newsfirstkannada.com

ಲೇಟ್​​ ನೈಟ್​ ಪಾರ್ಟಿ ಕೇಸ್; ನಟ ದರ್ಶನ್​ ವಿರೋಧಿಗಳಿಗೆ ಖಡಕ್​​ ವಾರ್ನಿಂಗ್​ ಕೊಟ್ಟ ರಾಕ್​ಲೈನ್​!

Share :

Published January 12, 2024 at 8:35pm

Update January 12, 2024 at 8:22pm

  ಜೆಟ್‌ಲ್ಯಾಗ್‌ ಪಬ್‌ನಲ್ಲಿ ಓವರ್ ನೈಟ್ ಪಾರ್ಟಿ

  ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ನೋಟಿಸ್‌

  ಪೊಲೀಸರ ನೋಟಿಸ್​ಗೆ ಉತ್ತರಿಸಿದ ಸ್ಟಾರ್ಸ್​​

ಬೆಂಗಳೂರು: ಜೆಟ್ ಲಾಗ್ ಪಬ್​ನಲ್ಲಿ 3 ನೇ ತಾರೀಖು ಬೆಳಗಿನ ಜಾವದವರೆಗೆ ಪಾರ್ಟಿ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯವನ್ನಾಧರಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ಸುಬ್ರಹ್ಮಣ್ಯ ಪೊಲೀಸರು ನೋಟಿಸ್​ ಕೊಟ್ಟಿದ್ರು. ಅದ್ರಂತೆ ಇವತ್ತು ಒಂದಷ್ಟು ನಟರು ವಿಚಾರಣೆ ಎದುರಿಸಿದ್ದಾರೆ.

ಪೊಲೀಸರ ನೋಟಿಸ್​ಗೆ ಉತ್ತರಿಸಲು ಬಂದ ಸ್ಟಾರ್ಸ್​​

ಕಾಟೇರಾ ಸಕ್ಸಸ್​ ಹಿನ್ನೆಲೆ ಜನವರಿ ಮೂರನೇ ತಾರೀಕು ಚಿತ್ರತಂಡ ಜೆಟ್ ಲಾಗ್ ಪಬ್​ನಲ್ಲಿ ಬೆಳಗಿನ ಜಾವ ಮೂರು ಗಂಟೆಯ ವರೆಗೂ ಪಾರ್ಟಿ ಮಾಡಿದ್ರು. ಈ ಸಬಂಧ ಸುಬ್ರಹ್ಮಣ್ಯ ನಗರ ಪೊಲೀಸ್​ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಷರತ್ತುಗಳನ್ನು ಉಲ್ಲಂಘನೆ ಆರೋಪದಡಿ ಜೆಟ್ ಲಾಗ್ ಪಬ್ ಮಾಲೀಕರು ಹಾಗು ಮ್ಯಾನೇಜರ್ ಮೇಲೆ ಎಫ್​​ಐಆರ್​​ ದಾಖಲಾಗಿತ್ತು, ಹಾಗೂ ಪಾರ್ಟಿ ಮಾಡಿದ ನಟರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ನೀಡಿದ್ರು. ಅದ್ರಂತೆ ಇವತ್ತು ಕೆಲ ನಟರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿ ವಾಪಸ್ಸಾಗಿದ್ದಾರೆ.

ಚಾಲೆಂಜಿಂಗ್​ ಸ್ಟಾರ್​ ದರ್ಶನ್, ಚಿಕ್ಕಣ್ಣ, ಡಾಲಿ ಧನಂಜಯ್ಯ, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್​​ಗೆ ಪೊಲೀಸ್ರು ನೋಟಿಸ್ ನೀಡಿದ್ದರು. ಅದ್ರಂತೆ 8 ಮಂದಿ ಠಾಣೆಗೆ ಹಾಜರಾಗಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.

ದರ್ಶನ್​ನ ಟಾರ್ಗೆಟ್​ ಮಾಡ್ತಿದ್ದಾರೆ ಎಂದ ರಾಕ್​ಲೈನ್​

ಈ ಎಂಟು ಮಂದಿಯನ್ನ ಸುಬ್ರಮಣ್ಯ ನಗರ ಠಾಣೆ ಇನ್ಸ್‌ಪೆಕ್ಟರ್ ಸುರೇಶ್, ಶ್ರೀರಾಂಪುರ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಮಲ್ಲೇಶ್ವರಂ ಇನ್ಸ್‌ಪೆಕ್ಟರ್ ಜಗದೀಶ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ರಾಕ್​ಲೈನ್​ ವೆಂಕಟೇಶ್​​ ಇದೇ ಮೊದಲು ಗ್ರಾಹಕರಿಗೆ ನೋಟಿಸ್​ ಕೊಟ್ಟಿದ್ದಾರೆ. ಕೆಲವರು ದರ್ಶನ್​ನ ಟಾರ್ಗೆಟ್​ ಮಾಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ಒಟ್ನಲ್ಲಿ ಅವತ್ತು ಹೋಟೆಲ್​ನಲ್ಲಿ ಇದ್ದಿದ್ದು ನಿಜ. ಪಾರ್ಟಿ ಲೇಟ್​ ಆಯ್ತು ಊಟ ಮಾಡಿಕೊಂಡು ಹೋಗೋಕೆ ಅಂತ ನಾನೇ ಮಾಲೀಕರ ಬಳಿ ರಿಕ್ವೆಸ್ಟ್​ ಮಾಡಿ, ಊಟ ಮಾಡಿಕೊಂಡು ಹೋಗುವಷ್ಟರಲ್ಲಿ ಅಷ್ಟೊತ್ತಾಯ್ತು ಅಂತ ರಾಕ್​ ಲೈನ್​ ಹೇಳಿದ್ದು, ನಮ್ಮ ವಿರುದ್ಧ ಮತ್ತೆ ಸಮರ ಸಾರಿದ್ರೆ ನಾವೂ ಕಾನೂನು ಹೋರಾಟಕ್ಕೆ ಸಿದ್ಧ ಅಂತ ಹೇಳುವ ಮೂಲಕ ರಾಕ್​ಲೈನ್​ ವೆಂಕಟೇಶ್​ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೇಟ್​​ ನೈಟ್​ ಪಾರ್ಟಿ ಕೇಸ್; ನಟ ದರ್ಶನ್​ ವಿರೋಧಿಗಳಿಗೆ ಖಡಕ್​​ ವಾರ್ನಿಂಗ್​ ಕೊಟ್ಟ ರಾಕ್​ಲೈನ್​!

https://newsfirstlive.com/wp-content/uploads/2024/01/dboss-13.jpg

Load More