/newsfirstlive-kannada/media/post_attachments/wp-content/uploads/2024/06/ROHIT_SHARMA_BIG_SIX.jpg)
T20 ವರ್ಲ್ಡ್ಕಪ್ನ ಆಸ್ಟ್ರೇಲಿಯಾ ಜೊತೆಗಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಬಾರಿಸಿದ ಚೆಂಡು ಸ್ಟೇಡಿಯಂನ ಟಾಪ್ನಲ್ಲಿ ಬಿದ್ದಿದೆ. ಇದು 100 ಮೀಟರ್ನಷ್ಟು ದೂರ ಹೋಗಿದೆ. ಈ ಶಾಟ್ ನೋಡಿ ಆಸಿಸ್ ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಒಂದು ಕ್ಷಣ ಅವಾಕ್ ಆಗಿದ್ದಾರೆ.
ಇದನ್ನೂ ಓದಿ:ರೋಹಿತ್ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್ಮ್ಯಾನ್
ಗ್ರಾಸ್ ಐಲೆಟ್ನ ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕ್ಯಾಪ್ಟನ್ ರೋಹಿತ್ ಶರ್ಮಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಮಿಡ್-ವಿಕೆಟ್ ಮೇಲೆ ರೋಹಿತ್ ಶರ್ಮಾ ಬಾರಿಸಿದ ಬಾಲ್ ಸ್ಟೇಡಿಯಂನ ಟಾಪ್ನಲ್ಲಿ ಹೋಗಿ ಬಿದ್ದಿದೆ. ಇದು ಬರೋಬ್ಬರಿ 100 ಮೀಟರ್ ದೂರ ಹೋಗಿದ್ದು ಈ ಟೂರ್ನಿಯಲ್ಲಿ ಅತ್ಯಂತ ದೊಡ್ಡ ಸಿಕ್ಸ್ ಆಗಿದೆ. ಅಲ್ಲದೇ T20ಯಲ್ಲಿ 200 ಸಿಕ್ಸರ್ಗಳನ್ನು ಬಾರಿಸಿದ ವಿಶ್ವದ ಮೊಟ್ಟ ಮೊದಲ ಬ್ಯಾಟ್ಸ್ಮನ್ ಎನ್ನುವ ಖ್ಯಾತಿಗೆ ರೋಹಿತ್ ಶರ್ಮಾ ಕಾರಣರಾದರು.
ಇದನ್ನೂ ಓದಿ: ಹೊಡಿಬಡಿ ಬ್ಯಾಟಿಂಗ್ ಮಾಡ್ತಿರೋ ಕ್ಯಾಪ್ಟನ್ ರೋಹಿತ್.. ಹಾಫ್ಸೆಂಚುರಿ ಸಿಡಿಸಿದ ಹಿಟ್ ಮ್ಯಾನ್
ಓಪನರ್ ಆಗಿ ಕ್ರೀಸ್ ಆಗಮಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಉತ್ತಮ ಆರಂಭ ಪಡೆಯಲಿಲ್ಲ. ವಿರಾಟ್ ಕೊಹ್ಲಿ ಡಕೌಟ್ ಆದರು. ಆದರೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ರೋಹಿತ್, ಕೇವಲ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಮೇತ 92 ರನ್ಗಳನ್ನ ಸಿಡಿಸಿದರು. ಇನ್ನೇನು ಸೆಂಚುರಿಗೆ ಕೇವಲ 8 ರನ್ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಔಟ್ ಆದರು.
T20 ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ಸ್
- ರೋಹಿತ್ ಶರ್ಮಾ- 157 ಇನ್ನಿಂಗ್ಸ್ನಲ್ಲಿ 203 ಸಿಕ್ಸ್ಗಳು
- ಮಾರ್ಟಿನ್ ಗಪ್ಟಿಲ್- 122 ಪಂದ್ಯಗಳಿಂದ 173 ಸಿಕ್ಸ್ಗಳು
- ಮ್ಯಾಕ್ಸ್ವೆಲ್- 113 ಮ್ಯಾಚ್ಗಳಲ್ಲಿ 133 ಸಿಕ್ಸರ್ಗಳು
- ನಿಕೋಲಸ್ ಪೂರನ್- 95 ಪಂದ್ಯಗಳಲ್ಲಿ 132 ಸಿಕ್ಸರ್ಸ್ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ