ಮನೆಯಲ್ಲೇ ಬಾರ್, ಮಲೇಷ್ಯಾ ಗರ್ಲ್​.. 10 ವರ್ಷ, ₹200 ಕೋಟಿ ದೋಖಾ, ಯಾರೀ ನಯವಂಚಕ?

author-image
Bheemappa
Updated On
ಮನೆಯಲ್ಲೇ ಬಾರ್, ಮಲೇಷ್ಯಾ ಗರ್ಲ್​.. 10 ವರ್ಷ, ₹200 ಕೋಟಿ ದೋಖಾ, ಯಾರೀ ನಯವಂಚಕ?
Advertisment
  • ವಿದೇಶಗಳ ಮದ್ಯ, ದುಬಾರಿ ಪರ್ಫ್ಯೂಮ್, ಐಷಾರಾಮಿ ಜೀವನ
  • ಖತರ್ನಾಕ್ ಕ್ರಿಮಿನಲ್​ ಲೈಫ್​ಸ್ಟೈಲ್ ಕಂಡು ಪೊಲೀಸರು ದಂಗು
  • ಮನೆ ಮೇಲೆ ದಾಳಿ ನಡೆಸಿ ಆರೋಪಿ ರೋಹನ್ ಸಲ್ದಾನಾ ಅರೆಸ್ಟ್

ಮನೆಯಲ್ಲೇ ಬಾರ್, ಮಲೇಷ್ಯಾ ಗರ್ಲ್​, ಜಾಲಿ ಜಾಲಿ ಪಾರ್ಟಿ!. 10 ವರ್ಷದಲ್ಲಿ ₹200 ಕೋಟಿ ದೋಖಾ! ಯಾರೀ ನಯವಂಚಕ? ದುಡ್ಡಿರೋ ದೊಡ್ಡ ಕುಳಗಳೇ ಟಾರ್ಗೆಟ್​? ಇವನು ಜಗತ್​ ಕಿಲಾಡಿ! ಮಂಗಳೂರಿನ ಮೋಸಗಾರ ಸಿಕ್ಕಿದ್ದೇ ರೋಚಕ!. ಹೇಗಿತ್ತು ಬೇಟೆ?.

ಜಗತ್ ಕಿಲಾಡಿ, ಕೋಟಿ ಕೋಟಿ ಅಂತ ಹೇಳುತ್ತಲೇ ಜನರಿಗೆ ಪಂಗನಾಮ ಹಾಕ್ತಿದ್ದ ನಟೋರಿಯಸ್​. ಅರಮನೆಯಂತ ಬಂಗಲೆಯನ್ನೆ ಬಂಡವಾಳ ಮಾಡ್ಕೊಂಡಿದ್ದ ಖತರ್ನಾಕ್ ತಿಮಿಂಗಿಲದ ಐಷಾರಾಮಿ ಮನೆ ಕಂಡು ಪೊಲೀಸರು ಕೂಡ ಶಾಕ್ ಆಗೋಗಿದ್ದಾರೆ. ಆದ್ರೆ ಕಟ್ಟು ಕತೆಗಳನ್ನ ಕಟ್ಟಿ ದುಡ್ಡಿರೋ ದೊಡ್ಡ ಕುಳಗಳನ್ನೆ ಯಾಮಾರಿಸ್ತಿದ್ದ ನಯವಂಚಕ ಲಾಕ್ ಆಗಿದ್ದಾನೆ. 10 ವರ್ಷದಲ್ಲಿ 200 ಕೋಟಿ ವಂಚಿಸಿರೋ ಈ ಇಂಟಲಿಜೆಂಟ್​ ಕ್ರಿಮಿನಲ್ ಸಿಕ್ಕಿದ್ದೇಗೆ?. 10 ವರ್ಷದಿಂದ ಕಣ್ಣಾ ಮುಚ್ಚಾಲೆ ಆಟ ಆಡ್ತಿದ್ದ ಮಂಗಳೂರಿನ ಮೋಸಗಾರನ ಪ್ಲ್ಯಾನ್ ಹೇಗಿರ್ತಿತ್ತು? ಅನ್ನೋ ಇಂಟರ್​ಸ್ಟಿಂಗ್.

ಮನೆಯಲ್ಲೇ ಬಾರ್.. ಸೀಕ್ರೆಟ್​ ರೂಮ್​.. ಜಾಲಿ ಜಾಲಿ ಪಾರ್ಟಿ !

ಮನೆನ ಅರಮನೆ ರೀತಿ ಕಟ್ಟಿಕೊಂಡಿದ್ದಾನೆ. ಕಣ್ಣಿಗೆ ಕುಕ್ಕುವಂತ ಬಂಗಲೆಯಲ್ಲಿರೋ ಒಂದೊಂದು ಐಟಂಗಳು ಕಿಮ್ಮತ್ತು ಕೋಟಿ ಕೋಟಿ ಬೆಲೆ ಬಾಳುತ್ತೆ. ಸೋಫಾ, ಕೂರೋ ಕುರ್ಚಿ, ಟೇಬಲ್.. ಅಬ್ಬಬ್ಬಾ.. ನೋಡಿದವರಿಗೆ ಇಂದ್ರ ದೇವನ ಸ್ವರ್ಗದ ಪ್ರೈವೆಟ್ ರೂಮ್ ಹಿಂಗೆ ಇರುತ್ತೆನೋ ಅಂತ ಅನಿಸುತ್ತೆ. ಮನೆಯೊಳಗೆ ಬಾರು, ಒಳಗೊಂದು ಸೀಕ್ರೇಟ್​ ರೂಮ್​​. ಏನ್ ಈ ಆಡಂಭರ, ಅದ್ಧೂರಿತನ.

publive-image

ಈ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು ಕೂಡ ದಂಗಾಗಿ ಹೋಗಿದ್ದರು. ಹೊರಗಡೆ ನಾರ್ಮಲ್​ ಬಂಗಲೆ ಅಂತ ಅನಿಸಿದರೂ, ಒಳಗೆ ಕಾಲಿಟ್ರೆ ಸ್ವರ್ಗಕ್ಕೆ ಕಾಲಿಟ್ಟಂತ ಅನುಭವ. ಅದ್ರಲ್ಲೂ ಮನೆಯಲ್ಲಿದ್ದ ಬಾರ್​ ಸೆಕ್ಷನ್​ ನೋಡಿ ಪೊಲೀಸರು ಗಾಬರಿಯಾಗ್ಬಿಟ್ಟಿದ್ರು. ಯಾಕಂದ್ರೆ ಬಾರ್​ನಲ್ಲಿದ್ದ ಎಣ್ಣೆಗಳಲ್ಲೆ ಫಾರೆನ್​ ಬ್ಯ್ರಾಂಡ್​ಗಳೇ. ಇನ್ನೂ ಬಾರ್​ ಟೇಬಲ್ ನೋಡ್ಬಿಟ್ರೆ ಬಾಯ್ ಮೇಲೆ ಬೆರಳು ಇಟ್ಕೊಂಡು ಬಿಡ್ತಿರಾ. ಇಷ್ಟೆಲ್ಲ ನೋಡಿದ್ಮೆಲೆ ಇದು ಯಾರೋ ದೊಡ್ಡ ಪಾರ್ಟಿ ಮನೆ ಇರ್ಬೇಕು ಅಂತ ನೀವು ಅಂದ್ಕೊಂಡಿರ್ತಿರಾ..? ಆದ್ರೆ ಇದೊಬ್ಬ ಪ್ರಳಯಾಂತಕ. ನಯವಂಚಕನ ಮನೆ. ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡಿ ಜಾಲಿ ಜಾಲಿಯಾಗಿರ್ತಿದ್ದ ಜಗತ್​ ಕಿಲಾಡಿಯ ಅರಮನೆ.​

ಮಂಗಳೂರಿನ ಮಹಾ ಮೋಸಗಾರ

ಸ್ಟೈಲೀಶ್​ ಲುಕ್​ನಲ್ಲಿ ಡಿಫರೆಂಟ್ ಡಿಫರೆಂಟ್ ಫೋಸ್​ ಕೊಟ್ಟಿದ್ದಾನೆ. ಮಂಗಳೂರಿನ ಮಹಾ ಮೋಸಗಾರ. ಬರೀ ಕೋಟಿಯಲ್ಲೇ ಮಾತಾಡ್ತಿದ್ದ ಮಹಾಶೂರ. ಇವತ್ತು ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಪಾರ್ಟಿ ಮೂಡ್​ನಲ್ಲಿ ಮಲೇಷ್ಯಾ ಬೇಬಿ ಜೊತೆಯಲ್ಲಿ ಜಾಲಿಯಾಗಿರುವಾಗ್ಲೇ ಈ ಕಿಲಾಡಿ ರೆಡ್​ ಹ್ಯಾಂಡ್ ಆಗಿ ಲಾಕ್ ಆಗಿದ್ದಾನೆ.

publive-image

ಮಂಗಳೂರಿನ ಈ ಮದ್ಯದ ದೊರೆಯ ಹೆಸರು ರೋಹನ್ ಸಲ್ದಾನಾ. ಮಂಗಳೂರು ಹೊರವಲಯದ ಜಪ್ಪಿನಮೊಗರುನಲ್ಲಿ ಈ ರೋಹನ್​ ಬಂಗಲೆಯಿದೆ. ಇದೇ ಬಂಗಲೆ ಮೇಲೆ ‌ಮಂಗಳೂರು ಪೊಲೀಸರು ರೇಡ್ ಮಾಡಿದ್ರು. ರೇಡ್ ಮಾಡಿದಷ್ಟೆ, ಮನೆಯೊಳಗಿನ ರೋಹನ್​ ಲೈಫ್​ಸ್ಟೈಲ್​ ಕಂಡು ಪೊಲೀಸರಿಗೆ ಗರ ಬಡಿದಂತಾಗಿದೆ. ಬಂಗಲೆ ಒಳಗಿನ ದೃಶ್ಯ ನೋಡಿ ಪೊಲೀಸರು ದಂಗಾಗಿ ಹೋಗಿದ್ದಾರೆ. ಏನಪ್ಪ ಇವನ ರಾಜವೈಭೋಗ ಅಂತ ದಿಗಿಲು ಬಿದ್ದಿದ್ದಾರೆ.

ರೋಹನ್ ಸಲ್ದಾನಾ, ಇವನ್ನ ದುಬೈ ರೋಹನ್​ ಅಂತಲೂ ಕರೀತಾರೆ. ಇವನ ಕೆಲಸ ಏನಂದ್ರೆ ದೊಡ್ಡ ದೊಡ್ಡ ಉದ್ಯಮಿಗಳನ್ನ ಟಾರ್ಗೆಟ್ ಮಾಡೋದು. ಬನ್ನಿ ಸಾರ್ ಒಂದು ಪಾರ್ಟಿ ಮಾಡೋಣ ಅಂತ ತನ್ನ ಐಷಾರಾಮಿ ಬಂಗಲೆಗೆ ಕರೆಸಿ ಹಣೆ ಮೇಲೊಂದು ನಾಮ ಹಾಕಿ ಕಳಿಸೋದು. ಹೀಗೆ ಈ ಆಸಾಮಿ ಬರೋಬ್ಬರಿ 200 ಕೋಟಿಯನ್ನ ವಂಚಿಸಿರೋ ಬಗ್ಗೆ ಬೆಳಕಿಗೆ ಬಂದಿದೆ. ಈಗ ಈ ರೋಹನ್​​ ಅನ್ನ ಪೊಲೀಸರು ಅರೆಸ್ಟ್ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಆದ್ರೆ ರೋಹನ್ ಮೋಡ್ ಆಫ್ ಆಪರೆಂಡಿ, ಶ್ರೀಮಂತ ವ್ಯಕ್ತಿಗಳನ್ನ ಬಲೆಗೆ ಬೀಳಿಸ್ತಿದ್ದ ಪ್ಲ್ಯಾನ್​ ಪ್ರಳಾಯಂತಕನ ಅಸಲಿಯತ್ತನ್ನ ಬಿಚ್ಚಿಡ್ತಿದೆ. ಈ ಬಗ್ಗೆ ಹೇಳೋದಕ್ಕೂ ಮೊದಲು ವಂಚಕ ರೋಹನ್​ ಯಾರು?. ಈ ನಯವಂಚಕ ತಗ್ಲಾಕೊಂಡಿದ್ದು ಹೇಗೆ?.

publive-image

ಯಾರು ಈ ರೋಹನ್​ ಸಲ್ದಾನಾ?

  • ಮನೆಯೊಳಗೆ ಸೀಕ್ರೆಟ್​ ರೂಮ್.. ಮಿನಿ ಬಾರ್​.. ಕಾರುಬಾರು!
  • ಕೋಟಿ ಕೋಟಿ ವಂಚನೆ ಮಾಡಿದವ್ನ ಅಸಲೀಯತ್ತು ಬಯಲು
  • ಭಾರೀ ವಂಚನಾ ಜಾಲ ಭೇದಿಸಿದ ಮಂಗಳೂರು ಪೊಲೀಸರು
  • ಉದ್ಯಮಿಗಳಿಗೆ ಸಾಲ ಕೊಡಿಸುವ ನೆಪದಲ್ಲಿ ವಂಚಿಸಿದ್ದ ಖತರ್ನಾಕ್
  • ಮನೆ ಮೇಲೆ ದಾಳಿ ನಡೆಸಿ ಆರೋಪಿ ರೋಹನ್ ಸಲ್ದಾನಾ ಅರೆಸ್ಟ್​
  • ರೋಹನ್ ಐಷಾರಾಮಿ ಜೀವನ ಕಂಡು ಒಮ್ಮೆ ಪೊಲೀಸರೇ ಶಾಕ್
  • ರೋಹನ್ ಅಕೌಂಟ್​​ನಲ್ಲೂ 40 ಕೋಟಿ ರೂಪಾಯಿ ವ್ಯವಹಾರ ಪತ್ತೆ

ಈ ರೋಹನ್ ಅದೆಂಥಾ ಕಿಲಾಡಿ ಅಂದ್ರೆ, ತನ್ನ ಮನೆಗೆ ರಿಮೋಟ್​ ಕಂಟ್ರೋಲ್ ವ್ಯವಸ್ಥೆ ಇಟ್ಕೊಂಡಿದ್ದ. ಪೊಲೀಸರ ಎಂಟ್ರಿ ಟೈಮ್​ನಲ್ಲೂ ರೋಹನ್ ಮಲೇಷಿಯಾ ಹುಡುಗಿ ಜೊತೆ ಪಾರ್ಟಿ ಮಾಡ್ತಿದ್ದ. ಪೊಲೀಸರು ಬಂದಿದ್ದು ಕಂಡು ಎಸ್ಕೇಪ್ ಆಗೋದಕ್ಕೆ ನೋಡಿದ್ದ. ಆದ್ರೆ ಗೇಟ್​ ಓಪನ್​ ಆಗದೇ ಕಾರಣಕ್ಕೆ ಕಾಂಪೌಂಡ್ ಹಾರಿದ್ದ. ಈ ಟೈಮ್​ನಲ್ಲಿ ಸೀಕ್ರೇಟ್ ರೂಮ್​​ ಸೇರಿ ಅಲ್ಲಿಂದ ಪರಾರಿಯಾಗೋದಕ್ಕೆ ಯತ್ನಿಸಿದ್ದ. ಆದ್ರೆ ಪೊಲೀಸರು ಆ ಸಿಕ್ರೇಟ್​ ರೂಮ್​​ ಪತ್ತೆ ಹಚ್ಚಿ ಒಡೆದು ಹಾಕಿದ್ರು. ಈ ವೇಳೆ ರೋಹನ್ ಮನೆ ಪಕ್ಕದ ಗದ್ದೆಯಲ್ಲಿ ಓಡೋದಕ್ಕೆ ಶುರು ಮಾಡಿದ್ದ. ಆಗ ಪೊಲೀಸರು ತಮ್ಮ ಶೂ ಕಳಚಿ ಗದ್ದೆಯಲ್ಲೇ ರೋಹ್​ನ್ನ ಚೇಸ್ ಮಾಡಿ ಲಾಕ್ ಮಾಡಿದ್ರು.

ಈ ರೋಹನ್ ಸಲ್ದಾನ್​ ಅದೆಂತಾ ಇಂಟಲಿಜೆಂಟ್ ಕ್ರಿಮಿನಲ್ ಅಂದ್ರೆ ಕಳೆದ 10 ವರ್ಷಗಳಿಂದೂ ಈ ಪ್ರಳಯಾಂತಕ ಮೋಸ ಮಾಡೋದನ್ನೆ ದಂಧೆ ಮಾಡ್ಕೊಂಡಿದ್ದಾನೆ. 10 ವರ್ಷದಿಂದ ಇಲ್ಲಿತನಕ ಬರೋಬ್ಬರಿ 200 ಕೋಟಿ ವಂಚಿಸಿದ್ದಾನೆ ಎನ್ನಲಾಗಿದೆ. ಆದ್ರೆ ಇಲ್ಲಿತನಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗ್ತಿದ್ದವನು ಈ ಬಾರಿ ಮಿಸ್ ಆಗಿಲ್ಲ. ಆಂಧ್ರಪ್ರದೇಶದ ಉದ್ಯಮಿ ಒಬ್ಬರು ಕೊಟ್ಟ ದೂರಿನಿಂದ ಈ ಕಿಲಾಡಿ ರೋಹನ್​ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಇದನ್ನೂ  ಓದಿ:ಕಿಂಗ್​ ಕೊಹ್ಲಿ ಬ್ರ್ಯಾಂಡ್ ಬಿಲ್ಡ್​ ಮಾಡಲು ಮುಂದಾದ ಗಿಲ್.. ಮ್ಯಾಚ್​ನಲ್ಲಿ ಏನೇನು ಮಾಡಿದ್ರು?

publive-image

ರಾಂಗ್ ರೂಟ್ ರೋಹನ್ ಲಾಕ್ ಆಗಿದ್ದೇಗೆ?

  • ಆಂಧ್ರಪ್ರದೇಶ ಮೂಲದ ಉದ್ಯಮಿಗೆ ವಂಚಿಸಿ ಅರೆಸ್ಟ್!
  • ಸಿಲ್ಕ್ ಸ್ಯಾರಿ ಕಂಪನಿ ಮಾಲೀಕನಾಗಿರುವ ಆ ಉದ್ಯಮಿ
  • ಬ್ಯುಸಿನೆಸ್​ ಡೆವಲಪ್​ಗಾಗಿ ಸಾಲದ ಮೊರೆ ಹೋಗಿದ್ದ ಉದ್ಯಮಿ
  • 2023 ರಲ್ಲಿ ಫೈನಾನ್ಸ್​ ಕನ್ಸಲ್‌ಟೆನ್ಸಿ ನಡೆಸ್ತಿದ್ದ ವಿಮಲೇಶ್ ಸಂಪರ್ಕ!
  • ಚಿತ್ರದುರ್ಗದ ಸಾಯಿ ಫೈನಾನ್ಸ್ ಸಾಲ ನೀಡ್ತಾರೆ ಎಂದಿದ್ದ ವಿಮಲೇಶ್
  • ಸಾಯಿ ಫೈನಾನ್ಸ್​ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ರೋಹನ್
  • ವಿಮಲೇಶ್​ನಿಂದ ರೋಹನ್​ಗೆ ಆ ಉದ್ಯಮಿ ಪರಿಚಯವಾಗಿತ್ತು
  • ಫೈನಾನ್ಸ್​ನಿಂದ ಸಾಲ ಮಂಜೂರು ಮಾಡಿಸ್ತೀನಿ ಎಂದಿದ್ದ ರೋಹನ್
  • ಸ್ಟ್ಯಾಂಪ್ ಡ್ಯೂಟಿಗೆ ಹಣ ಬೇಕು ಅಂತ ಡಿಮ್ಯಾಂಡ್ ಮಾಡಿದ್ದ
  • ಒಂದು ಸ್ಯಾಂಪ್ ಪೇಪರ್‌ಗೆ 49 ಸಾವಿರ ರೂಪಾಯಿ ಎಂದಿದ್ದ
  • ಒಟ್ಟು ಎಂಬತ್ತು ಸ್ಟ್ಯಾಂಪ್ ಪೇಪರ್​ಗಳಿಗೆ 39,20,000 ಪಡೆದಿದ್ದ
  • 15 ದಿನಗಳಲ್ಲಿ ಸಾಲ ಮಂಜುರಾತಿ ಮಾಡೋದಾಗಿ ಎಸ್ಕೇಪ್
  • ಜುಲೈ 16ರಂದು ಚಿತ್ರದುರ್ಗದಲ್ಲಿ ಕೇಸ್ ದಾಖಲಿಸಿದ್ದ ಉದ್ಯಮಿ
  • ಚಿತ್ರದುರ್ಗದಿಂದ ಮಂಗಳೂರಿಗೆ ಕೇಸ್​ ವರ್ಗಾವಣೆಯಾಗಿತ್ತು.
  • ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ರೋಹನ್ ಲಾಕ್

ಒಂದ್ಕಡೆ ಈ ರಾಂಗ್​ರೂಟ್ ರೋಹನ್​ ಲೈಫ್​ಸ್ಟೈಲ್​ ಬೆಚ್ಚಿ ಬೀಳಿಸ್ತಿದ್ರೆ, ಮತ್ತೊಂದ್ಕಡೆ ದುಡ್ಡಿರೋ ಕುಳಗಳನ್ನೆ ಖೆಡ್ಡಾಗೆ ಕೆಡವ್ತಿದ್ದ ಇವನ ಪ್ಲ್ಯಾನ್​ ಇನ್ನೂ ರೋಚಕವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment