/newsfirstlive-kannada/media/post_attachments/wp-content/uploads/2025/03/Rohit-sharma-5.jpg)
ಟೀಮ್ ಇಂಡಿಯಾ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಭಾರತ ತಂಡ ದಾಖಲೆ ಬರೆದಿದೆ. ಭಾರತ ತಂಡದ ಗೆಲುವಿನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರಮುಖ ಪಾತ್ರವಹಿಸಿದ್ರು.
ಗೆಲುವಿನ ಬಗ್ಗೆ ಏನಂದ್ರು ರೋಹಿತ್?
ಭಾರತ ತಂಡ ಗೆಲುವಿನ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ. ಟೂರ್ನಿಯುದ್ದಕ್ಕೂ ನಮ್ಮನ್ನು ಬೆಂಬಲಿಸಿ ಎಲ್ಲರಿಗೂ ಧನ್ಯವಾದಗಳು. ಇದು ನಮ್ಮ ದೇಶ ಅಲ್ಲ, ನಮ್ಮ ಹೋಮ್ ಗ್ರೌಂಡ್ ಅಲ್ಲ. ಆದ್ರೂ ಜನ ನಮ್ಮ ಹೋಮ್ ಗ್ರೌಂಡ್ ಎಂಬಂತೆ ಫೀಲ್ ಮಾಡಿಸಿದರು. ಭಾರತ ತಂಡವನ್ನು ಬೆಂಬಲಿಸಿ ಲಕ್ಷಾಂತರ ಜನ ನೆರೆದಿದ್ದರು ಎಂದರು.
ಇಡೀ ತಂಡ ಗೆಲುವಿಗಾಗಿ ಶ್ರಮಿಸಿದೆ. ನಮ್ಮ ಸ್ಪಿನ್ನರ್ಸ್ ಅಂತೂ ಅದ್ಭುತ ಆಟ ಆಡಿದ್ರು. ನಮ್ಮ ಮೇಲೆ ಬಹಳ ನಿರೀಕ್ಷೆಗಳಿದ್ದವು. ನಮ್ಮ ಸ್ಟ್ರೆಂಥ್ ಮತ್ತು ವೀಕ್ನೇಸ್ ಎಲ್ಲಾ ಗೊತ್ತಿತ್ತು. ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇದೇ ಕಾರಣಕ್ಕೆ ನಾವು ಕೆ.ಎಲ್ ರಾಹುಲ್ ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡಲಿ ಎಂದು ಒತ್ತಡ ಹಾಕಿದ್ದು ಎಂದರು.
ಮಿಡಲ್ ಆರ್ಡರ್ ಬ್ಯಾಟ್ ಮಾಡಲು ಕೆ.ಎಲ್ ರಾಹುಲ್ ಅವರಿಂದ ಮಾತ್ರ ಸಾಧ್ಯ. ಆ ಕಾಮ್ನೆಸ್ ಮತ್ತು ಡೀಸೆಂಟ್ ಬ್ಯಾಟಿಂಗ್ ಎಲ್ಲರಿಗೂ ಇಷ್ಟ ಆಗುತ್ತೆ. ಅವರೊಂದಿಗೆ ಬ್ಯಾಟಿಂಗ್ ಮಾಡುವ ಎಲ್ಲರಿಗೂ ಕೆ.ಎಲ್ ರಾಹುಲ್ ಫ್ರೀಡಮ್ ಕೊಡುತ್ತಾರೆ ಎಂದರು. ಭಾರತದ ಗೆಲುವಿಗೆ ಎಲ್ಲರೂ ಕಾರಣ ಎಂದರು.
ಇದನ್ನೂ ಓದಿ: 6,6,6,4,4,4,4,4,4; ಸ್ಫೋಟಕ ಅರ್ಧ ಶತಕ ಸಿಡಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ