newsfirstkannada.com

ಕೊಹ್ಲಿ, ರೋಹಿತ್​​ಗೆ ಇದೇ ಕೊನೇ ಸೀಸನ್ನಾ? ಇಬ್ಬರು ಮುಂದಿನ ವರ್ಷದಿಂದ ಐಪಿಎಲ್​ ಆಡಲ್ವಾ?

Share :

Published March 20, 2024 at 5:36pm

Update March 20, 2024 at 5:37pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್

  ರೋಹಿತ್​​, ಕೊಹ್ಲಿಗೆ ಇದುವೇ ಕೊನೆ ಐಪಿಎಲ್​ ಸೀಸನ್ನಾ..?

  ಮುಂದಿನ ವರ್ಷದಿಂದ ಇಬ್ಬರು ಐಪಿಎಲ್​ ಆಡೋದಿಲ್ವಾ?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಟಿ20 ವಿಶ್ವಕಪ್​ ನಡೆಯಲಿದೆ. ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ, ಸ್ಟಾರ್​​ ಅನುಭವಿ ಕ್ರಿಕೆಟರ್​​ ವಿರಾಟ್​ ಕೊಹ್ಲಿ ಕೂಡ ಇರಲಿದ್ದಾರೆ. ಇದೇ ಇಬ್ಬರಿಗೆ ಕೊನೇ ಟಿ20 ಇಂಟರ್​ ನ್ಯಾಷನಲ್​​ ಟೂರ್ನಮೆಂಟ್​ ಎಂದು ಹೇಳಲಾಗುತ್ತಿದೆ. ಇಷ್ಟೇ ಇಲ್ಲ, ಇಬ್ಬರಿಗೂ ಇದೇ ಕೊನೇ ಐಪಿಎಲ್​​ ಎಂದು ವರದಿಯಾಗಿದೆ.

ಹೌದು, ವಿರಾಟ್ ಕೊಹ್ಲಿ ಕಳೆದ 16 ವರ್ಷಗಳಿಂದ ಐಪಿಎಲ್​ ಆಡುತ್ತಿದ್ದಾರೆ. ಆಗಷ್ಟೇ ಅಂಡರ್‌ 19 ವಿಶ್ವಕಪ್‌ ಆಡಿ ಬಂದಿದ್ದ ವಿರಾಟ್ ಕೊಹ್ಲಿಗೆ ಆರ್​​ಸಿಬಿ ಅವಕಾಶ ನೀಡಿತ್ತು. ಐಪಿಎಲ್ ಮೊದಲ ಸೀಸನ್‌ನಿಂದ ಆಡುತ್ತಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಇವರು ಒಂದೇ ತಂಡದ ಪರ ಅತಿ ಹೆಚ್ಚು ಸೀಸನ್​ ಆಡಿದ್ದಾರೆ. 2008ರಿಂದಲೂ ಕೊಹ್ಲಿ ಆರ್​​ಸಿಬಿಯಲ್ಲೇ ಇದ್ದಾರೆ. ಇದುವರೆಗೂ ತಾನು ಆಡಿದ 237 ಪಂದ್ಯಗಳಲ್ಲಿ 7263 ರನ್ ಗಳಿಸಿದ್ದಾರೆ.

ಇನ್ನೊಂದೆಡೆ ರೋಹಿತ್ ಶರ್ಮಾ ಕೂಡ 2008ರ ಐಪಿಎಲ್‌ನಲ್ಲಿ ಡೆಕ್ಕನ್‌ ಚಾರ್ಜಸ್‌ ತಂಡದ ಪರ ಪದಾರ್ಪಣೆ ಮಾಡಿದರು. ಇದಾದ ಬಳಿಕ 2011ರಲ್ಲಿ ಮುಂಬೈ ತಂಡಕ್ಕೆ ಸೇರಿಕೊಂಡರು. ಅಂದಿನಿಂದ ಇಂದಿನವರೆಗೂ ರೋಹಿತ್​ ಮುಂಬೈ ಇಂಡಿಯನ್ಸ್​ನಲ್ಲೇ ಆಡುತ್ತಿದ್ದಾರೆ. ರೋಹಿತ್​​ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ರೋಹಿತ್ 243 ಐಪಿಎಲ್ ಪಂದ್ಯಗಳಲ್ಲಿ 6211 ರನ್ ಗಳಿಸಿದ್ದಾರೆ.

ಸದ್ಯ ಮೊದಲ ಸೀಸನ್‌ನಿಂದಲೂ ಇರೋ ಇಬ್ಬರಿಗೂ ಇದೇ ಕೊನೆ ಐಪಿಎಲ್​ ಸೀಸನ್​ ಎನ್ನಲಾಗಿದೆ. ಮುಂದಿನ ವರ್ಷ ಕೊಹ್ಲಿ, ರೋಹಿತ್​​ ಐಪಿಎಲ್​ನಿಂದ ರಿಟೈರ್​ ಆಗೋ ಸಾಧ್ಯತೆ ಇದೆ. ಕೊಹ್ಲಿ, ರೋಹಿತ್​ ಮಾತ್ರವಲ್ಲ ಮಹೇಂದ್ರ ಸಿಂಗ್ ಧೋನಿ ಮತ್ತು ಶಿಖರ್​ ಧವನ್​ ಕೂಡ ಐಪಿಎಲ್​​ನಿಂದ ನಿವೃತ್ತಿಯಾಗೋ ಬಗ್ಗೆ ಚರ್ಚೆಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ರೋಹಿತ್​​ಗೆ ಇದೇ ಕೊನೇ ಸೀಸನ್ನಾ? ಇಬ್ಬರು ಮುಂದಿನ ವರ್ಷದಿಂದ ಐಪಿಎಲ್​ ಆಡಲ್ವಾ?

https://newsfirstlive.com/wp-content/uploads/2024/03/Kohli_Rohit_IPL.jpg

Load More