ರಾಕಿಂಗ್​ ಸ್ಟಾರ್​​ ಯಶ್​​ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್​?

author-image
AS Harshith
Updated On
ಸ್ವರ್ಗವೇ ಧರೆಗಿಳಿದ ಮದುವೆ.. ಅನಂತ್​, ರಾಧಿಕಾ ವಿವಾಹ ಸಮಾರಂಭ ಆರಂಭ; ಇಲ್ಲಿದೆ ಸಂಪೂರ್ಣ ಮಾಹಿತಿ
Advertisment
  • ಕೂದಲು ಕತ್ತರಿಸಿಕೊಂಡ ರಾಕಿಂಗ್​ ಸ್ಟಾರ್​ ಯಶ್​​
  • ಹೊಸ ಅವತಾರದಲ್ಲಿ ಕಾಣಿಸಿಕೊಂಡ ‘ರಾವಣ’
  • ಯಶ್​ ನ್ಯೂ ಲುಕ್​ ನೋಡಿದ್ರಾ? ಹೇಗಿದೆ ಗೊತ್ತಾ?

ರಾಕಿಂಗ್​ ಸ್ಟಾರ್​​ ಯಶ್ ಸಿನಿಮಾದಿಂದಾಗಿ ಎಷ್ಟು ಜನಪ್ರಿಯತೆ ಪಡೆದಿದ್ದರೋ ಅಷ್ಟೇ ಜನಪ್ರಿಯತೆ ಅವರ ಹೇರ್​ ಸ್ಟೈಲ್​ ಮೂಲಕ​ ಪಡೆದಿದ್ದಾರೆ. ಕೆಜಿಎಫ್​ ಸಿನಿಮಾದಲ್ಲಿ ಉದ್ದನೆಯ ಕೂದಲು, ಉದ್ದನೆಯ ಗಡ್ಡ ಬಿಟ್ಟು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಯಶ್​ ಲುಕ್​ ಇದ್ದಕ್ಕಿದ್ದಂತೆಯೇ ಬದಲಾಗಿದೆ. ರಾಕಿ ಭಾಯ್​ ಉದ್ದ ಕೂದಲಿಗೆ ಕತ್ತರಿ ಪ್ರಯೋಗಿಸಿದ್ದಾರೆ.

ಕೆಜಿಎಫ್​, ಕೆಜಿಎಫ್ 2 ಸಿನಿಮಾದಲ್ಲಿ ಯಶ್​​ ಉದ್ದ ಕೂದಲು ಮತ್ತು ಗಡ್ಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಕೆಜಿಎಫ್​ 3 ಸಿನಿಮಾ ತೆರೆ ಮೇಲೆ ಬರಲು ಬಾಕಿ ಉಳಿದಿದೆ. ಆದರೆ ಇದರ ನಡುವೆ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೂಡ ಮಾಡುತ್ತಿದ್ದಾರೆ. ಶೂಟಿಂಗ್​ ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಇದಲ್ಲದೆ ಬಾಲಿವುಡ್​ನಲ್ಲಿ ‘ರಾಮಾಯಣ’ ಸಿನಿಮಾಗೂ ಬಂಡವಾಳ ಹಾಕಿದ್ದು, ಅದರಲ್ಲಿ ‘ರಾವಣ’ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ಯಶ್​ ಸಡನ್​ ಆಗಿ ತಮ್ಮ ಕೂದಲಿಗೆ ಕತ್ತರಿ ಪ್ರಯೋಗಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


">July 12, 2024

ಇದನ್ನೂ ಓದಿ: VIDEO: ರಸ್ತೆ ಇಲ್ಲ.. ಆಸ್ಪತ್ರೆ ಸಾಗಿಸುವ ವೇಳೆ ಅಣ್ಣನ ಹೆಗಲ ಮೇಲೆಯೇ ತಂಗಿ ಸಾವು!

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್​​ ‘ಟಾಕ್ಸಿಕ್’ ಅಥವಾ ‘ರಾಮಾಯಣ’ ಸಿನಿಮಾದಲ್ಲಿನ ರಾವಣ ಅವತಾರಕ್ಕೆ ಯಶ್​ ಹೊಸ ಅವತಾರ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಿದೆ. ಮತ್ತೊಂದೆಡೆ ರಿಲಯನ್ಸ್​ ಒಡೆತನದ ಮಾಲೀಕ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಮದುವೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇವರ ಜೊತೆಗೆ ರಾಧಿಕಾ ಪಂಡಿತ್​ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಉದ್ದನೆಯ ಕೂದಲು ಮತ್ತು ಗಡ್ಡವನ್ನು ಕತ್ತರಿಸಿರುವ ಯಶ್​ ಲುಕ್​ ಮಾತ್ರ ಡಿಫರೆಂಟಾಗಿದೆ. ಅನೇಕರು ಇವರ ಲುಕ್​ ನೋಡಿ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.


">July 12, 2024

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ನದಿಗೆ ಬಿದ್ದ ಏಂಜೆಲ್​​ ಮತ್ತು ಗಣಪತಿ ಡಿಲಕ್ಸ್​ ಬಸ್.. 65 ಮಂದಿ ನಾಪತ್ತೆ!

ಇನ್ನು ಯಶ್​ ತಮ್ಮ ಹಳೆಯ ಲುಕ್​ನಲ್ಲಿ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಉದ್ದನೆಯ ಕೂದಲು ಮತ್ತು ಗಡ್ಡ ಬಿಟ್ಟಿದ್ದ ಯಶ್​​ ‘ಬಿಯರ್ಡ್​​ ಆಯಿಲ್​’ ಕಂಪನಿಗೆ ಜಾಹೀರಾತು ನೀಡಿದ್ದರು. ಇದರ ಮೂಲಕ ಕೋಟಿ ಕೋಟಿ ಎಣಿಸಿದ್ದರು. ಮಾತ್ರವಲ್ಲದೆ, ಇವರ ಲುಕ್​ ನೋಡಿ ಅನೇಕರು ಫಾಲೋ ಮಾಡಿದ್ದಿದೆ. ಆದರೀಗ ಹೊಸ ಲುಕ್​ನಲ್ಲಿ ರಾಕಿಂಗ್​ ಸ್ಟಾರ್​ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​​​

Advertisment