6 ವರ್ಷ ಡೇಟಿಂಗ್..! ರೋಹಿತ್ ಲೈಫ್ ಸ್ಟೈಲ್ ಹಿಂದಿನ ಸೂತ್ರಧಾರಿ ಈಕೆ..! Photo

author-image
Ganesh
Updated On
6 ವರ್ಷ ಡೇಟಿಂಗ್..! ರೋಹಿತ್ ಲೈಫ್ ಸ್ಟೈಲ್ ಹಿಂದಿನ ಸೂತ್ರಧಾರಿ ಈಕೆ..! Photo
Advertisment
  • ರೋಹಿತ್, ರಿತಿಕಾ ಟೀಮ್ ಇಂಡಿಯಾ ಸ್ವೀಟ್ ಕಪಲ್ಸ್
  • ಪ್ರೊಫೆಷನಲ್​​ ಟು ಪರ್ಸನಲ್​.. ಒಂದಾಗಿದ್ದೇ ರೋಚಕ
  • ಸಿನಿಮಾಗಿಂತ ಕಡಿಮೆ ಇಲ್ಲ ರೋಹಿತ್-ರಿತಿಕಾ ಲವ್​​ಸ್ಟೋರಿ

ರೋಹಿತ್ ಶರ್ಮಾ ಆ್ಯಂಡ್ ರಿತಿಕಾ ಸಜ್ಡೇ. ಟೀಮ್ ಇಂಡಿಯಾ ಸ್ವೀಟ್ ಕಪಲ್ಸ್. ಇವರನ್ನು ನೋಡಿದ್ರೆ ಕಪಲ್ಸ್ ಅಂದ್ರೆ ಹೀಗಿರಬೇಕಪ್ಪ ಅನ್ನೋದ್ರಲ್ಲಿ ಡೌಟಿಲ್ಲ. ಇವರಿಬ್ಬರ ಲವ್​ ಸ್ಟೋರಿ ಸಿನಿಮಾಗಿಂತ ಕಡಿಮೆ ಇಲ್ಲ.

ರೋಹಿತ್ ಶರ್ಮಾ, ಟೀಮ್ ಇಂಡಿಯಾದ ಗ್ರೇಟ್ ಕ್ರಿಕೆಟರ್. ವಿಶ್ವ ಕ್ರಿಕೆಟ್​ನ ಒನ್​ ಅಂಡ್ ಒನ್ಲಿ ಹಿಟ್​ಮ್ಯಾನ್. ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ಮಹಾನ್ ನಾಯಕ. ರೋಹಿತ್ ಶರ್ಮಾ ಕ್ರಿಕೆಟ್​ ಅನ್ನ ಎಷ್ಟು ಪ್ರೀತಿ ಮಾಡ್ತಾರೋ, ಅಷ್ಟೇ ಪತ್ನಿ ರಿತಿಕಾ ಸಜ್ದೇಯನ್ನು ಪ್ರೀತಿಸ್ತಾರೆ. ಇದಕ್ಕೆ ಗ್ಯಾಲರಿಯಲ್ಲಿ ಕುಳಿತ ಪತ್ನಿಗೆ ಪ್ರೀತಿಯ ಉಡುಗೊರೆಯಾಗಿ ನೀಡುವ ಸೆಂಚೂರಿಗಳೇ ಸಾಕ್ಷಿ.

ಇದನ್ನೂ ಓದಿ:ಜಾಲಿ ಮೂಡ್​ನಲ್ಲಿ ರೋಹಿತ್-ರಿತಿಕಾ.. ಅಬ್ದು ರೋಜಿಕ್ ಜೊತೆ ಪೋಸ್ ಕೊಟ್ಟಿದ್ದು ಎಲ್ಲಿ?

publive-image

ಗ್ಯಾಲರಿಯಲ್ಲಿ ಕುಳಿತ ಪತ್ನಿ ರಿತಿಕಾ, ಸೆಂಚೂರಿಗಳನ್ನು ಅರ್ಪಿಸುವ ರೋಹಿತ್ ನಮಗೆ ಗೊತ್ತಿದೆ. ರೋಹಿತ್ ಶರ್ಮಾರ ಮ್ಯಾನೇಜರ್ ಆಗಿದ್ದ ಈಕೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಇವರಿಬ್ಬರ ಲವ್​ ಸ್ಟೋರಿ, ಯಾವ್ದೇ ಸಿನಿಮಾಗಿಂತ ಕಡಿಮೆ ಇಲ್ಲ!

ಇವರಿಬ್ಬರು ಒಂದಾಗಿದ್ದೇ ರೋಚಕ
ರಿತಿಕಾ ಸಜ್ದೇ.. ಕ್ರೀಡಾ ಜಗತ್ತಿಗೆ ಹೆಸರುವಾಸಿಯಾಗಿದ್ದ ಹೆಸರು. ಸ್ಪೋರ್ಟ್​ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ರಿತಿಕಾ, ಖ್ಯಾತ ಕಾರ್ನರ್​ಸ್ಟೋನ್ ಸ್ಪೋರ್ಟ್‌ ಈವೆಂಟ್​​ ಕಂಪನಿಯ ಸಿಇಒ ಬಂಟಿ ಸಜ್ದೇ ಸೋದರ ಸಂಬಂದಿಯಾಗಿದ್ದರು. ಕೆಲ ಕ್ರಿಕೆಟರ್​ಗಳ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದ ಈಕೆ, ನಂತರ ರೋಹಿತ್ ಶರ್ಮಾ ಜೊತೆ ಲವ್​​ನಲ್ಲಿ ಬಿದ್ದಿದ್ದೇ ರೋಚಕ.

publive-image

ಅಂಹಕಾರಿ ಎಂದುಕೊಂಡಿದ್ದ ರೋಹಿತ್
ರೋಹಿತ್, ರಿತಿಕಾ ಮೊದಲ ಭೇಟಿ ಜಾಹೀರಾತು ಚಿತ್ರೀಕರಣದಲ್ಲಾಗಿತ್ತು. ಅದು ಕೂಡ 2008ರಲ್ಲಿ. ಈ ಮೊದಲ ಭೇಟಿಯಲ್ಲಿ ನಾನೊಂದು ತೀರ ನೀನೊಂದು ತೀರ ಎಂಬಂತೆ ಅಂತರ ಕಾಯ್ದುಕೊಂಡಿದ್ದರು. ರಿತಿಕಾಳ ನಡೆ ನೋಡಿದ್ದ ರೋಹಿತ್, ಈಕೆ ಅಂಹಕಾರಿ ಎಂಬ ಮನೋಭಾವಕ್ಕೂ ಬಂದಿದ್ದರು. ಕ್ರಮೇಣ ಎಲ್ಲವೂ ಬದಲಾಯ್ತು.

ಇದನ್ನೂ ಓದಿ:ಎರಡನೇ ಮಗುವಿಗೆ ತಂದೆ ಆಗ್ತಿದ್ದಾರೆ ರೋಹಿತ್ ಶರ್ಮಾ; ವಿಡಿಯೋದಲ್ಲಿ ಕ್ಲೂ ಬಿಟ್ಟುಕೊಟ್ಟ ರಿತಿಕಾ

publive-image

6 ವರ್ಷ ಡೇಟಿಂಗ್.. ಮಂಡಿಯೂರಿ ರೋಹಿತ್​ ಪ್ರಪೋಸ್
ಆರಂಭದಲ್ಲಿ ಒಬ್ಬರ ಬಗ್ಗೆ ಒಬ್ಬರು ತಲೆಕೆಡಿಸಿಕೊಂಡಿರಲಿಲ್ಲ. ಕಾಲ ಕ್ರಮೇಣ ಉತ್ತಮ ಸ್ನೇಹಿತರಾದ್ರು. ಅದೇ ಸ್ನೇಹ ಪ್ರೀತಿಯಾಗಿ ಚಿಗುರೊಡೆದಿತ್ತು. ಪರಸ್ಪರ ಪ್ರೀತಿಯಲ್ಲಿದ್ದಾಗಲೇ ಮುಂಬೈನ ಬೋರಿವ್ಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ರೋಹಿತ್​, ಮಂಡಿಯೂರಿ ರಿತಿಕಾಗೆ ಪ್ರಪೋಸ್ ಮಾಡಿದ್ದರು. ಈ ಪ್ರಪೋಸಲ್ ಸಂತೋಷವಾಗೇ ಸ್ವೀಕರಿಸಿದ್ರು.

ರೋಹಿತ್​ಗೆ ಯುವಿ ವಾರ್ನಿಂಗ್
ಮೊದಲ ಬಾರಿಗೆ ಜಾಹೀರಾತಿನ ಶೂಟ್​ಗೆ ಹೋಗಿದ್ದ ರೋಹಿತ್​ಗೆ, ಯುವರಾಜ್ ಸಿಂಗ್ ವಾರ್ನ್​ ಮಾಡಿದ್ದರು. ಯುವರಾಜ್ ಪಕ್ಕದಲ್ಲೇ ಕುಳಿತಿದ್ದ ರಿತಿಕಾಳನ್ನ ತೋರಿಸಿದ ಯುವರಾಜ್​ ಸಿಂಗ್, ಈಕೆ ನನ್ನ ಸಹೋದರಿಯಂತೆ. ಅಂತರ ಕಾಯ್ದುಕೊಂಡ್ರೆ ಒಳ್ಳೆಯದು ಎಂದೇ ಧಮ್ಕಿ ಹಾಕಿದ್ದರು. ಇದಕ್ಕೆ ಕಾರಣವೂ ಇತ್ತು. ಅದೇನಂದ್ರೆ ಯುವಿ ಪಾಲಿಗೆ ರಿತಿಕಾ ತಂಗಿ ಆಗಿದ್ದರು.

publive-image

2015 ಜೂನ್ 3ಕ್ಕೆ ಎಂಗೇಜ್ಮೆಂಟ್​..!
6 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದ ಈ ಜೋಡಿ, ಕೆಲ ಗಾಸಿಪ್​ಗೂ ದಾರಿ ಮಾಡಿಕೊಟ್ಟಿತ್ತು. ರಿತಿಕಾಗೆ ಮನಸೋತಿದ್ದ ರೋಹಿತ್ 2015ರ ಜೂನ್​​ 3ರಂದು ಎಂಗೇಜ್ಮೆಂಟ್ ಮಾಡಿಕೊಂಡು ಮದುವೆಗೆ ಅಧಿಕೃತ ಮುದ್ರೆ ಒತ್ತಿದ್ದರು. ಅದೇ ವರ್ಷ ಡಿಸೆಂಬರ್ 13ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದನ್ನೂ ಓದಿ:ಮೈದಾನದಲ್ಲಿ ಜಾರಿದ ರೋಹಿತ್ ಪ್ಯಾಂಟ್, ಮುಜುಗರಕ್ಕೆ ಒಳಗಾದ ಪತ್ನಿ ರಿತಿಕಾ..!

ರೋಹಿತ್ ಶರ್ಮಾ ಸಕ್ಸಸ್ ಹಿಂದಿನ ಸಿಕ್ರೇಟ್​​ ರಿತಿಕಾ
ರೋಹಿತ್ ಶರ್ಮಾ, ಇಂದು ಸಕ್ಸಸ್​ಫುಲ್ ಕ್ರಿಕೆಟರ್​ ಆಗಿ ಬೆಳೆದು ನಿಂತಿದ್ದಾರೆ. ಇದಕ್ಕೆ ಕಾರಣ ರೋಹಿತ್ ಶರ್ಮಾರ ಶ್ರಮವೊಂದೇ ಕಾರಣವಲ್ಲ. ಈಕೆಯ ಪ್ರೋತ್ಸಾಹ, ಬೆಂಬಲವೂ ಕಾರಣವಾಗಿದೆ. ರೋಹಿತ್ ವೃತ್ತಿ ಜೀವನದಲ್ಲಿ ಕುಗ್ಗಿ ಬಿದ್ದಾಗ ಬೆನ್ನಿಗೆ ನಿಲ್ಲುವ ಮೊದಲ ವ್ಯಕ್ತಿಯೇ ರಿತಿಕಾ ಸಜ್ದೇ. ಇದು ನಿನ್ನೆ ಮೊನ್ನೆಯಲ್ಲ. ರೋಹಿತ್​​​​​​ರ ಆರಂಭಿಕ ವೃತ್ತಿ ಜೀವನ ಹಳ್ಳ ಹಿಡಿದಾಗಲೂ ಜೊತೆಯಾಗಿ ನಿಂತಿದ್ದವರು ಇದೇ ರಿತಿಕಾ ಸಜ್ದೇ.

publive-image

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment