newsfirstkannada.com

VIDEO: ಇಶಾನ್​​​, ಶ್ರೇಯಸ್​ ಅಯ್ಯರ್​​ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ ರೋಹಿತ್​​!

Share :

Published February 29, 2024 at 10:23pm

  ಇಶಾನ್​ ಕಿಶನ್​, ಶ್ರೇಯಸ್ ಅಯ್ಯರ್​ ವಿರುದ್ಧ ರೋಹಿತ್​ ಕೆಂಡಾಮಂಡಲ

  ಇಬ್ಬರು ಸ್ಟಾರ್​ ಆಟಗಾರರ ವಿರುದ್ಧ ಪರೋಕ್ಷವಾಗಿ ರೋಹಿತ್​​ ಆಕ್ರೋಶ

  ಹಸಿವು ಇದ್ದವರಿಗೆ ಮಾತ್ರ ತಂಡದಲ್ಲಿ ಅವಕಾಶ ಎಂದು ಪುನರುಚ್ಚಾರಣೆ!

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರಾದ ಇಶಾನ್​​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ಗೆ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್​ ನೀಡಿ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಈ ಬೆನ್ನಲ್ಲೇ ಎಚ್ಚೆತ್ತ ಅಯ್ಯರ್​ ಮಾತ್ರ ಮಾರ್ಚ್​​ 2ನೇ ತಾರೀಕಿನಿಂದ ತಮಿಳುನಾಡು ವಿರುದ್ಧ ನಡೆಯೋ ರಣಜಿ ಸೆಮಿ ಫೈನಲ್​​ನಲ್ಲಿ ಮುಂಬೈ ತಂಡದ ಪರ ಆಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಇಶಾನ್​ ಕಿಶನ್​​ ಐಪಿಎಲ್​​ ತಯಾರಿಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಇಬ್ಬರ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ.

ಹೌದು, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್​ ಬಳಿಕ ನಡೆಯೋ 2024ರ ಟಿ20 ವಿಶ್ವಕಪ್​ನಲ್ಲೂ ಇಶಾನ್ ಮತ್ತು ಅಯ್ಯರ್ ಭಾಗವಹಿಸುವುದು ಬಹುತೇಕ ಡೌಟ್​​​​. ಇಬ್ಬರನ್ನು ಐಸಿಸಿ ಮಹತ್ವದ ಟೂರ್ನಿಯಿಂದಲೇ ಕೈ ಬಿಡೋ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಇನ್ನು, ಈ ಬಗ್ಗೆ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ಸವಾಲುಗಳನ್ನು ಸ್ವೀಕರಿಸಿ ಯಶಸ್ಸು ಸಾಧಿಸಬೇಕು ಎನ್ನುವ ‘ಹಸಿವು’ ಇರುವ ಆಟಗಾರರಿಗೆ ಮಾತ್ರ ಅವಕಾಶ ನೀಡುತ್ತೇವೆ ಎಂದು ಈಗಾಗಲೇ ಹೇಳಿದ್ದೇನೆ. ‘ಹಸಿವು’ ಇಲ್ಲದವರನ್ನು ಆಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದಿದ್ದಾರೆ.

ಇಶಾನ್‌ ಕಿಶನ್‌ ಸೇರಿದಂತೆ ಹಲವರು ಭಾರತ ತಂಡದಿಂದ ಹೊರಗುಳಿದಿದ್ದರು. ಈ ಸಂದರ್ಭದಲ್ಲಿ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿದ್ದರು. ಈ ಬಗ್ಗೆ ಬಿಸಿಸಿಐ ಸೂಕ್ತ ಕ್ರಮದ ಎಚ್ಚರಿಗೆ ನೀಡಿದ್ರೂ ಕೆಲ ಆಟಗಾರರು ಅದನ್ನು ಕಡೆಗಣಿಸಿದ್ದಾರೆ. ಇದರ ಮಧ್ಯೆ ರೋಹಿತ್‌ ಹೇಳಿಕೆ ಬಂದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಇಶಾನ್​​​, ಶ್ರೇಯಸ್​ ಅಯ್ಯರ್​​ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ ರೋಹಿತ್​​!

https://newsfirstlive.com/wp-content/uploads/2024/02/Rohit-Sharma_PC.jpg

Load More