ರೋಹಿತ್- ಗಂಭೀರ್​ ಮಧ್ಯೆ ಟಾಕ್ ವಾರ್.. ವಿಕೆಟ್ ಕೀಪರ್​​, ಸ್ಪಿನ್ನರ್​ಗಾಗಿ ಬಿಗ್​ ಫೈಟ್​

author-image
Bheemappa
Updated On
ಬಾಂಗ್ಲಾ ಟೆಸ್ಟ್​ ಸರಣಿಗೆ ಗಂಭೀರ್​​​, ರೋಹಿತ್​ ಮಾಸ್ಟರ್​ ಪ್ಲಾನ್​​.. ಈ ಸ್ಟಾರ್​ ಆಟಗಾರರಿಗೆ ಮಾತ್ರ ಮಣೆ
Advertisment
  • ಟೀಮ್​ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ವಾ ಅನ್ನೋ ಆತಂಕ
  • ಸೆಲೆಕ್ಷನ್​ ವಿಚಾರದಲ್ಲಿ ಇಬ್ಬರ ನಡುವೆ ವಾದ- ವಿವಾದ ನಡೆದಿದೆ
  • ಭಿನ್ನಾಭಿಪ್ರಾಯ, ಡ್ರೆಸ್ಸಿಂಗ್​ ರೂಮ್​ ವಾತಾವರಣವೇ ಕೆಟ್ಟಿತಾ?

ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಇಂದಿನಿಂದ ಕಿಕ್​ ಸ್ಟಾರ್ಟ್​ ಸಿಗಲಿದೆ. ಟೀಮ್​ ಇಂಡಿಯಾದ ಅಭಿಯಾನ ಇಂದಿನಿಂದ ಆರಂಭವಾಗಲಿದೆ. ಐಸಿಸಿ ಟ್ರೋಫಿ ಗೆಲುವಿನ ಮೇಲೆ ಚಿತ್ತ ನೆಟ್ಟಿರುವ ಬ್ಲೂ ಬಾಯ್ಸ್​​ ದುಬೈನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿದ್ದಾರೆ. ಅಭಿಮಾನಿಗಳು ಕೂಡ ಟೂರ್ನಿಯಲ್ಲಿ ಭಾರತ ತಂಡದ ಆಟ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಈ ಎಕ್ಸೈಟ್​ಮೆಂಟ್​ ನಡುವೆ ಆಘಾತದ ಸುದ್ದಿ ಹೊರ ಬಿದ್ದಿದೆ.

ಮನೆಯೊಂದು 2 ಬಾಗಿಲು.. ರೋಹಿತ್​-ಗಂಭೀರ್​ ಮುನಿಸು.!

ಮಹತ್ವದ ಚಾಂಪಿಯನ್ಸ್​ ಟ್ರೋಫಿಗೆ ಕೌಂಟ್​ಡೌನ್​ ಶುರುವಾಗಿರೋವಾಗ್ಲೇ ಟೀಮ್​ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಆತಂಕದ ಸುದ್ದಿ ಹೊರಬಿದ್ದಿದೆ. ಆಸ್ಟ್ರೇಲಿಯಾ ಪ್ರವಾಸದ ಬಳಿಕ ನಡೆದ ಸರಣಿ ಮೀಟಿಂಗ್​ನಲ್ಲಿ ಎಲ್ಲಾ ಸಮಸ್ಯೆ ಬಗೆಹರಿದಿಲ್ಲ ಅನ್ನೋದು ರಿವೀಲ್​ ಆಗಿದೆ. ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ಕೋಚ್​​ ಗೌತಮ್​ ಗಂಭೀರ್​, ಕ್ಯಾಪ್ಟನ್​ ರೋಹಿತ್​ ಶರ್ಮಾ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದು, ಮಾತಿನ ಚಕಮಕಿ ನಡೆದಿದೆ ಅನ್ನೋ ಆತಂಕದ ಸುದ್ದಿ ರಿವೀಲ್​ ಆಗಿದೆ.

publive-image

ಕುಲ್​​ದೀಪ್​ ಯಾದವ್​ ಪರ ಕ್ಯಾಪ್ಟನ್​ ರೋಹಿತ್​ ಬ್ಯಾಟಿಂಗ್​.!

ಆರಂಭದಲ್ಲಿ ಚಾಂಪಿಯನ್ಸ್​ ಟ್ರೋಫಿ ತಂಡದಲ್ಲೇ ಇರದ ವರುಣ್​ ಚಕ್ರವರ್ತಿ, ಇದೀಗ ಯಶಸ್ವಿ ಜೈಸ್ವಾಲ್​ನ ಸೈಡ್​ ಹೊಡೆದು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಐವರು ಸ್ಪಿನ್ನರ್​ಗಳು ತಂಡದಲ್ಲಿದ್ದು, ಇವರಲ್ಲಿ ಯಾರಿಗೆ ಪ್ಲೇಯಿಂಗ್-11​​ ಟಿಕೆಟ್​ ನೀಡಬೇಕು ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡ್ತಿದೆ. ಈ ವಿಚಾರದಲ್ಲಿ ಕ್ಯಾಪ್ಟನ್​, ಕೋಚ್​ ಭಿನ್ನ ನಿಲುವು ತಳೆದಿದ್ದು ವರುಣ್​ ಪರ ಗಂಭೀರ್​ ಬ್ಯಾಟ್​ ಬೀಸ್ತಾ ಇದ್ರೆ, ಕುಲ್​​ದೀಪ್​ ಆಡಿಸಲು ರೋಹಿತ್​ ಶರ್ಮಾ ಮುಂದಾಗಿದ್ದಾರೆ.

ಸೆಲೆಕ್ಷನ್​ ಡಿಬೆಟ್​ ಅಷ್ಟೇ ನಡೆದಿದ್ರೆ, ಆತಂಕಪಡುವಂತದ್ದು ಏನೂ ಇರಲಿಲ್ಲ. ಆದ್ರೆ, ಈ ಸೆಲೆಕ್ಷನ್​ ವಿಚಾರದಲ್ಲಿ ಇಬ್ಬರ ನಡುವೆ ವಾದ ವಿವಾದ ನಡೆದಿದೆ. ಇಬ್ಬರೂ ಕೂಡ ಪಟ್ಟು ಸಡಿಲಿಸಿಲ್ಲ. ಇಬ್ಬರ ನಡುವಿನ ಈ ಭಿನ್ನಾಭಿಪ್ರಾಯ ಡ್ರೆಸ್ಸಿಂಗ್​ ರೂಮ್​ನ ವಾತಾವರಣವನ್ನೇ ಕೆಡಿಸಿದೆ ಅನ್ನೋ ಸುದ್ದಿ ಸದ್ಯ ಹರಿದಾಡ್ತಿದೆ.

ಕೋಚ್ ಗಂಭೀರ್​​ ವಿರುದ್ಧ ಸಿಡಿದೆದ್ದ ರಿಷಬ್​ ಪಂತ್​​.!

ರೋಹಿತ್​ ಶರ್ಮಾ VS ಗೌತಮ್​ ಗಂಭೀರ್​​, ಮಾತ್ರವಲ್ಲ.. ಗೌತಮ್​ ಗಂಭೀರ್​ ಹಾಗೂ ರಿಷಬ್​ ಪಂತ್​ ನಡುವಿನ ಬ್ಯಾಟಲ್ ಕೂಡ ಟೀಮ್​ ಇಂಡಿಯಾದಲ್ಲಿ ನಡೀತಿದೆ. ಕೆ.ಎಲ್​ ರಾಹುಲ್​ ನಮ್ಮ ಫಸ್ಟ್​ ಚಾಯ್ಸ್​ ವಿಕೆಟ್​ ಕೀಪರ್​ ಎಂದಿರೋ ಗೌತಮ್​ ಗಂಭೀರ್​ ಮೇಲೆ ಪಂತ್​ ಸಿಟ್ಟಾಗಿದ್ದಾರೆ. ಸ್ಪೆಷಲಿಸ್ಟ್​ ವಿಕೆಟ್​ ಕೀಪರ್​ ಆಗಿ ತಂಡದಲ್ಲಿದ್ರೂ ತನಗೆ ಏಕದಿನ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ಪಂತ್​​ಗೆ ಅಸಮಾಧಾನವಿದೆ. ಈ ಬಗ್ಗೆಯೂ ನನ್ನೊಂದಿಗೆ ಮಾತನಾಡದೇ ಬಹಿರಂಗವಾಗಿ ಕೆ.ಎಲ್​ ರಾಹುಲ್​ ನಮ್ಮ ಫಸ್ಟ್​ ಚಾಯ್ಸ್​ ಕೀಪರ್​ ಎಂದು ಘೋಷಿಸಿರುವ ಗಂಭೀರ್​ ಮೇಲೆ ಪಂತ್​​ ಸಿಟ್ಟಾಗಿದ್ದಾರೆ ಅನ್ನೋದು ತಂಡದ ಇನ್​ಸೈಡ್​ ಮಾಹಿತಿಯಾಗಿದೆ.

ಇದನ್ನೂ ಓದಿ:SSLC, PUC ಪರೀಕ್ಷೆಗೆ ಭರ್ಜರಿ ತಯಾರಿ.. ಶಿಕ್ಷಣ ಸಚಿವರಿಂದ ಇಂದು ಮಹತ್ವದ ಮಾಹಿತಿ

publive-image

ಹ್ಯಾಪಿ ಡ್ರೆಸ್ಸಿಂಗ್​ ರೂಮ್​ ಎಲ್ಲಿಂದ ಸಾಧ್ಯ.?

ಅಂದ್ಹಾಗೆ ಪಂತ್​ ಆಯ್ಕೆ ವಿಚಾರದಲ್ಲೂ ಕ್ಯಾಪ್ಟನ್​, ಕೋಚ್​ ನಡುವೆ ಭಿನ್ನಾಭಿಪ್ರಾಯವಿದೆ. ರೋಹಿತ್​ ಪಂತ್​ ಬೆಂಬಲಕ್ಕೆ ನಿಂತಿದ್ರೆ, ಕೋಚ್​ ಗಂಭೀರ್​ ಕೆ.ಎಲ್​ ರಾಹುಲ್​ ಪರ ಇದ್ದಾರೆ. ಈಗ ಈ ವಿಚಾರದಲ್ಲಿ ಪಂತ್​ ಕೂಡ ಸಿಟ್ಟಾಗಿದ್ದಾರೆ. ಅಸಮಾಧಾನ ಭುಗಿಲೆದ್ದ ಮೇಲೆ HAPPY ಡ್ರೆಸ್ಸಿಂಗ್​ ರೂಮ್​ ಎಲ್ಲಿಂದ ಸಾಧ್ಯ.?

ಪಂತ್​ ಆಯ್ಕೆ ವಿಚಾರದಲ್ಲಿ ರೋಹಿತ್​ ಶರ್ಮಾ ಈಗಾಗಾಲೇ ಹಿನ್ನಡೆ ಅನುಭವಿಸಿದ್ದಾರೆ. ಗಂಭೀರ್​ ಮಾತೇ ಫೈನಲ್​ ಆಗಿದೆ. ಇದೀಗ ಕುಲ್​​ದೀಪ್​, ವರುಣ್​ ಚಕ್ರವರ್ತಿ ವಿಚಾರಕ್ಕೆ ಹಗ್ಗಜಗ್ಗಾಟ ಶುರುವಾಗಿದೆ. ಈ ಫೈಟ್​ ಎಲ್ಲಿಗೆ ಹೋಗಿ ನಿಲ್ಲುತ್ತೆ.? ಈ ಅಸಮಾಧಾನ ಆನ್​ಫೀಲ್ಡ್​ ಪರ್ಫಾಮೆನ್ಸ್​ ಮೇಲೆ ಎಷ್ಟು ಪರಿಣಾಮ ಬೀರುತ್ತೆ.? ಅನ್ನೋ ಪ್ರಶ್ನೆಗಳು ಸದ್ಯ ಕ್ರಿಕೆಟ್​ ವಲಯವನ್ನ ಕಾಡ್ತಿವೆ. ಎಲ್ಲಾ ಸರಿಯಾದ್ರೆ ಓಕೆ. ಇಲ್ಲದಿದ್ರೆ ಐಸಿಸಿ ಟೂರ್ನಿಯಲ್ಲಿ ಹಿನ್ನಡೆ ತಪ್ಪಿದ್ದಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment