ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ಟಾಕ್ಸಿಕ್ ಹವಾ; ಹೊಸ ದಾಖಲೆ ಬರೆಯಲು ಸಜ್ಜಾದ ಯಶ್‌ ಸಿನಿಮಾ!

author-image
Gopal Kulkarni
Updated On
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ಟಾಕ್ಸಿಕ್ ಹವಾ; ಹೊಸ ದಾಖಲೆ ಬರೆಯಲು ಸಜ್ಜಾದ ಯಶ್‌ ಸಿನಿಮಾ!
Advertisment
  • ಕೇವಲ ಭಾರತಕ್ಕಲ್ಲಾ ಜಾಗತಿಕವಾಗಿ ಸದ್ದು ಮಾಡಲಿದೆ ಯಶ್ ಸಿನಿಮಾ
  • ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಸಿದ್ಧಗೊಳ್ಳಲಿದೆ ಟಾಕ್ಸಿಕ್​
  • ಹೊಸ ಗುರಿಯೊಂದಿಗೆ ಸಿನಿಮಾ ಶುರು ಮಾಡಿರುವ ಗೀತು ಮೋಹನದಾಸ್​

ರಾಕಿಂಗ್ ಸ್ಟಾರ್ ಯಶ್ ಕನ್ನಡ ಸಿನಿಮಾ ರಂಗ ಕಂಡ ಎರಡನೇ ಕನಸುಗಾರ. ನಮ್ಮ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸದಾ ಕನಸು ಕಾಣುವ ಛಲಗಾರ. ಈಗ ಅದನ್ನು ಮತ್ತೊಂದು ಬಾರಿ ಸಾಬೀತುಪಡಿಸಲು ಮುಂದಾಗಿದ್ದಾರೆ. ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಟನೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಸಿನಿಮಾ ಕೆಜಿಎಫ್​ಗಿಂತ ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುವ ಯೋಚನೆಯಲ್ಲಿದೆ ಚಿತ್ರ ತಂಡ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಶೂಟಿಂಗ್ ಆಗಲಿದೆ ಎಂಬ ಸುದ್ದಿ ಇದೀಗ ಅಧಿಕೃತವಾಗಿ ಚಿತ್ರತಂಡದಿಂದಲೇ ಬಂದಿದೆ.

ಈ ಒಂದು ಸಿನಿಮಾ ಜಾಗತಿಕ ಸಿನಿಮಾ ಆಗಬೇಕು ಎಂಬ ನಿಟ್ಟಿನಲ್ಲಿ ಚಿತ್ರತಂಡ ನಿರ್ಧಾರ ಮಾಡಿದ್ದು. ಕನ್ನಡ, ಇಂಗ್ಲಿಷ್ ಜೊತೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸೇರಿ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಲವು ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ಡಬ್ ಆಗಲಿದೆ.

publive-image

ರಾಕಿಂಗ್ ಸ್ಟಾರ್ ಯಶ್ ನಟನೆಯ ಸಿನಿಮಾವನ್ನು ರಚಿಸಿ ನಿರ್ದೇಶಿಸುತ್ತಿರುವವರು ಗೀತು ಮೋಹನದಾಸ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದವರು. ಕಥೆ ಹೇಳುವ ವೈಖರಿಯಲ್ಲಿ ತಮ್ಮದೇ ಒಂದು ವ್ಯಾಖ್ಯಾನ ಬರೆದವರು. ಸದ್ಯ ಅವರ ಟಾಕ್ಸಿಕ್ ಸಿನಿಮಾವನ್ನ ಕನ್ನಡ ಹಾಗೂ ಇಂಗ್ಲಿಷ್​ನಲ್ಲಿ ಚಿತ್ರೀಕರಿಸಲು ಸಜ್ಜಾಗಿದ್ದಾರೆ. ಈ ಸಿನಿಮಾ ಜಾಗತಿಕವಾಗಿ ಒಂದು ಕಂಪನವನ್ನು ಸೃಷ್ಟಿ ಮಾಡಬೇಕು ಎಂಬ ಬಯಕೆಯನ್ನು ಹೊಂದಿದ್ದಾರೆ. ಹಲವು ಸೂಕ್ಷ್ಮತೆಗಳನ್ನು ಕನ್ನಡ ಮತ್ತು ಭಾರತೀಯ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಮಾಡಲಾಗಿದ್ದು. ಇದು ಇಂಗ್ಲಿಷ್​ನಲ್ಲಿ ಮಾಡಿದರೆ ವಿಶ್ವದಾದ್ಯಂತ ಪ್ರೇಕ್ಷಕರಿಗೆ ನೋಡಲು ಅವಕಾಶ ಸಿಗುವ ಹಾಗೆ ಮಾಡುವುದು ಈ ಸಿನಿಮಾದ ಗುರಿ.


">February 24, 2025

ಇದನ್ನೂ ಓದಿ:ರವೀನಾ ಟಂಡನ್, ಅಕ್ಷಯ್ ಕುಮಾರ್​ಗೆ ಎಂಗೇಜ್ಮೆಂಟ್ ಆಗಿತ್ತು; ಮಸ್ತ್ ಮಸ್ತ್ ಹುಡುಗಿ ಬಿಚ್ಚಿಟ್ರು ಆ ಲವ್ ಸ್ಟೋರಿ!

ನಮ್ಮ ಗುರಿ ಇರುವುದು ಟಾಕ್ಸಿಕ್ ಸಿನಿಮಾವನ್ನು ಭಾರತ ಹಾಗೂ ಜಾಗತಿಕವಾಗಿ ಪ್ರತಿಧ್ವನಿಸುವಂತೆ ಮಾಡುವುದು ಎಂದು ನಿರ್ದೇಶಕರಾದ ಗೀತು ಮೋಹನದಾಸ್ ಅವರು ಹೇಳಿದ್ದಾರೆ. ನಾವು ಈಗಾಗಲೇ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಕಥೆಯನ್ನು ಕಟ್ಟಿಕೊಡುವ ಸೂಕ್ಷ್ಮತೆಗಳ ಬಗ್ಗೆ ಶ್ರಮಿಸುತ್ತಿದ್ದೇವೆ. ಸಿನಿಮಾ ನೋಡಿದವರಿಗೆ ಎಲ್ಲಾ ಭಾಷೆಗಳಲ್ಲೂ ನೈಜ ಅನುಭವ ನೀಡಬೇಕು ಆ ನಿಟ್ಟಿನಲ್ಲಿ ಕಥೆಯನ್ನು ಹೆಣೆಯುತ್ತಿದ್ದೇವೆ. ವಿಭಿನ್ನ ಭಾಷೆ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿರುವ ಪ್ರೇಕ್ಷಕರು ಕೂಡ ಇದನ್ನು ಮೆಚ್ಚಬೇಕು ಎಂಬ ಗುರಿ ನಮ್ಮದಾಗಿದೆ. ಕಲಾತ್ಮಕ ದೃಷ್ಟಿಯ ಸಹಯೋಗದ ಜೊತೆ ಕಮರ್ಷಿಯಲ್​ ಆಗಿ ಕಥೆ ಹೇಳುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ಚಿತ್ರತಂಡದ್ದು ಎಂದು ಹೇಳಿದ್ದಾರೆ. ಇದು ಭಾಷೆ, ಗಡಿ, ಸಂಸ್ಕೃತಿ, ಈ ಎಲ್ಲ ಮೀತಿಗಳನ್ನು ಮೀರಿ ಹೊರಹೊಮ್ಮುಚ ಚಿತ್ರವಾಗಬೇಕು ಎಂಬ ಗುರಿ ನಮ್ಮದಾಗಿದೆ ಎಂದು ಗೀತು ಹೇಳಿದ್ದಾರೆ.

ಟಾಕ್ಸಿಕ್ ಸಿನಿಮಾವನ್ನು ವೆಂಕಟ್ ಕೆ. ನಾರಾಯಣ ಸಾರಥ್ಯದ ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್​ ಮೊನಸ್ಟಾರ್ ಮೈಂಡ್ ಕ್ರಿಯೇಷನ್​ ಜೊತೆಯಾಗಿ ಸೇರಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗೀತು ಮೋಹನದಾಸ್​ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾವನ್ನು ಪ್ಯಾನ್‌ ವರ್ಲ್ಡ್‌ ಹಂತಕ್ಕೆ ತೆಗೆದುಕೊಂಡು ಹೋಗಲು ಇಡೀ ಸಿನಿಮಾ ತಂಡ ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment