ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?

author-image
Ganesh
Updated On
ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?
Advertisment
  • ಡಾ.ರಾಜ್ ಅವರ ಅಪ್ಪಟ್ಟ ಅಭಿಮಾನಿ ಯಶ್ ತಾಯಿ ಪುಷ್ಪಾ
  • ‘ಇದೇ ನಮಗೆ ದೇವಸ್ಥಾನ.. ಹೀಗಾಗಿ ಇಲ್ಲಿ ಬಂದಿದ್ದೀನಿ‌’
  • ಅಣ್ಣಾವ್ರ ಆಶೀರ್ವಾದ ಪಡೆದು ಯಶ್ ತಾಯಿ ಏನಂದ್ರು?

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಇದೀಗ ನಿರ್ಮಾಪಕಿಯಾಗಿ ಮೊದಲ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆಸ್ತಿದ್ದಾರೆ. ತಾವು ಅಪ್ಪಟ್ಟ ಡಾ.ರಾಜ್‍ಕುಮಾರ್ ಅಭಿಮಾನಿ ಅನ್ನೋದು, ಯಶ್ ತಾಯಿ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.

publive-image

ಇದೀಗ ತಮ್ಮ ಮೊದಲ ಸಿನಿಮಾ ಕೊತ್ತಲವಾಡಿಯ ಬಿಡುಗಡೆಗಾಗಿ, ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅಣ್ಣಾವ್ರ ಆಶೀರ್ವಾದ ಪಡೆಯಲು ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಪುಷ್ಪಾ.. ಇದೇ ನಮಗೆ ದೇವಸ್ಥಾನ.. ಹೀಗಾಗಿ ಇಲ್ಲಿಗೆ ಬಂದಿದ್ದೀನಿ‌ ಎಂದಿದ್ದಾರೆ.

ಇದನ್ನೂ ಓದಿ: ಮತ್ತೊಂದು ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್.. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಕೋಟಿ..?

publive-image

ರಾಕಿಂಗ್ ಸ್ಟಾರ್​ ಯಶ್​ ಅವರ ತಾಯಿ ಹಾಗೂ ತಂದೆಯವರು ಪಿಎ ಪ್ರೊಡಕ್ಷನ್ಸ್ ಶುರು ಮಾಡಿದ್ದಾರೆ. ಈ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಆಗ್ತಿರುವ ಮೊದಲ ಚಿತ್ರಕ್ಕೆ ಕೊತ್ತಲವಾಡಿ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರವು ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೊತ್ತಲವಾಡಿ ಚಿತ್ರವು ಒಂದು ನಾಟಕ ಮತ್ತು ಥ್ರಿಲ್ಲರ್ ಎಂಟರ್‌ಟೈನರ್ ಆಗಿದೆ. ಶ್ರೀರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಜೇಶ್ ನಟರಂಗ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: RCB ಸ್ಟಾರ್ ದಯಾಳ್ ಜೊತೆಗಿನ ವಿಡಿಯೋ ಕರೆಯ ಸ್ಕ್ರೀನ್​ಶಾಟ್ ಹಂಚಿಕೊಂಡ ಸಂತ್ರಸ್ತೆ.. ಚಾಟ್ ಕೂಡ ವೈರಲ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment