/newsfirstlive-kannada/media/post_attachments/wp-content/uploads/2024/06/Kohli_Rohit-Cry.jpg)
ಗಯಾನಾ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 68 ರನ್ಗಳಿಂದ ಗೆಲುವು ಸಾಧಿಸೋ ಮೂಲಕ ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ನೀಡಿದೆ.
ನಾಳೆ ಬಾರ್ಬಡೋಸ್‌ನಲ್ಲಿ ನಡೆಯಲಿರೋ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಎದುರಿಸಲಿದೆ. ಈ ಮಧ್ಯೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕಣ್ಣೀರಿಟ್ಟ ವಿಡಿಯೋ ಒಂದು ವೈರಲ್ ಆಗಿದೆ.
ಮೊದಲು ಕಡಿಮೆ ರನ್ಗೆ ಔಟಾದ ಕಾರಣ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಣ್ಣೀರಿಟ್ಟರು. ಆಗ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೊಹ್ಲಿಗೆ ಧೈರ್ಯ ತುಂಬಿ ಸಂತೈಸಿದ್ರು. ನಂತರ ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಬಳಿಕ ಕ್ಯಾಪ್ಟನ್ ರೋಹಿತ್ ಕಣ್ಣೀರು ಹಾಕಿದ್ದಾರೆ.
Rohit Sharma crying after the win, Virat Kohli cheering him up. #INDvENGpic.twitter.com/KlgyrCzvES
— S I D (@iMSIDPAK) June 27, 2024
ಪಂದ್ಯ ಗೆಲ್ಲುವವರೆಗೂ ಲವಲವಿಕೆಯಿಂದ ಇದ್ದ ರೋಹಿತ್ ಡ್ರೆಸ್ಸಿಂಗ್ ಕೊಠಡಿ ಹೊರಗೆ ಕುಳಿತು ಕಣ್ಣೀರು ಹಾಕಿದ್ರು. ಆಗ ನಾಯಕನ ಹೆಗಲ ಮೇಲೆ ಸ್ನೇಹಪೂರ್ವಕವಾಗಿ ಬೆನ್ನುತಟ್ಟಿ ಕೊಹ್ಲಿ ಸಮಾಧಾನ ಮಾಡಿದ್ರು. ಕೊಹ್ಲಿ ಸಂತೈಸಿದ ಬಳಿಕ ರೋಹಿತ್ ಶರ್ಮಾ ಕಣ್ಣೀರು ಹಾಕುವುದು ನಿಲ್ಲಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್