/newsfirstlive-kannada/media/post_attachments/wp-content/uploads/2024/07/Team-india.jpg)
ಭಾರತಕ್ಕೆ ಟಿ20 ವಿಶ್ವಕಪ್ ಚಾಂಪಿಯನ್ ವೀರರ ಆಗಮನವಾಗಿದೆ. 3 ದಿನ ತಡವಾಗಿ ಎಂಟ್ರಿಕೊಟ್ಟ ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಾರ್ಬಡೋಸ್ನಂತೆ ಭಾರತದಲ್ಲಿ ಸಂಭ್ರಮ ಮರುಸೃಷ್ಟಿಯಾಗಲಿದ್ದು, ಕೌಂಟ್ಡೌನ್ ಶುರುವಾಗಿದೆ. ಬನ್ನಿ ಹಾಗಾದ್ರೆ ವಿಶ್ವಕಪ್ ವಿಜೇತ ತಂಡದ ಆಟಗಾರರ ಇಂದಿನ ಡೈರಿ ಹೇಗಿರಲಿದೆ ? ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಟಿ20 ವಿಶ್ವಕಪ್ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ ಆಟಗಾರರು ಸ್ವದೇಶಕ್ಕೆ ರಿಟರ್ನ್ ಆಗಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿಳಿದ ರೋಹಿತ್ ಬಳಗವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯ್ತು.
ಬೆರಿಲ್ ಚಂಡಮಾರುತದ ಪರಿಣಾಮ ಕಳೆದ ಮೂರು ದಿನಗಳಿಂದ ಟೀಂ ಇಂಡಿಯಾ ವೆಸ್ಟ್ಇಂಡೀಸ್ನ ಬಾರ್ಬಡೊಸ್ನಲ್ಲಿ ಉಳಿದುಕೊಂಡಿತ್ತು. ಬಿಸಿಸಿಐ ವಿಶೇಷ ಮುತುವರ್ಜಿ ವಹಿಸಿ ಚಾರ್ಟರ್ಡ್ ಫ್ಲೈಟ್ ಮೂಲಕ ಆಟಗಾರರನ್ನ ದೇಶಕ್ಕೆ ಕರೆತಂದಿದೆ. ಇಂದು ಬೆಳಿಗ್ಗೆ 6 ಗಂಟೆಗೆ ರೋಹಿತ್ & ಟೀಮ್ ದೆಹಲಿಗೆ ಬಂದಿಳಿದಿದೆ.
ಬೆಳಗಿನ ಜಾವ ಭಾರತಕ್ಕೆ ಆಗಮಿಸಿದ ವಿಶ್ವ ಗೆದ್ದ ವೀರ ಕಲಿಗಳಿಗೆ ಅದ್ಧೂರಿ ಸ್ವಾಗತ ಸಿಕ್ತು. ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ವಿಜೇತ ತಂಡದ ಜೊತೆ ಉಪಹಾರ ಕೂಟವನ್ನ ಹಮ್ಮಿಕೊಂಡಿದ್ದಾರೆ. ಇದು ಮುಗಿಯುತ್ತಿದ್ದಂತೆ ಇಡೀ ತಂಡ ಮುಂಬೈನತ್ತ ಪ್ರಯಾಣ ಬೆಳೆಸಲಿದೆ.
4 ಗಂಟೆಗೆ ದೆಹಲಿಯಿಂದ ಮುಂಬೈಗೆ ಆಗಮನ.!
ದೆಹಲಿಯಿಂದ ನಾಲ್ಕು ಗಂಟೆಗೆ ಹೊರಡುವ ಟೀಮ್ ಇಂಡಿಯಾ ಆಟಗಾರರು ನೇರವಾಗಿ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. 5 ಗಂಟೆ ವೇಳೆಗೆ ಮರೀನ್ ಡ್ರೈವ್ಗೆ ಎಂಟ್ರಿಕೊಡಲಿದ್ದಾರೆ.
2 ಗಂಟೆ, 10 ಕಿ.ಮೀ.. ಟ್ರೋಫಿ ಜೊತೆ ಪ್ಲೇಯರ್ಸ್ ಯಾತ್ರೆ.!
ವಿಶ್ವಕಪ್ ಜಯಿಸಿ ಬಾರ್ಬಡೋಸ್ನಲ್ಲಿ ಸಂಭ್ರಮಾಚರಣೆ ಮಾಡಿದ್ದ ರೋಹಿತ್ ಪಡೆ ಭಾರತದಲ್ಲೂ ಸಂಭ್ರಮಿಸಲಿದೆ. ಮರೀನ್ ಡ್ರೈವ್ನಿಂದ ವಾಂಖೆಡೆ ಮೈದಾನದ ತನಕ ತೆರೆದ ಬಸ್ನಲ್ಲಿ ಮೆರವಣಿಗೆ ನಡೆಯಲಿದೆ. ಸುಮಾರು 2 ಗಂಟೆಗಳ ಕಾಲ ಮೆರವಣಿಗೆ ಸಾಗಲಿದ್ದು, ಆಟಗಾರರು ಟ್ರೋಫಿ ಜೊತೆ ಈ ಸಂಭ್ರಮದಲ್ಲಿ ಮುಳುಗಲಿದ್ದಾರೆ.
‘ಬನ್ನಿ ಸಂಭ್ರಮಿಸೋಣ’
ನಾನು ವಿಶೇಷವಾದ ಕ್ಷಣವನ್ನ ನಿಮ್ಮೊಂದಿಗೆ ಸಂಭ್ರಮಿಸಲು ಬಯಸುತ್ತೇವೆ. ಈ ಗೆಲುವನ್ನ ಮರೀನ್ ಡ್ರೈವ್ನಿಂದ ವಾಂಖೆಡೆವರೆಗೆ ಗೆಲುವಿನ ಯಾತ್ರೆಯ ಮೂಲಕ ಸಂಭ್ರಮಿಸೋಣ. ಇಂದು ಸಂಜೆ 5 ಗಂಟೆಯಿಂದ. ಟ್ರೋಫಿ ಮನೆಗೆ ಬರುತ್ತಿದೆ.
-ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ಒಂದೇ ವೇದಿಕೆಯಲ್ಲಿ ಬಿಸಿಸಿಐ ಬಾಸ್ಗಳು, ಆಟಗಾರರು
ಇನ್ನು ಓಪನ್ ಬಸ್ ಪರೇಡ್ ಬಳಿಕ ಐಕಾನಿಕ್ ವಾಂಖೆಡೆ ಮೈದಾನದಲ್ಲಿ ಅವಿಸ್ಮರಣೀಯ ಸಮಾರಂಭ ನಡೆಯಲಿದೆ. ಈ ವೇಳೆ ವಿಶ್ವಕಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಟೀಮ್ ಇಂಡಿಯಾ ಆಟಗಾರರು, ಕೋಚಸ್ ಹಾಗೂ ಸಪೋರ್ಟಿಂಗ್ ಸ್ಟಾಪ್ಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನವನ್ನ ವಿತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್