newsfirstkannada.com

ನಿಮಗೂ ರಾಕಿಂಗ್​ ಸ್ಟಾರ್​​ ಯಶ್​ ಸಿನಿಮಾದಲ್ಲಿ ನಟಿಸಲು ಆಸೆ ಇದೆಯೇ? ಹಾಗಾದ್ರೆ ಈ ಸ್ಟೋರಿ ಓದಿ!

Share :

Published March 22, 2024 at 7:16pm

Update March 22, 2024 at 7:26pm

    ನಟ ಯಶ್​ ಜೊತೆ ಅಭಿನಯ ಮಾಡಲು ಇಲ್ಲಿದೆ ಸುವರ್ಣ ಅವಕಾಶ

    ಕೆವಿಎನ್ ಸಂಸ್ಥೆಯ​ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಚಿತ್ರ

    ಟಾಕ್ಸಿಕ್​ ಸಿನಿಮಾಗೆ ಬಾಲಿವುಡ್ ನಟಿ ಕಿಯಾರ್ ಅಡ್ವಾಣಿ ಎಂಟ್ರಿ!

ಸ್ಯಾಂಡಲ್​ವುಡ್​ ನಟ ರಾಕಿಂಗ್​ ಸ್ಟಾರ್​ ಯಶ್ ನಟನೆಯ​​ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್​. ಇತ್ತೀಚೆಗೆ ಈ ಸಿನಿಮಾದ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ರಾಕಿ ಭಾಯ್ ಯಶ್ ಚರ್ಚಿಸುತ್ತಾ ಸಾಗುತ್ತಿರುವ ಫೋಟೋವೊಂದು ಸಿಕ್ಕಾಪಟ್ಟೆ ಆಗಿತ್ತು. ಟಾಕ್ಸಿಕ್​ ಸಿನಿಮಾ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಏಪ್ರಿಲ್ ತಿಂಗಳಲ್ಲಿ ಟಾಕ್ಸಿಕ್ ಶೂಟಿಂಗ್ ಆರಂಭಗೊಳ್ಳಲಿದೆ. ಈ​ ಬೆನ್ನಲ್ಲೇ ಫ್ಯಾನ್ಸ್​ಗೆ ಟಾಕ್ಸಿಕ್ ಚಿತ್ರತಂಡ ಸಿಹಿ ಸುದ್ದಿಯೊಂದು ನೀಡಿದೆ.

ಇದನ್ನು ಓದಿ: Toxic Big News: ಟಾಕ್ಸಿಕ್ ಸಿನಿಮಾದಲ್ಲಿ ಯಶ್‌ಗೆ ಒಬ್ಬರಲ್ಲ, ಇಬ್ಬರೂ ಸ್ಟಾರ್ ಹೀರೋಯಿನ್‌? ಯಾರವರು?

ನಟ ರಾಕಿಂಗ್​ ಸ್ಟಾರ್​ ಯಶ್​ ಅವರ ಜೊತೆ ನಟಿಸುವ ಅವಕಾಶವನ್ನು ಟಾಕ್ಸಿಕ್ ಟೀಮ್ ಕಲ್ಪಿಸಿ ಕೊಡುತ್ತಿದೆ. ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಕೆಲಸಗಳು ಶುರುವಾಗಿರುವ ಹಿನ್ನೆಲೆಯಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆಗೆ ಚಿತ್ರತಂಡ ತಯಾರಿ ನಡೆಸುತ್ತಿದೆ. KVN ಟ್ವೀಟರ್​ ಖಾತೆಯಲ್ಲಿ ಆಡಿಷನ್​ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. 25 ರಿಂದ 75 ವರ್ಷದ ಪುರುಷರಿಗೆ ಆದ್ಯತೆ. 12 ರಿಂದ 16 ವಯಸ್ಸಿನ ಮಕ್ಕಳಿಗೆ ಅವಕಾಶ ಇದೆ. 23 ರಿಂದ 65 ವಯಸ್ಸಿನ ಮಹಿಳೆಯರು ಆಡಿಷನ್​ ಕೊಡಬಹುದು. ಮಾರ್ಚ್ 25ರಂದು ತಮ್ಮ ಬಗ್ಗೆ ಯಾವುದೇ ಭಾಷೆಯಲ್ಲಾದರೂ ಒಂದು ನಿಮಿಷದ ಕಿರು ಪರಿಚಯದ ವಿಡಿಯೋಗಳನ್ನು ಕಳಿಸಲು ಕೊನೆಯ ದಿನ ಎಂದು ಟಾಕ್ಸಿಕ್ ತಂಡ ಕಾಸ್ಟಿಂಗ್ ಕಾಲ್ ಕರೆದಿದೆ.

ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನಟ ರಾಕಿಂಗ್​ ಸ್ಟಾರ್​ ಯಶ್​ ಅವರ ಜೊತೆ ಅಭಿನಯಿಸಲು ಸಾಕಷ್ಟು ಫ್ಯಾನ್ಸ್​ ವಿಡಿಯೋಗಳನ್ನು ಟಾಕ್ಸಿಕ್ ಟೀಮ್​ಗೆ ಕಳಿಸುತ್ತಿದ್ದಾರೆ. ಇನ್ನು, ಟಾಕ್ಸಿಕ್ಸ್​ ಸಿನಿಮಾಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 10ಕ್ಕೆ ರಿಲೀಸ್​ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.

ಇತ್ತೀಚಿಗೆ ಟಾಕ್ಸಿಕ್ ಸಿನಿಮಾ ತಂಡದಿಂದ ಕೇಳಿ ಬಂದ ಸುದ್ದಿಯ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಕರೀನಾ ಕಪೂರ್​ ಮಾತ್ರವಲ್ಲ ಬಹುಭಾಷಾ ನಟಿ ಶ್ರುತಿ ಹಾಸನ್​ ಕೂಡ ಟಾಕ್ಸಿಕ್ ಸಿನಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಟಾಕ್ಸಿಕ್ ಸಿನಿಮಾಗೆ ಕಿಯಾರ್ ಅಡ್ವಾಣಿ ಬರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸದ್ಯ ಮುಂದಿನ ದಿನಗಳಲ್ಲಿ ಯಶ್​ ಜತೆ ಯಾವ ನಟಿ ಅಭಿನಯಿಸಲಿದ್ದಾರೆ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮಗೂ ರಾಕಿಂಗ್​ ಸ್ಟಾರ್​​ ಯಶ್​ ಸಿನಿಮಾದಲ್ಲಿ ನಟಿಸಲು ಆಸೆ ಇದೆಯೇ? ಹಾಗಾದ್ರೆ ಈ ಸ್ಟೋರಿ ಓದಿ!

https://newsfirstlive.com/wp-content/uploads/2024/03/toxic.jpg

Load More