

ವೇದಿಕೆ ಮೇಲೆ ಧೂಳೆಬ್ಬಿಸಿದ ದಿವ್ಯಾಂಜಲಿ.. ಯಶ್​ ಅಮ್ಮನ ಬಾಯಿಂದ ಬಂತು ಚಿನ್ನದಂಥ ಮಾತು!

author-image
Veena Gangani
Updated On
ವೇದಿಕೆ ಮೇಲೆ ಧೂಳೆಬ್ಬಿಸಿದ ದಿವ್ಯಾಂಜಲಿ.. ಯಶ್​ ಅಮ್ಮನ ಬಾಯಿಂದ ಬಂತು ಚಿನ್ನದಂಥ ಮಾತು!
Advertisment
  • ವೇದಿಕೆ ರಾಕ್​ ಆಗಿ ಎಂಟ್ರಿ ಕೊಟ್ಟ ಯಶ್​ ತಾಯಿ
  • ಬೀದರ್​ನ ದಿವ್ಯಾಂಜಲಿ ನಟನೆಗೆ ಎಲ್ಲರೂ ಫಿದಾ
  • ಯಶ್​ ತಾಯಿ ಆ ಮಾತಿಗೆ ಚಪ್ಪಾಳೆ ತಟ್ಟಿದ ಎಲ್ಲರೂ

ವಿಭಿನ್ನ ಕಾನ್ಸೆಪ್ಟ್​ ಜೊತೆಗೆ ಮಹಾನಟಿ ರಿಯಾಲಿಟಿ ಶೋ ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಯುವತಿಯರು ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್​ ಕೊಟ್ಟಿದ್ದರು. ಅದರಲ್ಲಿ 24 ಮಂದಿ ಆಯ್ಕೆ ಆಗಿದ್ದರು. ಸದ್ಯ ಈ ವಾರ ಌಕ್ಟ್​ ವಿತ್​ ಸ್ಟಾರ್ಸ್ ರೌಂಡ್​ ನಡೆಯುತ್ತಿದೆ. ಈ ರೌಂಡ್​ನಲ್ಲಿ ನಟಿಯರು ಸೂಪರ್​ ಡೂಪರ್​ ಆಗಿ ಮಿಂಚಿದ್ದಾರೆ.

Advertisment

ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್​ ಸೆಕ್ಯೂರಿಟಿ

publive-image

ಜೀ ಕನ್ನಡ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಒಂದೊಂದಾಗಿ ಪ್ರೋಮೋಗಳನ್ನು ರಿಲೀಸ್​ ಮಾಡಿದೆ. ಅದರಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಅವರ ಅಪ್ಪಟ ಅಭಿಮಾನಿ ಆಗಿರೋ ಬೀದರ್​ ದಿವ್ಯಾಂಜಲಿಗೆ ತಾಯಿ ಪುಷ್ಪ ಚಿನ್ನದಂಥ ಮಾತು ಆಡಿದ್ದಾರೆ.

publive-image

ಈ ವಾರ ಬೀದರ್​ ದಿವ್ಯಾಂಜಲಿ ಹಸಿವೇ ತುಂಬಿರೋ ಹೊಟ್ಟೆಗೆ ಕ್ಯಾನ್ಸರ್ ಮಾರಿ ಬಂದರೆ ಹೇಗೆ ತಾನೇ ತಡೆದೀತು ಜೀವ ಎಂದು ಸ್ಕಿಟ್​ ಮಾಡಿದ್ದರು. ಈ ಭಾವುಕ ಅಭಿನಯಕ್ಕೆ ಜೀವ ತುಂಬಿದ ಬೀದರ್‌ನ ದಿವ್ಯಾಂಜಲಿಗೆ ನಟನೆ ನೋಡಿ ಜಡ್ಜ್​​ ಫಿದಾ ಆಗಿದ್ದಾರೆ. ಜತೆಗೆ 5 ಸ್ಟಾರ್​ಗಳನ್ನು ಕೊಟ್ಟಿದ್ದಾರೆ.

Advertisment

ಅಷ್ಟೇ ಅಲದೇ ವೇದಿಕೆ ಮೇಲೆ ಯಶ್​ ತಾಯಿ ಪುಷ್ಪ ಅವರ ಆಗಮನವಾಗಿದೆ. ಆಗ ಯಶ್​ ಅವರ ಅಪ್ಪಟ ಅಭಿಮಾನಿ ಆಗಿದ್ದ ದಿವ್ಯಾಂಜಲಿಗೆ, ಯಶ್​ ಸರ್​ ನಿನ್ನ ಹುಡುಕಿಕೊಂಡು ಬರಬೇಕು ಹಾಗೇ ನೀನು ಬೆಳೆಯಬೇಕು ಅಂತ ಹೇಳಿದ್ದಾರೆ. ಆಗ ಯಶ್​ ತಾಯಿ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment