Advertisment

ಒಗ್ಗಟ್ಟಿನ ಬಗ್ಗೆ ನಾಗದೇವರ ಪ್ರಶ್ನೆ.. ಕಲಾವಿದರ ಸಂಘದ ಹೋಮಕ್ಕೆ ಗೈರು ಯಾಕೆ? ರಾಕ್​ಲೈನ್ ವೆಂಕಟೇಶ್‌ ಹೇಳಿದ್ದೇನು?

author-image
Gopal Kulkarni
Updated On
‘ನನ್ನ ಕೋಪಕ್ಕೆ ಬಲಿ ಆಗ್ಬೇಡಿ, ಹೇಳಿದಂತೆ ಮಾಡಿ’- ಜಗ್ಗೇಶ್, ದೊಡ್ಡಣ್ಣ ಮುಂದೆ ಚಿತ್ರರಂಗಕ್ಕೆ ನಾಗದೇವರು ವಾರ್ನಿಂಗ್!
Advertisment
  • ನಾಗದರ್ಶನ ಪೂಜೆ ಬಳಿಕ ರಾಕ್​ಲೈನ್ ವೆಂಕಟೇಶ್ ಮಾತು
  • ಅಂದಕೊಂಡಂತೆ ಪೂಜೆ ಮಾಡಿಕೊಟ್ಟಿದ್ದಾರೆ, ಸಂತೋಷವಾಗಿದೆ
  • ಗೈರಾದ ಚಿತ್ರನಟರ ಬಗ್ಗೆ ಸ್ಪಷ್ಟನೆ ನೀಡಿದ ಹಿರಿಯ ಚಿತ್ರ ನಿರ್ಮಾಪಕ

ಬೆಂಗಳೂರು:  ಕಲಾವಿದರ ಸಂಘದಲ್ಲಿ ಇಂದು ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ-ಹವನ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆಯನ್ನು ನೆರವೇರಿಸಲಾಯ್ತು. ನಾಗದರ್ಶನದ ವೇಳೆ ಪ್ರಶ್ನೆ ಮಾಡಿದಾಗ ನಾಗದೇವರು ಹೇಳಿದ ರೀತಿ ಒಗ್ಗಟ್ಟು ಇಲ್ಲ ಎಂಬುದು ಪೂಜೆಯಲ್ಲಿ ಭಾಗಿಯಾದ ಗೈರಾದವರ ಸಂಖ್ಯೆ ಸ್ಪಷ್ಟವಾಗಿ ನಿಜ ಅನ್ನೋದು ಹೇಳುತ್ತಿತ್ತು. ಇದರ ಬಗ್ಗೆ ಹಿರಿಯ ಚಿತ್ರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.

Advertisment

publive-image

ಇದನ್ನೂ ಓದಿ:ನಾಗದರ್ಶನ.. ಕಲಾವಿದರ ಸಂಘದಲ್ಲಿ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಯಾರು ಈ ಜ್ಯೋತಿ? ಹಿನ್ನೆಲೆ ಏನು?

ಪೂಜೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕ್​ಲೈನ್ ವೆಂಕಟೇಶ್​ ಪೂಜಾ ಕಾರ್ಯಕ್ರಮ ತುಂಬಾ ಚೆನ್ನಾಗಾಯ್ತು ಸಂತೋಷ ಆಯ್ತು. ಅಂದುಕೊಂಡಂತೆ ಒಳ್ಳೆ ಪೂಜಾ ಮಾಡಿಕೊಟ್ಟರು. ಇಡೀ ಚಿತ್ರೋದ್ಯಮ ಇಲ್ಲಿ ಭಾಗವಹಿಸಿತ್ತು. ನಾನು ದೇವರು ಎಂದು ನಂಬ್ತೀನಿ ಅವರನ್ನ ಅವರು ಹೇಳಿದ್ದೆಲ್ಲ ದೇವರ ವಾಖ್ಯ ಅವೆಲ್ಲ. ಒಬ್ಬ ಮನುಷ್ಯನ ಸರಿ ತಪ್ಪುಗಳನ್ನ ಹೇಗೆ ತಿದ್ದಿಕೊಳ್ಳಬೇಕು ಎಂದು ಅವರು ಆಶೀರ್ವಾದ ಮಾಡಿದ್ದಾರೆ. ನಾವೆಲ್ಲಾ ಯಾಕೆ ಪೂಜೆ ಮಾಡ್ತೀವಿ ದೇವರನ್ನ , ಪೂಜೆ ಮಾಡುವ ವ್ಯಕ್ತಿಗಳಲ್ಲಿ ಒಬ್ಬೊಬ್ಬರ ಮನಸಲ್ಲಿ ಒಂದೊಂದು ಇರಬಹುದು. ಅದನ್ನು ತಪ್ಪು ಅಂತ ನಾನು ಹೇಳುವುದು ತಪ್ಪಾಗುತ್ತೆ ಅಂದ್ರು.

ಇದನ್ನೂ ಓದಿ: ನನ್ನ ಕೋಪಕ್ಕೆ ಬಲಿ ಆಗ್ಬೇಡಿ.. ಕಲಾವಿದರ ಸಂಘದಲ್ಲಿ ದೈವ ನಾಗದರ್ಶನದ ಪ್ರಶ್ನೆ; ಅಸಲಿಗೆ ಆಗಿದ್ದೇನು?

Advertisment

ನಾನು ಬೆಳಗ್ಗೆ ಎಲ್ಲರಿಗೂ ಫೋನ್ ಮಾಡಿದ್ದೆ, ಪೂಜೆಯಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದೆ. ಇರುವವರೆಲ್ಲಾ ಬಂದಿದ್ದಾರೆ. ಶೂಟಿಂಗ್ ಇದ್ದಾಗ ಅವರು ಬರಲು ಸಾಧ್ಯವಾಗುವುದಿಲ್ಲ ಅಲ್ವಾ. ಯಾವುದೇ ನಿರ್ಮಾಪಕನಿಗೂ ತೊಂದರೆಯಾಗಬಾರದು ಅನ್ನೋ ಉದ್ದೇಶದಿಂದ ನಾನು ಯಾರಿಗೂ ಒತ್ತಾಯ ಮಾಡೋಕೆ ಹೋಗಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment