newsfirstkannada.com

ಸಾವರ್ಕರ್ ಮತ್ತು ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ; ರೋಹಿತ್ ಚಕ್ರತೀರ್ಥ

Share :

15-06-2023

    ಪಠ್ಯ ಪುಸ್ತಕ ಪರಿಷ್ಕರಣ ವಿಚಾರವಾಗಿ ರೋಹಿತ್​ ಚಕ್ರತೀರ್ಥ ಟಾಕ್​

    ಸಾವರ್ಕರ್ ಮತ್ತು ಹೆಡ್ಗೆವಾರ್ ಅವರ ಪಾಠ ತೆಗೆಯಲು ಸರ್ಕಾರ ಮುಂದಾಗಿದೆ

    ಸರ್ಕಾರ ಪ್ರಜಾಪ್ರಭುತ್ವದ ರೀತಿಯಲ್ಲಿ ಆಹ್ವಾನಿಸಿದರೆ ನಾನು ಮೌನಿಯಾಗಿರಲ್ಲ

ಶಿವಮೊಗ್ಗ: ನನ್ನ ಅವಧಿಯ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಿಂದ ಸರ್ಕಾರಕ್ಕೆ ಶಿಫಾರಸು ಆದ ಮೇಲೆ ಅದು ಸರ್ಕಾರದ ಸ್ವತ್ತು. ಅದನ್ನ ತೆಗೆಯಿರಿ, ಇದನ್ನ ತೆಗೆಯಿರಿ, ಇದನ್ನ ಯಾಕೆ ತೆಗೆದ್ರಿ ಎಂದು ಪ್ರಶ್ನಿಸಲು ನಮಗೆ ಸಂಬಂಧವಿಲ್ಲ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರರಾಗಿರುತ್ತದೆ ಎಂದು ಚಿಂತಕ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ರೋಹಿತ್​ ಚಕ್ರತೀರ್ಥ, ಪರಿಷ್ಕರಣ ಮಾಡುವಾಗ ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನು ಆಹ್ವಾನಿಸಿದ್ದೆವು. ಆಗ ಅವರು ನಮ್ಮ ಆಹ್ವಾನಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಈಗಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯು ಒಂದು ವೇಳೆ ಚರ್ಚೆಗೆ ಆಹ್ವಾನಿಸಿದರೆ ನಾನು ಸಿದ್ಧ. ಪಠ್ಯ ಸೇರಿಸಲು ಸ್ಪಷ್ಟ ಕಾರಣ ಕೊಡಲು ನಾನು ಸಿದ್ದನಿದ್ದೇನೆ. ಪಠ್ಯ ಪರಿಷ್ಕರಣೆಯನ್ನು ಜನ ಸಾಮಾನ್ಯರು ಒಪ್ಪಿಕೊಂಡರೆ ಒಳ್ಳೆಯದು. ಆದರೆ ಸರ್ಕಾರ ಪ್ರಜಾಪ್ರಭುತ್ವದ ರೀತಿಯಲ್ಲಿ ಆಹ್ವಾನಿಸಿದರೆ ನಾನು ಮೌನಿಯಾಗಿರಲ್ಲ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ಪ್ರಜಾಪ್ರಭುತ್ವದ ರೀತಿಯಲ್ಲಿ ಚರ್ಚೆ ನಡೆದರೆ ಅಭ್ಯಂತರವಿಲ್ಲ. ಸಾವರ್ಕರ್ ಮತ್ತು ಹೆಡ್ಗೆವಾರ್ ಅವರ ಪಾಠ ತೆಗೆಯಲು ಸರ್ಕಾರ ಮುಂದಾಗಿದೆ. ಯಾಕೆ ಅಂತ ಅದನ್ನ ಸರ್ಕಾರಕ್ಕೆ ನೀವು ಕೇಳಬೇಕು.ಇವರು ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ದಾಖಲೆ ಒದಗಿಸಲು ನಾನು ಸಿದ್ಧನಿದ್ದೇನೆ. ಮಕ್ಕಳಲ್ಲಿ ರಾಷ್ಟ್ರೀಯತೆಯನ್ನ ಬೆಳಸಲು ನಮ್ಮ‌ ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಈ ಇಬ್ವರು ದಿಗ್ಗಜರ ಪಾಠ ಸೇರಿಸಿದ್ವಿ. ಈಗ ಅದನ್ನ ಸರ್ಕಾರ ತೆಗೆಯಲು ಮುಂದಾದರೆ ಅದಕ್ಕೆ ಅಭ್ಯಂತರವಿಲ್ಲ ಎಂದು ರೋಹಿತ್​ ಚಕ್ರತೀರ್ಥ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವರ್ಕರ್ ಮತ್ತು ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ; ರೋಹಿತ್ ಚಕ್ರತೀರ್ಥ

https://newsfirstlive.com/wp-content/uploads/2023/06/Rohit-Chakratheertha.jpg

Load More