/newsfirstlive-kannada/media/post_attachments/wp-content/uploads/2024/11/ROHIT-12.jpg)
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.
ರೋಹಿತ್ ಮತ್ತು ರಿತಿಕಾ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ರೋಹಿತ್ ಅಥವಾ ರಿತಿಕಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ವರದಿಗಳ ಪ್ರಕಾರ ನವೆಂಬರ್ 15 ರಂದು ಗಂಡು ಮಗು ಜನಿಸಿದೆ.
ಇದನ್ನೂ ಓದಿ:ಭಾರತಕ್ಕೆ 135 ರನ್ಗಳ ಭರ್ಜರಿ ಜಯ, ಸರಣಿ ಗೆದ್ದ ಸೂರ್ಯ.. ಗೆಲುವಿನ ಹೀರೋ ಈ ಆಟಗಾರರು..!
ರೋಹಿತ್ ಮತ್ತು ರಿತಿಕಾ 2015ರಲ್ಲಿ ಮದುವೆಯಾದರು. 2018, ಡಿಸೆಂಬರ್ನಲ್ಲಿ ಸಮೀರ ಎಂಬ ಹೆಣ್ಣು ಮಗು ಜನಿಸಿದೆ. ರೋಹಿತ್ ಮತ್ತು ರಿತಿಕಾ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ರಿತಿಕಾ ಮೊದಲು ರೋಹಿತ್ ಅವರ ಮ್ಯಾನೇಜರ್ ಆಗಿದ್ದರು. ನಂತರ ಇಬ್ಬರೂ ಸ್ನೇಹಿತರಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಕೊನೆಗೆ ಇಬ್ಬರು ಮದುವೆಯಾದರು.
ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿದೆ. ಇದಕ್ಕಾಗಿ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರು ಆಸ್ಟ್ರೇಲಿಯಾ ತಲುಪಿದ್ದಾರೆ. ರೋಹಿತ್ ಇನ್ನೂ ಹೋಗಿಲ್ಲ. ರೋಹಿತ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರಜೆ ಕೋರಿದ್ದಾರೆ ಎಂಬ ಸುದ್ದಿ ಇತ್ತು. ರೋಹಿತ್ ಪತ್ನಿ ರಿತಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ, ಅದಕ್ಕಾಗಿ ರೋಹಿತ್ ರಜೆ ಮೇಲೆ ಇದ್ದಾರೆ ಎಂಬ ವರದಿಯಾಗಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೊದಲ ಪಂದ್ಯ ನವೆಂಬರ್ 22 ರಿಂದ ಪರ್ತ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ:‘ಸ್ಟಾರ್ ಕ್ರಿಕೆಟರ್ ಜೀವನ ಹಾಳು ಮಾಡಿದ ಧೋನಿ, ಕೊಹ್ಲಿ, ರೋಹಿತ್’- ಮೂವರ ವಿರುದ್ಧ ಗಂಭೀರ ಆರೋಪ
Welcome Jr Hitman 🤩🥳🔥 #RohitSharma𓃵pic.twitter.com/UPdLEOk7cV
— Aditya Mall Rajput 🇮🇳 (@adityavishen39) November 15, 2024
Welcome Jr Hitman 🤩🥳🔥 #RohitSharma𓃵pic.twitter.com/3ToUFhBJAS
— CleanBowled🎯 (@Jamesnisam5363) November 15, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ