ಶ್ರೀ ಕ್ಷೇತ್ರಕ್ಕೆ ಹೋಗಿ ಬಂದ ಬೆನ್ನಲ್ಲೇ ಬಿಗ್​​ ಅಪ್​ಡೇಟ್ಸ್​​ ಕೊಟ್ಟ ರಾಕಿಂಗ್ ಸ್ಟಾರ್ ಯಶ್

author-image
Bheemappa
Updated On
ರಾಕಿಭಾಯ್ ಈ ಡಾಲರ್ ಮೇಲಿದೆ ಎಲ್ಲರ ಕಣ್ಣು; ಯಶ್ ಟಾಕ್ಸಿಕ್ ಸಿನಿಮಾಗೆ ಇದ್ಯಾ ಆ ಶಕ್ತಿ?
Advertisment
  • ಮೊನ್ನೆ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದ ಯಶ್
  • ಚಿತ್ರತಂಡ-ಆಪ್ತರ ಸಮ್ಮುಖದಲ್ಲಿ ಟಾಕ್ಸಿಕ್ ಮೂವಿ ಮುಹೂರ್ತ
  • ಟಾಕ್ಸಿಕ್​ ಚಿತ್ರಕ್ಕೆ ಕ್ಲ್ಯಾಪ್ ಮಾಡಿರುವ ದೊಡ್ಡ ಅಭಿಮಾನಿ ಯಾರು?

KGF ಸಿನಿಮಾದ ಬಳಿಕ ಯಶ್ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗ್ತಿದ್ದಾರೆ. ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಏನಿರಬಹುದು ಎಂದೂ ಫ್ಯಾನ್ಸ್​ ವಲಯದಲ್ಲಿ ಕುತೂಹಲವಿದೆ. ಯಶ್ ಅವರ ಹೊಸ ಸಿನಿಮಾದ ಅಪ್​ಡೇಟ್ ಏನಾದರೂ ಸಿಗುತ್ತೆಂದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್​ ಸಿನಿಮಾಗೆ ಅಭಿಮಾನಿ ಕೈಯಲ್ಲಿ ಕ್ಲ್ಯಾಪ್ ಮಾಡಿಸಿದ್ದಾರೆ.

ಇದನ್ನೂ ಓದಿ:ಭಾರತದ ಗಡಿಗೆ ನುಗ್ಗಲು ಮುಂದಾದ ಸಾವಿರಾರು ಬಾಂಗ್ಲಾ ಜನ; ಗಡಿಯಲ್ಲಿ BSF ಪಡೆಗೆ ಬಿಗ್ ಚಾಲೆಂಜ್..!

ಮೊನ್ನೆ ಮೊನ್ನೆಯಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀಮಂಜುನಾಥನ ಆಶೀರ್ವಾದ ಪಡೆದ ಬೆನ್ನಲ್ಲೇ ಇದೀಗ ತಮ್ಮ ಬಹು ನಿರೀಕ್ಷಿತ ಮೂವಿ ಟಾಕ್ಸಿಕ್​ಗೆ ಮುಹೂರ್ತ ಇಟ್ಟ ಸರಿಯಾದ ಸಮಯಕ್ಕೆ ಪೂಜೆ ನೆರವೇರಿಸಿದ್ದಾರೆ. ಟಾಕ್ಸಿಕ್ ಅದ್ಧೂರಿಯಾಗಿ ಸೆಟ್ಟೇರಿದೆ. ಚಿತ್ರತಂಡ- ಆಪ್ತರ ಸಮ್ಮುಖದಲ್ಲಿ ಟಾಕ್ಸಿಕ್ ಮೂವಿ ಮುಹೂರ್ತದ ದೇವರ ಪೂಜೆ ಮಾಡಲಾಯಿತು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಟಾಕ್ಸಿಕ್​ಗೆ ಅಭಿಮಾನಿ ಕೈಯಿಂದಲೇ ಕ್ಲ್ಯಾಪ್ ಮಾಡಿಸಲಾಗಿದೆ.

ಇದನ್ನೂ ಓದಿ: ಮುಖಕ್ಕೆ ಆಕ್ಸಿಜನ್.. ನಿಧಿಗಾಗಿ 40 ಮೀಟರ್ ಆಳದ ಗುಹೆ ಇಳಿದ ಕಿಡಿಗೇಡಿಗಳು.. ಮುಂದೇನಾಯ್ತು..?

publive-image

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ಆರ್ಟ್ ಡಿಪಾರ್ಟ್​​ಮೆಂಟ್​​ನಲ್ಲಿ ಕೆಲಸ ಮಾಡುವ ಸುನೀಲ್ ಎನ್ನುವ ಅಭಿಮಾನಿ ಕ್ಲ್ಯಾಪ್ ಮಾಡಿಸಿದ್ದಾರೆ. ಯಶ್ ಅವರ ಬಹುತೇಕ ಸಿನಿಮಾಗಳಿಗೆ ಸುನೀಲ್ ಅವರೇ ಕೆಲಸ ಮಾಡಿದ್ದಾರೆ. ಒಳ್ಳೆಯ ಕೆಲಸಗಾರ. ಯಶ್ ಅವರ ಮಾತನ್ನು ತೆಗೆದು ಹಾಕದೆ ಕೆಲಸ ಮಾಡುತ್ತಾರೆ. ಅಲ್ಲದೇ ಸುನೀಲ್, ಯಶ್​​ಗೆ ದೊಡ್ಡ ಅಭಿಮಾನಿ ಕೂಡ ಆಗಿದ್ದಾರೆ. ಈ ಎಲ್ಲ ಕಾರಣಗಳಿಂದ ಯಶ್ ಅವರು ಅಭಿಮಾನಿ ಸನೀಲ್​ರಿಂದ ಕ್ಲ್ಯಾಪ್ ಮಾಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment