/newsfirstlive-kannada/media/post_attachments/wp-content/uploads/2025/01/yash.jpg)
ರಾಕಿ ಭಾಯ್ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಮೇಲೆ ಗುಡ್​ನ್ಯೂಸ್ ಸಿಗುತ್ತಲೇ ಇದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಕೊಟ್ಟಿರಲಿಲ್ಲ. ಆದ್ರೆ ಈಗ ಅಚ್ಚರಿ ಎಂಬಂತೆ ಟಾಕ್ಸಿಕ್ ಸಿನಿಮಾದ ಬಗ್ಗೆ ಫ್ಯಾನ್ಸ್​ಗಳಿಗೆ ಬಹು ದೊಡ್ಡ ನ್ಯೂಸ್​ವೊಂದನ್ನು ಕೊಟ್ಟಿದೆ ಚಿತ್ರತಂಡ.
ಇದನ್ನೂ ಓದಿ: BBK11: ಯಾರು ಯಾರನ್ನ ಮನೆಗೆ ಕಳಿಸುತ್ತಾರೆ.. ಬಿಗ್​ಬಾಸ್​ ಮನೆಯಲ್ಲಿ ಮಾರಿಹಬ್ಬ ಶುರು!
/newsfirstlive-kannada/media/post_attachments/wp-content/uploads/2025/01/yash-car1.jpg)
ಹೌದು, ಕನ್ನಡದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಹೊಸ ಪೋಸ್ಟರ್​ವೊಂದನ್ನು ರಿಲೀಸ್ ಮಾಡಲಾಗಿದೆ. ಇಷ್ಟು ದಿನ ಟಾಕ್ಸಿಕ್​ ಸಿನಿಮಾ ಹಾಗೇ ಇರಬಹುದು, ಹೀಗೆ ಇರಬಹುದು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರೀಕ್ಷೆಗಿಂತ ದುಪ್ಪಟ್ಟು ಕ್ಲೂ ಸಿಕ್ಕಂತೆ ಆಗಿದೆ. ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಅಂದರೆ ನಾಡಿದ್ದು ಯಶ್ ಬರ್ತ್​ಡೇ. ಹೀಗಾಗಿ ಒಂದು ದಿನ ಮುಂಚಿತವಾಗಿಯೇ ಟಾಕ್ಸಿಕ್ ಸಿನಿಮಾದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2025/01/yash-car2.jpg)
ಇನ್ನೂ, ರಿಲೀಸ್​ ಆದ ಹೊಸ ಪೋಸ್ಟರ್​ನಲ್ಲಿ ನಟ ಯಶ್​ ರೆಟ್ರೋ ಸ್ಟೈಲ್​ನಲ್ಲಿ ಕಾರಿನ ಪಕ್ಕ ಸಿಗರೇಟ್ ಸೇರುತ್ತಾ ಸೂಟ್ ಧರಿಸಿ, ಹ್ಯಾಟ್ ಧರಿಸಿಕೊಂಡು ನಿಂತುಕೊಂಡಿರುವುದನ್ನು ಕಾಣಬಹುದು. ಸದ್ಯ ಈ ಪೋಸ್ಟರ್ ಸಖತ್ ವೈರಲ್ ಆಗಿದೆ.​ ಅಲ್ಲದೇ ಇಲ್ಲೊಂದು ಸ್ಪೆಷಲ್ ಸಮಾಚಾರ ಇದೆ. ಅದೇನೆಂದರೆ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿರೋ ಯಶ್​ ಕಾರಿನ ಪಕ್ಕ ನಿಂತಿದ್ದಾರೆ. ಅದೇ ಕಾರನ್ನು ಬ್ರಿಟನ್ ರಾಣಿ ಎಲಿಜಬೆತ್ ಬಳಸ್ತಿದ್ದ ದುಬಾರಿ ಕಾರಾಗಿದೆ.
/newsfirstlive-kannada/media/post_attachments/wp-content/uploads/2025/01/yash-car.jpg)
1947ನೇ ವರ್ಷದ ಲಿಂಕನ್ ಕಾಸ್ಮೋಪೊಲಿಟನ್ ಕಾರು ಇದಾಗಿದೆ. ಆ ಕಾಲದಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಅವರು ಬಳಸ್ತಿದ್ದ ಕಾರ್​ ಆಗಿದೆ. ಹೀಗಾಗಿ ಟಾಕ್ಸಿಕ್ ಸಿನಿಮಾದ ಕಥೆಯೂ ಇದೇ ಅವಧಿಯಲ್ಲಿ ನಡೆಯಲಿದೆ. 1945 ರಿಂದ 1950ರ ಕಾಲಘಟ್ಟದಲ್ಲಿ ಕಥೆ ನಡೆಯಲಿದೆ. ಇದೇ ಪೋಸ್ಟರ್ ನೋಡಿದ ಅಭಿಮಾನಿಗಳಲ್ಲಿ ಈ ಸಿನಿಮಾದ ಮೇಲಿನ ನಿರೀಕ್ಷೆ ಹುಟ್ಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us