newsfirstkannada.com

2 ವರ್ಷದ ಬಳಿಕ ಮತ್ತೆ ‘ಕೆಜಿಎಫ್​ ಚಾಪ್ಟರ್​ 2’ ಹವಾ.. ರಾಕಿ ಫ್ಯಾನ್ಸ್‌ ಸೆಲೆಬ್ರೇಷನ್ ಹೇಗಿದೆ ಗೊತ್ತಾ?

Share :

Published April 14, 2024 at 4:39pm

Update April 14, 2024 at 4:50pm

  ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕೆಜಿಎಫ್: ಚಾಪ್ಟರ್ 2

  ಕೆಜಿಎಫ್: ಚಾಪ್ಟರ್ 2 ಸಿನಿಮಾ ತೆರೆಕಂಡು ಇಂದಿಗೆ ಎರಡು ವರ್ಷ ಭರ್ತಿ

  2022ರ ಏಪ್ರಿಲ್‌ 14ರಂದು ಐದು ಭಾಷೆಯಲ್ಲಿ ರಿಲೀಸ್​ ಆಗಿದ್ದ ಕೆಜಿಎಫ್ 2

ರಾಕಿಂಗ್ ಸ್ಟಾರ್ ಯಶ್ ಅಭಿನಯ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ಇಂದಿಗೆ ಎರಡು ವರ್ಷ ತುಂಬಿದೆ. ಇದೇ ಸಂಭ್ರಮದಲ್ಲೇ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಟ್ವೀಟರ್ ಖಾತೆಯಲ್ಲಿ ಕೆಜಿಎಫ್ 2 ಪೋಸ್ಟರ್​​ ಅನ್ನು ಶೇರ್ ಮಾಡಿಕೊಂಡು ಕೆಜಿಎಫ್​ ಚಾಪ್ಟರ್​ 2ಗೆ 2 ವರ್ಷದ ಸಂಭ್ರಮಾಚರಣೆ ಅಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಿಂದೆ ಹಲವು ಅನುಮಾನ.. ಸಾವಿಗೂ ಮುನ್ನ ಕರೆ ಮಾಡಿದ್ದು ಯಾರಿಗೆ?

ಇದನ್ನೂ ಓದಿ: ಯಶ್​ ಫ್ಯಾನ್ಸ್​ಗೆ ಗುಡ್​ ನ್ಯೂಸ್​​! ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ರಾಕಿಭಾಯ್​

2022 ಏಪ್ರಿಲ್ 14 ರಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್‌: ಚಾಪ್ಟರ್ 2 ಸಿನಿಮಾವು ವಿಶ್ವಾದ್ಯಂತ ಸಾವಿರಾರು ಥಿಯೇಟರ್‌ಗಳಲ್ಲಿ ತೆರೆಗೆ ಬಂದಿತ್ತು. ಆ ವೇಳೆ ರಾಕಿಂಗ್​​ ಸ್ಟಾರ್​ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಕೂಡ ಶೇಕ್ ಆಗಿತ್ತು. ಕನ್ನಡ ಚಿತ್ರರಂಗದಲ್ಲೇ ಯಾವ ಸಿನಿಮಾ ಮಾಡಿರದಂತಹ ದಾಖಲೆಗಳನ್ನು ಪ್ರಶಾಂತ್ ನೀಲ್ ನಿರ್ದೇಶನನ ‘ಕೆಜಿಎಫ್‌: ಚಾಪ್ಟರ್ 2’ ಮಾಡಿತ್ತು. ಇದೀಗ ಈ ಸಿನಿಮಾ ತೆರೆಕಂಡು ಭರ್ತಿ ಎರಡು ವರ್ಷ ತುಂಬಿದೆ. ಇನ್ನು ಕೆಜಿಎಪ್​ ಚಾಪ್ಟರ್​ 2 2022 ಏಪ್ರಿಲ್ 14 ರಂದು ಒಟ್ಟು ಐದು ಭಾಷೆಯಲ್ಲಿ ತೆರೆಕಂಡಿತ್ತು.

ಸ್ಯಾಂಡಲ್​ವುಡ್​ ನಟ ಯಶ್​ ಅವರ ಅಭಿನಯಕ್ಕೆ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ನಟ ಯಶ್​ ಅಭಿಮಾನಿಗಳು ಕೆಜಿಎಫ್‌: ಚಾಪ್ಟರ್ 2 ಎರಡು ವರ್ಷ ಪೂರ್ಣಗೊಂಡಿದ್ದಕ್ಕೆ ಕೇಕ್​ ಮಾಡಿ ಸಂಭ್ರಮಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ವರ್ಷದ ಬಳಿಕ ಮತ್ತೆ ‘ಕೆಜಿಎಫ್​ ಚಾಪ್ಟರ್​ 2’ ಹವಾ.. ರಾಕಿ ಫ್ಯಾನ್ಸ್‌ ಸೆಲೆಬ್ರೇಷನ್ ಹೇಗಿದೆ ಗೊತ್ತಾ?

https://newsfirstlive.com/wp-content/uploads/2024/04/kgf-2.jpg

Load More