/newsfirstlive-kannada/media/post_attachments/wp-content/uploads/2025/05/ROHIT_SHARMA-4.jpg)
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಓಪನರ್ಸ್ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಇಬ್ಬರೂ ಭರ್ಜರಿ ಹಾಫ್ಸೆಂಚುರಿ ಬಾರಿಸಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಆಗಮಿಸಿದ ಮುಂಬೈ ಪರ ಓಪನರ್ಸ್ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ರಾಯಲ್ಸ್ ಬೌಲರ್ಗಳನ್ನು ಮೂಲೆ ಗುಂಪು ಮಾಡಿದರು.
ಇದನ್ನೂ ಓದಿ:ವೈಭವ್ ಸೂರ್ಯವಂಶಿ ನೋಡಿ MS ಧೋನಿ ಏನು ಹೇಳಿದರು..? ಹಿಂಗಾ ಕಮೆಂಟ್ ಮಾಡೋದು
ಮೊದಲಿನಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ರಯಾನ್ ರಿಕೆಲ್ಟನ್ ದೊಡ್ಡ ದೊಡ್ಡ ಹೊಡೆತಗಳಿಗೆ ಕೈಹಾಕಿ ಯಶಸ್ವಿಯಾದರು. ಹೀಗಾಗಿಯೇ ಕೇವಲ 28 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ಗಳಿಂದ ಅಮೋಘವಾದ ಅರ್ಧಶತಕ ದಾಖಲಿಸಿದರು. ರಯಾನ್ ರಿಕೆಲ್ಟನ್ ಐಪಿಎಲ್ ಟೂರ್ನಿಯಲ್ಲಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನೊಂದೆಡೆ ನಿಧಾನವಾದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ, ರಾಜಸ್ಥಾನ್ ಬೌಲರ್ಗಳನ್ನು ಚೆಂಡಾಡಿದರು. ಪಂದ್ಯದಲ್ಲಿ ಅತ್ಯಂತ ತಾಳ್ಮೆ ಪ್ರದರ್ಶಿಸಿದ ಹಿಟ್ಮ್ಯಾನ್ ಹಾಫ್ಸೆಂಚುರಿ ಬಾರಿಸುವವರೆಗೂ ಒಂದೂ ಸಿಕ್ಸ್ ಕೂಡ ಹೊಡೆಯಲಿಲ್ಲ. ಪಂದ್ಯದಲ್ಲಿ 31 ಬಾಲ್ಗಳನ್ನು ಆಡಿದ ರೋಹಿತ್ 9 ಬೌಂಡರಿಗಳಿಂದ 50 ರನ್ಗಳನ್ನು ಪೂರೈಸಿದರು. ತಂಡದ ಮೊತ್ತ 116 ರನ್ ಆಗಿದ್ದಾಗ ರಯಾನ್ ವಿಕೆಟ್ ಒಪ್ಪಿಸಿದ್ರೆ, ತಂಡದ ಮೊತ್ತ 123 ರನ್ ವೇಳೆ ರೋಹಿತ್ ಶರ್ಮಾ ಕ್ಯಾಚ್ ಔಟ್ ಅದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ