newsfirstkannada.com

ಕೊಹ್ಲಿ ಬಗ್ಗೆ ರೋಹಿತ್​, ಅಗರ್ಕರ್ ಬಿಸಿ ಬಿಸಿ ಚರ್ಚೆ.. ಶ್ರೇಯಸ್​ ಅಯ್ಯರ್​ಗೆ ನಡುಕ ಶುರು

Share :

Published February 7, 2024 at 3:11pm

Update February 7, 2024 at 3:12pm

    ಉಳಿದ 3 ಪಂದ್ಯಗಳ ಟೀಮ್​ ಸೆಲೆಕ್ಷನ್​ಗೆ ಕೌಂಟ್​​ಡೌನ್​.!

    ವೈಜಾಗ್​​ ಗ್ರೌಂಡ್​ನಲ್ಲೇ ನಡೀತು ಸೆಲೆಕ್ಷನ್​ ಮೀಟಿಂಗ್..!

    ಕ್ಯಾಪ್ಟನ್​ ರೋಹಿತ್​ - ಸೆಲೆಕ್ಟರ್​ ಅಗರ್ಕರ್​ ಬಿಸಿ ಬಿಸಿ ಚರ್ಚೆ

ಇಂಡೋ – ಇಂಗ್ಲೆಂಡ್​​ ನಡುವಿನ ಅಂತಿಮ 3ನೇ ಟೆಸ್ಟ್​ಗೆ ಟೀಮ್​ ಇಂಡಿಯಾ ಪ್ರಕಟ ಯಾವಾಗ? ಕ್ರಿಕೆಟ್​ ವಲಯವನ್ನ ಕಾಡ್ತಿರೋ ಪ್ರಶ್ನೆಯಿದು. ಅಸಲಿಗೆ 2ನೇ ಟೆಸ್ಟ್​ ಅಂತ್ಯದ ಬೆನ್ನಲ್ಲೇ ಈ ಬಗ್ಗೆ ಜೋರು ಚರ್ಚೆ ನಡೆದಿದೆ. ಆದ್ರೆ, ಫೈನಲ್​ ಡಿಸಿಶನ್​ಗೆ ಬಂದಿಲ್ಲ.. ಯಾಕಂದ್ರೆ, ಸೆಲೆಕ್ಷನ್​ ಕಮಿಟಿ ಹಾಗೂ ಬಿಸಿಸಿಐನ ಲೆಕ್ಕಾಚಾರ ಬೇರೆಯಿದೆ.

ಹೈದ್ರಾಬಾದ್​ ಟೆಸ್ಟ್​​ನಲ್ಲಿ ಸೋಲಿನ ಅವಮಾನ ಎದುರಿಸಿದ್ದ ಟೀಮ್​ ಇಂಡಿಯಾ, ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್​​ ಪಡೆಯನ್ನ ಬೇಟೆಯಾಡಿದೆ. 2ನೇ ಟೆಸ್ಟ್​ನಲ್ಲಿ ಘರ್ಜಿಸಿದ ಟೀಮ್​ ಇಂಡಿಯಾ ಕಲಿಗಳು ಸಾಲಿಡ್​ ಆಟದಿಂದ ಆಂಗ್ಲರ ಅಹಂಗೆ ತಿರುಗೇಟು ಕೊಟ್ಟಿದ್ದಾರೆ. ಸೋತು ಗೆದ್ದಿರುವ ಟೀಮ್​ ಇಂಡಿಯಾ ಇದೀಗ ಸರಣಿ ಗೆಲುವಿನತ್ತ ಚಿತ್ತ ನೆಟ್ಟಿದೆ.

ಕ್ಯಾಪ್ಟನ್​ ರೋಹಿತ್​ – ಸೆಲೆಕ್ಟರ್​ ಅಗರ್ಕರ್​ ಬಿಸಿ ಬಿಸಿ ಚರ್ಚೆ.!

ಇಂಡೋ – ಇಂಗ್ಲೆಂಡ್​​ ನಡುವಿನ 2ನೇ ಟೆಸ್ಟ್​ ಪಂದ್ಯ ಮುಗಿದ ಬೆನ್ನಲ್ಲೇ ಇಡೀ ತಂಡ ವೈಜಾಗ್​ನಲ್ಲಿ ವಿಜಯೋತ್ಸವದ ಸಂಭ್ರಮದಲ್ಲಿತ್ತು. ಆದ್ರೆ, ಅದೇ ಗ್ರೌಂಡ್​ನ​ ಮತ್ತೊಂದು ಮೂಲೆಯಲ್ಲಿ ಟೆಸ್ಟ್​ ಸರಣಿಯ ಉಳಿದ ಪಂದ್ಯಗಳ ತಂಡದ​​ ಆಯ್ಕೆಯ ಕಸರತ್ತು ಆರಂಭವಾಗಿತ್ತು. ಕ್ಯಾಪ್ಟನ್​ ರೋಹಿತ್​ ಶರ್ಮಾ ಆನ್​ಫೀಲ್ಡ್​ನಲ್ಲೇ, ಚೀಫ್​ ಸೆಲೆಕ್ಟರ್​​ ಅಗರ್ಕರ್​ ಜೊತೆ ಬಿಸಿಬಿಸಿ ಚರ್ಚೆ ನಡೆಸಿದ್ರು.

ಬದಲಾದ ಲೆಕ್ಕಾಚಾರ, ಸೀನಿಯರ್ಸ್​ ಎದೆಯಲ್ಲಿ ಢವ.. ಢವ..!

ಪಂದ್ಯ ಮುಗಿದ ಬೆನ್ನಲ್ಲೇ ರೋಹಿತ್​ ಶರ್ಮಾ, ಸೆಲೆಕ್ಟರ್​ ಅಗರ್ಕರ್​ ಜೊತೆ ಚರ್ಚೆ ನಡೆಸಿದ್ರೆ, ಮತ್ತೊಂದೆಡೆ ಕೋಚ್​ ದ್ರಾವಿಡ್​ ಸೀನಿಯರ್ಸ್​ಗೆ ಕ್ಲಾಸ್​ ತೆಗೆದುಕೊಂಡಿದ್ರು. ಟೆಸ್ಟ್​ ಸರಣಿಯಲ್ಲಿ ಫ್ಲಾಪ್​ ಶೋ ನೀಡ್ತಿರುವ ಶ್ರೇಯಸ್​ ಅಯ್ಯರ್​​ ಜೊತೆ ದ್ರಾವಿಡ್​​ ಗಂಭೀರ ಚರ್ಚೆ ನಡೆಸಿದ್ರು. ಈ ಎರಡು ಮೀಟಿಂಗ್​ಗಳು ಸೀನಿಯರ್ಸ್​ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯಾಕಂದ್ರೆ, ಟೀಮ್​ ಇಂಡಿಯಾ ಮೊದಲಿನಂತಿಲ್ಲ.

ಪರ್ಫಾಮ್​ ಮಾಡಿ.. ಇಲ್ಲ ಜಾಗ ಖಾಲಿ ಮಾಡಿ..!

ಯೆಸ್​.. ಟೀಮ್​ ಇಂಡಿಯಾ ಸೆಲೆಕ್ಟರ್ಸ್​ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​ ಈಗ ಕಂಪ್ಲೀಟ್​​ ಬದಲಾಗಿದ್ದಾರೆ. ಈಗಿನ ಯೋಚನೆ ಬೇರೆಯದ್ದೇ ಆಗಿದೆ. ಸ್ಟಾರ್​​ಗಿರಿಗೆ ಮಣೆ ಹಾಕಲ್ಲ.. ಪರ್ಫಾಮ್ ಮಾಡಿ ಇಲ್ಲದಿದ್ರೆ ಜಾಗ ಕಾಲಿ ಮಾಡಿ ಅನ್ನೋ ಅಜೆಂಡಾ ಸದ್ಯ ಟೀಮ್​ ಇಂಡಿಯಾದಲ್ಲಿದೆ. ಹೀಗಾಗಿ ಮೊನ್ನೆ ನಡೆದ ಸೆಲೆಕ್ಷನ್​ ಮೀಟಿಂಗ್​ ಸೀನಿಯರ್ಸ್​ ಎದೆಯಲ್ಲಿ ಢವ..ಢವ ಹುಟ್ಟಿಸಿದೆ.

5 ವರ್ಷದ ಟಾರ್ಗೆಟ್​​, ಭವಿಷ್ಯದ ತಂಡ ಕಟ್ಟೋ ಚಾಲೆಂಜ್​.!

ಸದ್ಯ ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಸದ್ಯ ನಡೀತಾ ಇರೋ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಸೈಕಲ್​ ಜೊತೆಗೆ ಮುಂಬರುವ 2025ರಿಂದ 28ರವರೆಗಿನ WTC ಸೈಕಲ್​ವರೆಗೆ ಆಗುವಂತಾ ಸಮರ್ಥ ತಂಡವನ್ನ ಕಟ್ಟಲು ಬಿಸಿಸಿಐ ಬಾಸ್​ಗಳು ಈಗಾಗಲೇ ಟೀಮ್​ ಮ್ಯಾನೇಜ್​​ಮೆಂಟ್​​ಗೆ ಸೂಚನೆ ಕೊಟ್ಟಿದ್ದಾರೆ. ಸೆಲೆಕ್ಷನ್​ ಕಮಿಟಿ ಸದಸ್ಯರು ಕೂಡ ಈ ನಿಟ್ಟಿನಲ್ಲಿ ಖಡಕ್​ ನಿರ್ಧಾರ ತೆಗೆದುಕೊಳ್ತಾ ಇದ್ದು, ಯುವ ಹಾಗೂ ಅನುಭವಿ ತಂಡಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ.

2025ರ ಬಳಿಕ ಬದಲಾಗಲಿದೆ ಟೀಮ್​ ಇಂಡಿಯಾ.!

2025ರ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಸೈಕಲ್​ ಮುಗಿದ ಬಳಿಕ ಟೀಮ್​ ಇಂಡಿಯಾ ಕಂಪ್ಲೀಟ್​ ಬದಲಾಗಲಿದೆ. ಅನುಭವಿಗಳಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ತಂಡವನ್ನ ತೊರೆಯಲಿದ್ದಾರೆ. ಸ್ಪಿನ್ನರ್​ಗಳಾದ ಅರ್​. ಅಶ್ವಿನ್, ರವಿಂದ್ರ ಜಡೇಜಾ ಹಾಗೂ ವೇಗಿ ಮೊಹಮ್ಮದ್​ ಶಮಿ ಕೂಡ ಗುಡ್​ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ. ಇವರೆಲ್ಲರ ಸ್ಥಾನಕ್ಕೆ ಸಮರ್ಥರನ್ನ ಈಗಿನಿಂದಲೇ ಬೆಳೆಸಬೇಕಿದೆ.

ಈ ಹಿಂದೆ ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​​, ವಿವಿಎಸ್​ ಲಕ್ಷ್ಮಣ್, ಹರ್ಭಜನ್​ ಸಿಂಗ್​, ಅನಿಲ್​ ಕುಂಬ್ಳೆ​.. ಕ್ರಿಕೆಟ್​ಗೆ ಗುಡ್​ ಬೈ ಹೇಳಿದಾಗ ಟೀಮ್​ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಹೀಗಾಗಿ ತಂಡದಲ್ಲಿ TRANSITION ಆದ್ರೂ ಯಾವುದೆ ಹಿನ್ನಡೆಯಾಗಲಿಲ್ಲ. ಈಗಲೂ ಅದೇ ರೀತಿಯಲ್ಲಿ ಟೀಮ್​ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಇಲ್ಲದಿದ್ರೆ, transition periodನಲ್ಲಿ ಯಡವಟ್ಟು ಮಾಡಿಕೊಂಡು ಇಂದಿಗೂ ಸುಧಾರಣೆ ಕಾಣಲು ಒದ್ದಾಡುತ್ತಿರೋ ಶ್ರೀಲಂಕಾ, ಸೌತ್​ ಆಫ್ರಿಕಾ, ವೆಸ್ಟ್​​ ಇಂಡೀಸ್​ನಂತೆ​​ ಸಮಸ್ಯೆ ಎದುರಿಸಬೇಕಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಬಗ್ಗೆ ರೋಹಿತ್​, ಅಗರ್ಕರ್ ಬಿಸಿ ಬಿಸಿ ಚರ್ಚೆ.. ಶ್ರೇಯಸ್​ ಅಯ್ಯರ್​ಗೆ ನಡುಕ ಶುರು

https://newsfirstlive.com/wp-content/uploads/2024/02/Ajit-and-Rohit.jpg

Load More