Rohan Bopanna: ಭಾರತೀಯ ಟೆನಿಸ್​ನಿಂದ ವಿದಾಯ ಹೇಳಿದ ಕನ್ನಡಿಗ ರೋಹನ್ ಬೋಪಣ್ಣ

author-image
Ganesh
Updated On
Rohan Bopanna: ಭಾರತೀಯ ಟೆನಿಸ್​ನಿಂದ ವಿದಾಯ ಹೇಳಿದ ಕನ್ನಡಿಗ ರೋಹನ್ ಬೋಪಣ್ಣ
Advertisment
  • Paris Olympicsನಲ್ಲಿ ಸೋಲುತ್ತಿದ್ದಂತೆ ನಿವೃತ್ತಿ ಘೋಷಣೆ
  • ಆರಂಭಿಕ ಪಂದ್ಯದಲ್ಲೇ ರೋಹನ್ ಬೋಪಣ್ಣ-ಬಾಲಾಜಿ ಔಟ್
  • ನನ್ನ ವೃತ್ತಿ ಜೀವನ ಕೊನೆಯ ಪಂದ್ಯವಾಗಿದೆ ಎಂದ ಬೋಪಣ್ಣ

ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಭಾರತೀಯ ಟೆನಿಸ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ತಂಡವು 7-5, 6-2 ರಿಂದ ಸೋಲನ್ನು ಎದುರಿಸಿತು. ಬೆನ್ನಲ್ಲೇ ರೋಹನ್ ಬೋಪಣ್ಣ ಇದು ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಎಂದಿದ್ದಾರೆ.

ಬೋಪಣ್ಣ 22 ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಿವೃತ್ತಿ ಬಗ್ಗೆ ಮಾತನಾಡಿರುವ ಅವರು, ಇದು ನನ್ನ ವೃತ್ತಿಜೀವನದ ಕೊನೆಯ ಪಂದ್ಯಾವಳಿ. ಆಟಗಾರನಾಗಿ ನಾನು ಎಲ್ಲಿಗೆ ತಲುಪಿದ್ದೇನೆ ಅಂತಾ ಅರ್ಥ ಮಾಡಿಕೊಂಡಿದ್ದೇನೆ. 20 ವರ್ಷಗಳಿಗೂ ಹೆಚ್ಚು ಕಾಲ ಟೆನಿಸ್​​ನಲ್ಲಿ ಉನ್ನತ ಮಟ್ಟ ತಲುಪಿದ್ದೆ. ನನ್ನ ಐತಿಹಾಸಿಕ ವೃತ್ತಿಜೀವನದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.

ಇದನ್ನೂ ಓದಿ:MS ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕೇಬಿಡ್ತು ಗುಡ್​ನ್ಯೂಸ್​..

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲ್ಲ

ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ರೋಹನ್ ಬೋಪಣ್ಣ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲ್ಲ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ತಂಡ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್​ ತಲುಪಿತ್ತು. ಈ ಬಾರಿ ಶ್ರೀರಾಮ್ ಬಾಲಾಜಿ ಜತೆಗೂಡಿ ಒಲಿಂಪಿಕ್ ಪದಕ ಗೆಲ್ಲುವ ಕನಸನ್ನು ಕಂಡಿದ್ದರು.

6 ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲಿಸ್ಟ್..!

ರೋಹನ್ ಬೋಪಣ್ಣ ತಮ್ಮ ಐತಿಹಾಸಿಕ ಟೆನಿಸ್ ವೃತ್ತಿಜೀವನದಲ್ಲಿ 6 ಬಾರಿ ಡಬಲ್ಸ್ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲಿಸ್ಟ್ ಆಗಿದ್ದಾರೆ. ಎರಡು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಹೆಗ್ಗಳಿಕೆಯೂ ಇದೆ.

ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment