Advertisment

ರೋಹಿತ್ ಬ್ಯಾಟಿಂಗ್ ಸ್ಲಾಟ್ ತ್ಯಾಗ..?ರಾಹುಲ್​ಗಾಗಿ ಕೆಳ ಕ್ರಮಾಂಕಕ್ಕೆ ರೋಹಿತ್..?

author-image
Gopal Kulkarni
Updated On
Flat track Bully.. ರೋಹಿತ್ ಟೆಸ್ಟ್​ಗೆ ಗುಡ್ ಬೈ ಹೇಳಲು ಇದೇ ಸಕಾಲ.. ಕಾರಣ ಇಲ್ಲಿದೆ..!
Advertisment
  • ಪಿಂಕ್ ಬಾಲ್ ಫೈರಿ ಬ್ಯಾಟಲ್​ಗೆ ಕೌಂಟ್​ಡೌನ್
  • ರಾಹುಲ್​ಗಾಗಿ ಆ ತ್ಯಾಗ ಮಾಡಲಿದ್ದಾರಾ ರೋಹಿತ್?
  • ಕೆಳಕ್ರಮಾಂಕದಲ್ಲಿ ಆಡಲು ಸಜ್ಜಾದ್ರಾ ಕ್ಯಾಪ್ಟನ್​?

ರೋಹಿತ್ ಶರ್ಮಾ, ಟೀಮ್ ಇಂಡಿಯಾದ ಸೇನಾಧಿಪತಿ.. ಸೇನಾಧಿಪತಿಯಾಗಿ ಗೆಲುವೊಂದೇ ಈತನ ಗುರಿ. ಆದ್ರೆ, ಈ ಗೆಲುವಿಗಾಗಿ ಕೆಲವೊಂದು ತ್ಯಾಗಕ್ಕೂ ಸಿದ್ಧವಿರಬೇಕು.. ಇದು ನಿಜವಾದ ನಾಯಕನ ಲಕ್ಷಣ. ರೋಹಿತ್ ಶರ್ಮಾಗೂ ತ್ಯಾಗಕ್ಕೂ ಏನು ಸಂಬಂಧ ಅಂತ ನಿಮಗೆ ಅನಿಸಬಹುದು. ಸಂಬಂಧ ಇದೆ

Advertisment

publive-image

ಅಡಿಲೇಡ್​ನ ಪಿಂಕ್ ಬಾಲ್ ಫೈರಿ ಬ್ಯಾಟಲ್​ಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆಯಿಂದ ಆರಂಭವಾಗಲಿರುವ ಪಿಂಕ್​ಬಾಲ್ ಟೆಸ್ಟ್​ ಗೆಲ್ಲಲು ತೆರೆ ಹಿಂದಿನ ಸ್ಟ್ರಾಟರ್ಜಿಗಳು ಜೋರಾಗಿಯೇ ನಡೀತಿವೆ. ಅಭ್ಯಾಸ ಪಂದ್ಯವನ್ನೂ ಆಡಿರುವ ಟೀಮ್ ಇಂಡಿಯಾ, ಈಗ ಪಿಂಕ್​ ಬಾಲ್ ಟೆಸ್ಟ್​ನಲ್ಲಿ ಫೈರಿ ಪರ್ಫಾಮೆನ್ಸ್​ ನೀಡಲು ಸಜ್ಜಾಗಿದೆ. ಈ ನಡುವೆ ಟೀಮ್ ಇಂಡಿಯಾದ ಓಪನರ್ಸ್ ಯಾರ್ ಆಗ್ತಾರೆ ಅನ್ನೋದು ಹಾಟ್ ಡಿಬೇಟ್ ಆಗಿದೆ. ಆದ್ರೆ, ಟೆಸ್ಟ್​ ಪಂದ್ಯಕ್ಕೂ ಮುನ್ನ ರೋಹಿತ್, ತೆಗೆದುಕೊಂಡಿರುವ ಒಂದೇ ಒಂದು ಬಿಗ್ ಡಿಸಿಷನ್​​ ತ್ಯಾಗಮೂರ್ತಿಯನ್ನಾಗಿಸಿದೆ.

ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ, ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಪಿಂಕ್​​​ ಬಾಲ್​ ಟೆಸ್ಟ್​ನಲ್ಲಿ ಓಪನರ್ಸ್ ಯಾರ್​ ಆಗ್ತಾರೆ ಅನ್ನೋ ಪ್ರಶ್ನೆ ಇನ್ನಿಲ್ಲದೆ ಕಾಡ್ತಿದೆ. ಆದ್ರೀಗ ಈ ಪ್ರಶ್ನೆಗೆ 2 ದಿನಗಳ ಅಭ್ಯಾಸ ಪಂದ್ಯದಲ್ಲೇ ಉತ್ತರ ಸಿಕ್ಕಿದೆ. ಕೆ.ಎಲ್.ರಾಹುಲ್​​​​​​​​​​​ಗಾಗಿ ಹಿಟ್​ಮ್ಯಾನ್ ರೋಹಿತ್, ತಮ್ಮ ಆರಂಭಿಕನ ಸ್ಥಾನ ತ್ಯಾಗ ಮಾಡಲು ಮುಂದಾಗಿದ್ದಾರೆ. ಪರ್ತ್​ನಲ್ಲಿ ಯಶಸ್ವಿಯಾಗಿದ್ದ ಜೈಸ್ವಾಲ್ ಆ್ಯಂಡ್ ಕೆ.ಎಲ್.ರಾಹುಲ್ ಜೋಡಿಯೇ ಇನ್ನಿಂಗ್ಸ್​ ಆರಂಭಿಸುವುದು ಕನ್ಫರ್ಮ್​..
ಅಡಿಲೇಡ್​ನಲ್ಲಿ ಕೆ.ಎಲ್.ರಾಹುಲ್, ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದ್ರೆ. ರೋಹಿತ್ ಶರ್ಮಾ ಕೆಳ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ. ಆದ್ರೆ, ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ನೆಟ್ಸ್​ನಲ್ಲಿ ಪಂತ್ ಜೊತೆಗೆ ರೋಹಿತ್ ಬ್ಯಾಟಿಂಗ್..!
ಅಭ್ಯಾಸ ಪಂದ್ಯದಲ್ಲಿ ಮಿಡಲ್ ಆರ್ಡರ್​ನಲ್ಲಿ ಬ್ಯಾಟಿಂಗ್ ನಡೆಸಿದ್ದ ರೋಹಿತ್, ನೆಟ್ಸ್​ ಸೆಷನ್​ ವೇಳೆ ರಿಷಭ್ ಪಂತ್ ಜೊತೆಗೆ ಬ್ಯಾಟಿಂಗ್ ನಡೆಸ್ತಿದ್ದಾರೆ. ಇದು ಸಹಜವಾಗೇ ರೋಹಿತ್​​​​​​​​​​​​​, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾರೆ ಅನ್ನೋ ಸೂಚನೆ ನೀಡ್ತಿದೆ. ಇದಿಷ್ಟೇ ಅಲ್ಲ.! ಟೆಸ್ಟ್​ ಡೆಬ್ಯು ಮ್ಯಾಚ್​ನಲ್ಲಿ ರೋಹಿತ್​ ಕಣಕ್ಕಿಳಿದಿದ್ದ 6ನೇ ಸ್ಲಾಟ್​ನಲ್ಲೇ ಮತ್ತೆ ಬ್ಯಾಟ್ ಬೀಸ್ತಾರೆ ಅನ್ನೋ ಸಂದೇಶ ರವಾನಿಸ್ತಿದೆ. ಇನ್​ಫ್ಯಾಕ್ಟ್​_ ಇದಕ್ಕೆ ಕಾರಣವೂ ಇದೆ.

Advertisment

publive-image

ಓಪನರ್ ಆಗಿ ರೋಹಿತ್, 64 ಇನ್ನಿಂಗ್ಸ್​ಗಳಿಂದ 44ರ ಬ್ಯಾಟಿಂಗ್ ಅವರೇಜ್​ನಲ್ಲಿ 2685 ರನ್ ಗಳಿಸಿದ್ದಾರೆ. 8 ಅರ್ಧಶತಕ, 9 ಶತಕ ಹೊಂದಿದ್ದಾರೆ. ನಂಬರ್​ 3 ಸ್ಲಾಟ್​ನಲ್ಲಿ 5 ಇನ್ನಿಂಗ್ಸ್​ಗಳಿಂದ​​​​​​​​ 107 ರನ್ ಗಳಿಸಿರುವ ರೋಹಿತ್, 21.4ರ ಬ್ಯಾಟಿಂಗ್ ಅವರೇಜ್ ಹೊಂದಿದ್ದಾರೆ. ನಂಬರ್​ 4ರಲ್ಲಿ ಆಡಿದ ಒಂದೇ ಒಂದು ಇನ್ನಿಂಗ್ಸ್​ನಲ್ಲಿ ಕೇವಲ 4 ರನ್ ಗಳಿಸಿರುವ ರೋಹಿತ್, 5ನೇ ಕ್ರಮಾಂಕದಲ್ಲಿ 16 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 29.1ರ ಬ್ಯಾಟಿಂಗ್ ಅವರೇಜ್​ನಲ್ಲಿ 432 ರನ್ ಗಳಿಸಿದ್ದಾರೆ. ಈ ಪೈಕಿ 3 ಅರ್ಧಶತಕ ದಾಖಲಿಸಿದ್ರೆ. ಇನ್ನು 6ನೇ ಕ್ರಮಾಂಕದಲ್ಲಿ 25 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್, 54.5ರ ಬ್ಯಾಟಿಂಗ್ ಅವರೇಜ್​ನಲ್ಲಿ 1037 ರನ್ ಗಳಿಸಿದ್ದಾರೆ. 6 ಅರ್ಧಶತಕ, 3 ಶತಕ ಸಿಡಿಸಿ ಉತ್ತಮ ರೆಕಾರ್ಡ್​ ಹೊಂದಿದ್ದಾರೆ.ಹೀಗಾಗಿ ಔಟ್​ ಆಫ್ ಫಾರ್ಮ್​ನಲ್ಲಿರುವ ರೋಹಿತ್, ಪಂತ್ ಜೊತೆ ಕೌಂಟರ್​​ ಇನ್ನಿಂಗ್ಸ್​ ಕಟ್ಟಲು ಸಹಕಾರಿಯೂ ಆಗುತ್ತೆ. ಜೊತೆಗೆ ತಂಡಕ್ಕೂ ನೆರವಾಗುತ್ತೆ.

publive-image

ನಾಯಕನಾಗಿ ಹಿಟ್​ಮ್ಯಾನ್ ರೋಹಿತ್ ಮಾದರಿ ಹೆಜ್ಜೆ ?
ಪರ್ತ್​ನಂತ ಚಾಲೆಂಜಿಂಗ್ ಕಂಡೀಷನ್ಸ್​ನಲ್ಲಿ ಕೆ.ಎಲ್.ರಾಹುಲ್, ಅದ್ಬುತ ಇನ್ನಿಂಗ್ಸ್​ ಕಟ್ಟಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 26 ರನ್​ಗಳ ಕಾಣಿಕೆ ನೀಡಿದ್ದ ರಾಹುಲ್, 2ನೇ ಇನ್ನಿಂಗ್ಸ್​ನಲ್ಲಿ 77 ರನ್​ ಸಿಡಿಸಿದ್ದಾರೆ. ಸದ್ಯ ಓಪನರ್ ಆಗಿ ರನ್ ಕೊಳ್ಳೆ ಹೊಡೆದಿರುವ ರಾಹುಲ್, ಬೌನ್ಸಿ ಟ್ರ್ಯಾಕ್​ನಲ್ಲಿ ಪರಿಣಾಮಕಾರಿ ಬ್ಯಾಟರ್.. ಹೀಗಾಗಿ ಕೆ.ಎಲ್.ರಾಹುಲ್​​ಗೆ ಓಪನಿಂಗ್ ಸ್ಲಾಟ್​ ಬಿಟ್ಟು ಕೊಡುವ ಮೂಲಕ ರೋಹಿತ್,​​ ಮಾದರಿ ಹೆಜ್ಜೆ ಇಟ್ಟಿದ್ದಾರೆ.. ಆ ಮೂಲಕ ಎಮ್.ಎಸ್.ಧೋನಿ, ವಿರಾಟ್​ ಕೊಹ್ಲಿಯನ್ನು ನೆನಪಿಸಿದ್ದಾರೆ.

publive-image

ರಾಹುಲ್ ಟೆಸ್ಟ್ ಕರಿಯರ್​ಗೆ ಬಿಗ್ ಬ್ರೇಕ್ ಸಿಗುತ್ತಾ..?
ಪ್ರತಿ ಸರಣಿಯಲ್ಲೂ ಕೆ.ಎಲ್.ರಾಹುಲ್, ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಆದ್ರೆ ಬೌನ್ಸಿ ಟ್ರ್ಯಾಕ್​ಗಳಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟುವ ಕೆ.ಎಲ್.ರಾಹುಲ್​ಗೆ ಭವಿಷ್ಯದ ದೃಷ್ಟಿಯಿಂದ ಮೋಸ್ಟ್ ಕ್ರೂಶಿಯಲ್ ಪಂದ್ಯಗಳಾಗಿವೆ​. ಹೀಗಾಗಿ ರಾಹುಲ್​​ ಟೆಸ್ಟ್​ ಕರಿಯರ್​ಗೆ ಬಿಗ್ ಬ್ರೇಕ್ ಸಿಗಬೇಕಾದ್ರೆ, ಈ ಸರಣಿಯಲ್ಲಿ ಸಿಕ್ಕ ಅವಕಾಶ ಬಾಚಿಕೊಳ್ಳಬೇಕಿದೆ. ಇನ್​​​ಫ್ಯಾಕ್ಟ್​_ ಚಾಲೆಂಜಿಂಗ್ ಕಂಡೀಷನ್ಸ್​ನಲ್ಲಿ ರನ್ ಗಳಿಸುವ ಚಾಕಚಕತ್ಯೆ ಹೊಂದಿರುವ ರಾಹುಲ್​​​, ಈ ಚಾನ್ಸ್​ ಎನ್​ಕ್ಯಾಶ್ ಮಾಡಿಕೊಳ್ಳುತ್ತಾರೆ ಡೌಟೇ ಇಲ್ಲ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment