/newsfirstlive-kannada/media/post_attachments/wp-content/uploads/2025/06/rohit_sharma_ritika.jpg)
ರೋಹಿತ್ ಶರ್ಮಾ ಆ್ಯಂಡ್ ರಿತಿಕಾ ಸಜ್ಡೇ ಟೀಮ್ ಇಂಡಿಯಾದ ಸ್ವೀಟ್ ಕಪಲ್ಸ್. ಇವರ ಅನ್ಯೋನ್ಯತೆಯನ್ನ ನೋಡಿದ್ರೆ, ಕಪಲ್ಸ್ ಅಂದ್ರೆ, ಹೀಗಿರಬೇಕಪ್ಪ ಅಂತಾ ಎಲ್ಲರಿಗೂ ಅನ್ಸುತ್ತೆ. ಇವರಿಬ್ಬರ ಲವ್ ಸ್ಟೋರಿ ಸಿನಿಮಾಗಿಂತ ಏನು ಕಡಿಮೆ ಇಲ್ಲ. ಇವರಿಬ್ಬರ ಪ್ರೇಮಕಥೆ ಇಲ್ಲಿದೆ.
ರೋಹಿತ್ ಶರ್ಮಾ, ಟೀಮ್ ಇಂಡಿಯಾದ ಗ್ರೇಟ್ ಕ್ರಿಕೆಟರ್. ವಿಶ್ವ ಕ್ರಿಕೆಟ್‌ನ ಒನ್ ಆ್ಯಂಡ್ ಒನ್ಲಿ ಹಿಟ್ಮ್ಯಾನ್. ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹಾನ್ ನಾಯಕ. ಆದ್ರೆ, ರೋಹಿತ್ ಶರ್ಮಾ ಕ್ರಿಕೆಟ್ ಅನ್ನ ಎಷ್ಟು ಪ್ರೀತಿ ಮಾಡ್ತಾರೋ, ಅಷ್ಟೇ ಪತ್ನಿ ರಿತಿಕಾ ಸಜ್ದೇಯನ್ನು ಪ್ರೀತಿಸ್ತಾರೆ. ಅನ್ನೋದು ಓಪನ್ ಸೀಕ್ರೆಟ್. ಆದ್ರೆ, ರೋಹಿತ್, ರಿತಿಕಾ ಲವ್ ಶುರುವಾಗಿದ್ದೇಗೆ ಅನ್ನೋ ಇಂಟ್ರೆಸ್ಟಿಂಗ್ ಕಥೆ ಬಹುಪಾಲು ಕೇಳಿರಲ್ಲ. ಇದೀಗ Who's The Boss ಇಟರ್ವ್ಯೂನಲ್ಲಿ ಇವರಿಬ್ಬರ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ. ಆದ್ರೆ, ಇವರಿಬ್ಬರ ಭೇಟಿಯೇ ಸಖತ್ ಇಂಟ್ರೆಸ್ಟಿಂಗ್..
ರಿತಿಕಾ ಭೇಟಿಯಾಗಿದ್ದು ರೋಹಿತ್ಗೆ ತಿಳಿದಿಲ್ಲ..!
ನಮ್ಮದು ಎರಡು ವಿಭಿನ್ನ ಕಥೆ. ನಾನು ಇವರನ್ನು, ಇವರು ಭೇಟಿ ಮಾಡುವ 3 ತಿಂಗಳ ಮುನ್ನವೇ ಭೇಟಿಯಾಗಿದ್ದೆ. ನಾನು ಬ್ಯುಸಿನೆಸ್ ವಿಚಾರವಾಗಿ ಮುಂದಿನ ತಿಂಗಳು ಕೆಲಸ ಶುರು ಮಾಡಲಿದ್ದೆ. ನಾವು ಪಾರ್ಟಿಯಲ್ಲಿದ್ದೆವು. ಬಂಟಿ, ಯುವಿ ಬಂದಿದ್ದರು. ಅವರು ಒಬ್ಬರನ್ನು ಭೇಟಿ ಮಾಡೋಣ. ಅವರು ಉತ್ತಮ ವ್ಯಕ್ತಿ. ನೀನು ಬ್ಯಸಿನೆಸ್ನಲ್ಲಿ ತೊಡಗಿಸಿಕೊಳ್ಳುವುದರಿಂದ ಅವ್ರು ತಿಳಿದಿರಬೇಕು. ನಾನು ಸರಿ ಎಂದೆ. ನನಗೂ ಇವರ ಭೇಟಿ ಮಾಡುವುದು ಸಂತಸದ ವಿಚಾರವಾಗಿತ್ತು. ಅವರು ನನ್ನ, ಇವರ ಬಳಿ ಕರೆದೊಯ್ದರು. ಇವರು ಅಲ್ಲೇ ಸೋಫಾ ಮೇಲೆ ಮಲಗಿದ್ದರು. ಮ್ಯೂಸಿಕ್, ನೂರಾರು ಮಂದಿ ಇದ್ದರು. ನಾನು ಭೇಟಿಯಾಗಲು ಬಯಸ್ತಿದ್ದು, ಈತನನ್ನೇನಾ ಎಂದುಕೊಂಡಿದ್ದೆ. ಆ ಮೀಟಿಂಗ್ ನಡೀಯಲಿಲ್ಲ. ಯಾಕಂದ್ರೆ, ನಾನು ಮಲಗಿದ್ದೆ. ಆಕೆ ನನ್ನ ನೋಡಿದ್ಲು. ಆದ್ರೆ, ನಾನು ನೋಡಿರಲಿಲ್ಲ.
ರೋಹಿತ್ ಶರ್ಮಾ, ಭಾರತದ ಏಕದಿನ ತಂಡದ ನಾಯಕ
ರಿತಿಕಾಳನ್ನ ನೋಡದ ರೋಹಿತ್, ಮೊದಲು ನೋಡಿದ್ದು ಶೂಟಿಂಗ್ ಒಂದರಲ್ಲಾಗಿತ್ತು. ಈ ವೇಳೆ ಪರಸ್ಪರ ಮಾತನಾಡಿದ್ದರು. ಅಷ್ಟೇ ಅಲ್ಲ, ರೋಹಿತ್ ಶರ್ಮಾರ ಸ್ಪೋರ್ಟ್ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದರು. ಉತ್ತಮ ಸ್ನೇಹಿತರಾಗಿದ್ದ ಇವರನ್ನು ನೋಡಿ ಎಲ್ಲರೂ ಡೇಟಿಂಗ್ ನಡೆಸ್ತಿದ್ದಾರೆ ಅಂತಾನೇ ಊಹಿಸಿದ್ರು. ಅಷ್ಟೇ ಅಲ್ಲ.! ನಿಮ್ಮಬ್ಬರ ನಡುವೆ ಏನೋ ನಡೀತಿದೆ ಎಂದು ಕಾಲೆಳೆದಿದ್ದರು. ಆದ್ರೆ, ಅದು ಕಾಲ ಕ್ರಮೇಣ ನಿಜವೂ ಆಯ್ತು.
ಆರಂಭದ ದಿನಗಳ ಮೊದಲು ಆರೇಳು ವರ್ಷ ನಾವು ಉತ್ತಮ ಸ್ನೇಹಿತರಾಗಿದ್ವಿ. ಇದೇ ಸ್ನೇಹ ಪ್ರೀತಿಗೆ ತಿರುಗಿತ್ತು. ನಾವು ಮದುವೆಯಾದ್ವಿ. ಈಗ ಇಬ್ಬರು ಮಕ್ಕಳಿದ್ದಾರೆ. ನಾವು ಭೇಟಿಯಾಗಿದ್ದು 2008ರಲ್ಲಿ. ಆದ್ರೆ, ನಾವು ಅರಿತುಕೊಂಡಿದ್ದು 2014ರ ಸಮಯದಲ್ಲಾಗಿತ್ತು.
ರೋಹಿತ್ ಶರ್ಮಾ, ಭಾರತದ ಏಕದಿನ ತಂಡದ ನಾಯಕ
ಇವರಿಬ್ಬರ ನಡುವೆ ಲವ್ ಇದೆ ಅನ್ನೋದು ಅರಿತುಕೊಂಡರು. ಆದ್ರೆ, ರೋಹಿತ್, ರಿತಿಕಾಗೆ ಪ್ರಪೋಸ್ ಮಾಡಿದ್ದ ಕಥೆಯೂ ನಿಜಕ್ಕೂ ಯಾವ್ದೇ ಸಿನಿಮಾಗಿಂತ ಕಡಿಮೆ ಇಲ್ಲ.
ನಾನು ಕ್ರಿಕೆಟ್ ಆಡಲು ಶುರು ಮಾಡಿದ ಸ್ಥಳಕ್ಕೆ ಕರೆದೊಯ್ದೆ. ಅವಳು ನನಗಾಗಿ ಊಟ ತಂದಿದ್ದಳು. ತಿಂದು ಸುಮ್ಮನೆ ಕುಳಿತಿದ್ದೆ. ನಾನು ಹೊರಗೆ ಹೋಗಿ ಐಸ್ ಕ್ರೀಮ್ ತಿನ್ನೋಣ, ಬೇಜಾರ್ ಆಗ್ತಿದೆ ಅಂತ ಹೇಳಿದೆ. ಈಕೆ ಸರಿ ಎಂದಳು. ನಾವು ಕಾರಿನಲ್ಲಿ ಕುಳಿತು ಮರೀನ್ ಡ್ರೈವ್, ಬಾಂದ್ರಾ, ವರ್ಲಿ ಇತ್ಯಾದಿ ಎಲ್ಲಾ ದಾಟಿ ಹೊರಟೆವು. ಆಗ ಐಸ್ ಕ್ರೀಮ್ ಎಲ್ಲಿದೆ ಅಂತ ಕೇಳಿದಳು. ನಾನು ಬೊರಿವಲಿಯಲ್ಲಿ ಒಳ್ಳೆಯ ಐಸ್ ಕ್ರೀಮ್ ಮಾರಾಟ ಮಾಡ್ತಾರೆ ಎಂದು ಹೇಳಿದೆ.
ರೋಹಿತ್ ಶರ್ಮಾ, ಭಾರತದ ಏಕದಿನ ತಂಡದ ನಾಯಕ
ಪ್ರಪೋಸ್ ಮಾಡೋ ಪ್ಲಾನ್ ಮಾಡಿದ್ದ ರೋಹಿತ್, ಗ್ರೌಂಡ್ಗೆ ಕರೆದೊಯ್ದು ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದರು. ಆ ಮೂಮೆಂಟ್ ಹೇಗಿತ್ತು ಅನ್ನೋದನ್ನ ರೋಹಿತ್ ಬಾಯಲ್ಲೇ ಕೇಳಿ..
ಇದನ್ನೂ ಓದಿ:ವಿವಾದಕ್ಕೆ ಸಿಲುಕಿದ ಕೇಂದ್ರ ಸಚಿವ ನಟನೆಯ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಚಿತ್ರ..
ನಾವು ಮೈದಾನ ತಲುಪಿದೆವು. ಕತ್ತಲು ಆಗಿತ್ತು. ರಿತಿಕಾಗೆ ಗ್ರೌಂಡ್ ಅನ್ನೋದು ಗೊತ್ತಾಗಲಿಲ್ಲ. ನಾನು ಮೊದಲೇ ನನ್ನ ಸ್ನೇಹಿತನಿಗೆ ಎಲ್ಲವನ್ನೂ ಸಿದ್ಧವಾಗಿಡಲು ಹೇಳಿದ್ದೆ. ಆ ಕ್ಷಣವನ್ನ ರೆಕಾರ್ಡ್ ಮಾಡಲು ತಿಳಿಸಿದ್ದೆ. ನಾನು ಕಾರನ್ನ ಮೈದಾನದ ಮಧ್ಯೆ ನಿಲ್ಲಿಸಿದೆ. ನಾನು ಪಿಚ್‌ನಲ್ಲಿ ಮೊಣಕಾಲಿನ ಮೇಲೆ ಕುಳಿತು ಪ್ರಪೋಸ್ ಮಾಡಿದೆ. ನನ್ನ ಸ್ನೇಹಿತ ಆ ಕ್ಷಣಗಳನ್ನು ಸೆರೆ ಹಿಡಿದ.
ರೋಹಿತ್ ಶರ್ಮಾ, ಭಾರತದ ಏಕದಿನ ತಂಡದ ನಾಯಕ
ರೋಹಿತ್ ಶರ್ಮಾರ ಈ ಐಡಿಯಾ ಒಳೆಯಲು ಕಾರಣ ಆಕೆಗೂ, ರೋಹಿತ್ಗೂ ಕ್ರಿಕೆಟ್ ಜೊತೆಗಿನ ನಂಟಾಗಿತ್ತು. 2015ರ ಜೂನ್ 3ರಂದು ಎಂಗೇಜ್ಮೆಂಟ್ ಮಾಡಿಕೊಂಡ ಈ ಜೋಡಿ, ಅದೇ ವರ್ಷ ಡಿಸೆಂಬರ್ 13ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರತಿ ಹೆಜ್ಜೆಯಲ್ಲು ಜೊತೆಯಿದ್ದ ರಿತಿಕಾ, ರೋಹಿತ್ ಶರ್ಮಾರ ಸಕ್ಸಸ್ ಹಿಂದಿನ ಶಕ್ತಿಯೂ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ