/newsfirstlive-kannada/media/post_attachments/wp-content/uploads/2024/10/ROHIT_CUP_T20.jpg)
2024ರ ಟಿ20 ವಿಶ್ವಕಪ್ ಅನ್ನು ಟೀಮ್ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿತ್ತು. ಜೂನ್ 29 ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನ ಮಣಿಸಿ ಭಾರತ ಟ್ರೋಫಿಗೆ ಮುತ್ತಿಕ್ಕಿತ್ತು. ಈ ಫೈನಲ್ ಪಂದ್ಯ ಗೆಲುವಿಗೆ ರಿಷಬ್ ಪಂತ್ ಮುಖ್ಯ ಕಾರಣವೆಂದು ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ISRO ಸಂಸ್ಥೆಯಲ್ಲಿ ಹಲವು ಹುದ್ದೆಗಳ ನೇಮಕಾತಿ; ಸ್ಯಾಲರಿ ₹67,700.. ಇಂದೇ ಅಪ್ಲೇ ಮಾಡಿ!
ಹಿಂದಿಯ ಜನಪ್ರಿಯ ಕಾರ್ಯಕ್ರಮ ಕಪಿಲ್ ಶೋನಲ್ಲಿ ರೋಹಿತ್ ಶರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಸೂರ್ಯಕುಮಾರ್, ಅರ್ಷದೀಪ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಪಂದ್ಯದಲ್ಲಿ ಗೆಲುವಿಗಾಗಿ ರಿಷಬ್ ಪಂತ್ ಉಪಯೋಗಿಸಿದ ಸೂಪರ್ ಟ್ರಿಕ್ ಅನ್ನು ರಿವೀಲ್ ಮಾಡಿದ್ದಾರೆ. ಕ್ರಿಕೆಟ್ ಆಡುವಾಗ ಟ್ರಿಕ್ ಉಪಯೋಗಿಸಿ ಎದುರಾಳಿಯ ಇಂಟರೆಸ್ಟ್ ಕಡಿಮೆ ಮಾಡಲಾಯಿತು. ಅದನ್ನ ಟಿ20 ವಿಶ್ವಕಪ್ ಫೈನಲ್ನಲ್ಲಿ ಮಾಡಿದ್ದನ್ನ ರೋಹಿತ್ ಶರ್ಮಾ ನೆನಪಿಸಿದ್ದಾರೆ.
ಇದನ್ನೂ ಓದಿ: ಇಂದು ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್.. T20 ವರ್ಲ್ಡ್ಕಪ್ನಲ್ಲಿ ಯಾರಿಗೆ ಗೆಲುವು?
ದಕ್ಷಿಣ ಆಫ್ರಿಕಾ ಫೈನಲ್ ಮ್ಯಾಚ್ ಗೆಲ್ಲಲು ಕೇವಲ 30 ಎಸೆತಗಳಲ್ಲಿ 30 ರನ್ ಬೇಕಿದ್ದವು. ಪಂದ್ಯ ವೇಗವಾಗಿ ನಡೆಯುತ್ತಿತ್ತು. ಹೀಗಾಗಿ ಇದಕ್ಕೂ ಮೊದಲು ಸಣ್ಣ ಬ್ರೇಕ್ ತೆಗೆದುಕೊಳ್ಳಲಾಗಿತ್ತು. ಅದು ಹೇಗೆಂದರೆ ರಿಷಬ್ ಪಂತ್ ಐಡಿಯಾ ಉಪಯೋಗಿಸಿ ಪಂದ್ಯವನ್ನ ಕೆಲ ಸಮಯ ನಿಲ್ಲಿಸಿದ್ದರು. ಗಾಯವಾಗಿದೆ ಎನ್ನುವ ರೀತಿ ಪಂತ್ ಮೈದಾನದಲ್ಲಿ ಬಿದ್ದಿದ್ದರು. ತಕ್ಷಣ ಪಿಸಿಯೋ ಥೆರಪಿಸ್ಟ್ ಡಾಕ್ಟರ್ ಬಂದು ಅವರ ತೊಡೆಗೆ ಬ್ಯಾಂಡೇಜ್, ಟೇಪಿಂಗ್ ಮಾಡಿದರು.
Rohit Sharma praising Rishab Pant for the break when they needed 30 on 30 #RohitSharma?#RishabhPantpic.twitter.com/JwZjihkzUT
— Sarthak Aggarwal ?? (@Sarthak130305)
Rohit Sharma praising Rishab Pant for the break when they needed 30 on 30 #RohitSharma𓃵#RishabhPantpic.twitter.com/JwZjihkzUT
— Sarthak Aggarwal 🇮🇳 (@Sarthak130305) October 5, 2024
">October 5, 2024
ಇದರಿಂದ ಪಂದ್ಯ ಕೆಲ ಸಮಯ ನಿಲ್ಲಿಸಲಾಗಿತ್ತು. ಮ್ಯಾಚ್ ಸ್ಲೋ ಆಗಿದ್ದರಿಂದ ಕ್ಲಾಸಿನ್ ಮ್ಯಾಚ್ ಸ್ಟಾರ್ಟ್ ಆಗುವುದನ್ನ ಕಾಯುತ್ತಿದ್ದರು. ವೇಗವಾಗಿ ನಡೆಯುತ್ತಿದ್ದ ಪಂದ್ಯಕ್ಕೆ ಬ್ರೇಕ್ ಹಾಕಿದಂತೆ ಆಯಿತು. ಆಫ್ರಿಕಾ ಪ್ಲೇಯರ್ಸ್ ಬ್ಯಾಟಿಂಗ್ ವೇಗವನ್ನ ಕಡಿಮೆ ಮಾಡಿ ಆಸಕ್ತಿ ಕಸಿದುಕೊಂಡಂತೆ ಆಯಿತು. ಹೀಗಾಗಿ ಫೈನಲ್ನಲ್ಲಿ ಪಂತ್ ಟ್ರಿಕ್ ಸಖತ್ ಆಗಿಯೇ ವರ್ಕೌಟ್ ಆಯಿತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ