newsfirstkannada.com

ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್​.. ಕ್ರಿಕೆಟ್​ಗೆ ಗುಡ್​ಬೈ ಹೇಳ್ತಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ..!

Share :

Published June 30, 2023 at 11:19am

Update June 30, 2023 at 11:21am

    ಕೊಹ್ಲಿ, ರೋಹಿತ್ ವಿದಾಯದ ಪ್ಲಾನ್ ಹೇಗಿರಲಿದೆ..?

    ಕೊಹ್ಲಿ ಇನ್ನೂ ಇಷ್ಟು ಟಿ-20, ODI ಪಂದ್ಯ ಆಡ್ತಾರೆ?

    ದಿಗ್ಗಜರ ವಿದಾಯ ಘೋಷಿಸಿದ್ರೆ BCCIಗೆ ಬಿಗ್ ಲಾಸ್

ಹೊಸ ನೀರಿನ ಆಗಮನ ವೇಳೆ ಹಳೆ ನೀರು ಹೊರಗೆ ಹೋಗಲೇಬೇಕು. ಈಗ ಇಂಥದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ-ಕಿಂಗ್ ಕೊಹ್ಲಿ ಸಿಲುಕಿದ್ದಾರೆ. ಅಷ್ಟೇ ಅಲ್ಲ, ಈ ಮೆಗಾ ಟೂರ್ನಿಯ ಬಳಿಕ ಸ್ಥಾನದ ತ್ಯಾಗಕ್ಕೂ ಸಿದ್ಧರಾಗಿದ್ದಾರೆ.

ಕಿಂಗ್ ಕೊಹ್ಲಿ.. ರೋಹಿತ್ ಶರ್ಮಾ.. ಟೀಮ್ ಇಂಡಿಯಾದ ರನ್ ಮಷಿನ್ಸ್.. ಟೀಮ್ ಇಂಡಿಯಾದ ಅವಿಭಾಜ್ಯ ಅಂಗಕೂಡ.. ಇವರಿಲ್ಲದ ಟೀಮ್ ಇಂಡಿಯಾ ಊಹೆಗೆ ನಿಲುಕದ್ದು. ಆದ್ರೀಗ ಇವರ ಪರ್ಫಾಮೆನ್ಸ್ ವಿರುದ್ಧವೇ ಟೀಕೆಗಳು ಕೇಳಿಬರುತ್ತಿದ್ದು, ಕ್ರಿಕೆಟ್ಗೆ ಗುಡ್ ಬೈ ಹೇಳೋದು ಒಳಿತು ಎಂಬ ಡಿಬೇಟ್​ಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ವ್ಯಾಪಕ ವಿರೋಧ, ಟೀಕೆಗೆ ಗುರಿಯಾಗ್ತಿರೋ ಈ ಕಿಂಗ್ ಕೊಹ್ಲಿ ಆ್ಯಂಡ್ ಹಿಟ್​ಮ್ಯಾನ್ ತ್ಯಾಗಕ್ಕೆ ಮುಂದಾಗಿದ್ದು, ಹಂತ ಹಂತವಾಗಿ ಕ್ರಿಕೆಟ್​ನಿಂದ ದೂರ ಉಳಿಯೋ ಪ್ಲಾನ್ನಲ್ಲಿದ್ದಾರೆ.

ಟಿ20 ಕ್ರಿಕೆಟ್ ಬಿಡಲಿದ್ದಾರೆ ರೋಹಿತ್-ಕೊಹ್ಲಿ

2024ರ ಟಿ-20 ವಿಶ್ವಕಪ್ ದೃಷ್ಟಿಯಿಂದ ಈಗಾಗಲೇ ಯುವ ತಂಡ ಕಟ್ಟೋಕೆ ಬಿಸಿಸಿಐ ಮುಂದಾಗಿದೆ. ಈ ನಿಟ್ಟಿನಲ್ಲೇ ತಂಡವನ್ನು ಆಯ್ಕೆ ಮಾಡ್ತಿದೆ. ಅಷ್ಟೇ ಅಲ್ಲ, 2022ರ ಟಿ20 ವಿಶ್ವಕಪ್ ಸೋಲಿನ ಬಳಿಕ ಏಕೈಕ ಟಿ20 ಪಂದ್ಯವನ್ನಾಡದ ಈ ಇಬ್ಬರು, ಸಂಪೂರ್ಣ ಟಿ-20 ಫಾರ್ಮೆಟ್​ನಿಂದ ದೂರ ಉಳಿದಿದ್ದಾರೆ. ಆದ್ರೀಗ ಈ ಚುಟುಕು ಫಾರ್ಮೆಟ್​ಗೆ ಕಂಪ್ಲೀಟ್ ಫುಲ್ ಸ್ಟಾಪ್ ಇಡೋ ಪ್ಲಾನ್, ರೋಹಿತ್ ಆ್ಯಂಡ್ ಕೊಹ್ಲಿ ಮುಂದಿದೆ.

ವಿಶ್ವಕಪ್ ಬಳಿಕ ಏಕದಿನ ತಂಡಕ್ಕೂ ಗುಡ್​ಬೈ..!

ಈ ಬಾರಿ ಭಾರತ ಅತಿಥ್ಯದಲ್ಲಿ ನಡೆಯೋ ಏಕದಿನ ವಿಶ್ವಕಪ್, ರೋಹಿತ್ ಆ್ಯಂಡ್ ಕೊಹ್ಲಿ ಪಾಲಿಗೆ ಕೊನೆಯ ಮೆಗಾ ಟೂರ್ನಿ.. ಏಕದಿನ ವಿಶ್ವಕಪ್ ಅಂತ್ಯದ ಬಳಿಕ 50 ಓವರ್ ಗೇಮ್​ನಿಂದ ದೂರ ಸರಿಯಲಿರೋ ಈ ಜೋಡೆತ್ತುಗಳು, ಕೆಲ ಸೆಲೆಕ್ಟೀವ್ ಸಿರೀಸ್​ಗಳನ್ನು ಮಾತ್ರವೇ ಆಡಲಿದ್ದಾರೆ. ಒಂದೆರಡು ವರ್ಷಗಳ ಕಾಲ ತಂಡದಲ್ಲಿ ಉಳಿಯಲಿರುವ ಈ ಇಬ್ಬರೂ, ನಂತರ ಸೈಲೆಂಟ್ ಆಗಿ ಏಕದಿನ ತಂಡದಿಂದ ಮರೆಯಾಗೋದು ಕನ್ಫರ್ಮ್.

ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ ಜೋಡೆತ್ತು

ವೈಟ್ ಬಾಲ್ ಕ್ರಿಕೆಟ್​ನಿಂದ ದೂರ ಸರಿಯಲಿರೋ ಈ ದಿಗ್ಗಜರು, ರೆಡ್ ಬಾಲ್ ಫಾರ್ಮೆಟ್​ನಲ್ಲಿ ಕನಿಷ್ಠ 2 ವರ್ಷಗಳ ಕಾಲ ಉಳಿಯಲಿದ್ದಾರೆ. ಅಷ್ಟೇ ಅಲ್ಲ, ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿರುವ ನಾಯಕ ಹಾಗೂ ಮಾಜಿ ನಾಯಕ, ಬಲಿಷ್ಠ ಟೆಸ್ಟ್ ತಂಡದ ಕಟ್ಟಿದ ಬಳಿಕ ರೆಡ್​ಬಾಲ್​ ಕ್ರಿಕೆಟ್​ನಿಂದ ನಿರ್ಗಮಿಸುವ ಲೆಕ್ಕಚಾರದಲ್ಲಿದ್ದಾರೆ. ಅಷ್ಟೇ ಅಲ್ಲ, 3ನೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬಳಿಕ ಇಂಥದ್ದೊಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಲೆಕ್ಕಚಾರದ ಹಿಂದೆ ಕಾರಣವೂ ಇದೆ.

ದಿಢೀರ್ ವಿದಾಯದಿಂದ ಟೀಮ್ ಇಂಡಿಯಾಗೆ ಹಿನ್ನಡೆ

ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ನಡೀತಿದೆ. ಅನುಭವಿಗಳ ಕೊರತೆಯೂ ಕಾಡುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್, ಗುಡ್ ಬೈ ಹೇಳಿಬಿಟ್ಟರೆ? ತಂಡದ ಕಾಂಬಿನೇಷನ್ ಜೊತೆ ಜೊತೆಗೆ ಬ್ಯಾಲೆನ್ಸ್ ಕೂಡ ಮಿಸ್ ಆಗೋದು ಗ್ಯಾರಂಟಿ. ಹಿರಿಯರ ಅಲಭ್ಯತೆಯಲ್ಲಿ ಯಂಗ್ ಇಂಡಿಯಾ ಹಳಿ ತಪ್ಪೋದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ತಂಡದಲ್ಲಿ ಒಂದಿಷ್ಟು ಕಾಲ ಉಳಿಯಲಿದ್ದಾರೆ.

ದಿಗ್ಗಜರ ವಿದಾಯ ಬಿಸಿಸಿಐಗೆ ಬಿಗ್ ಲಾಸ್

ಒಂದೆಡೆ ಈ ಹಿರಿಯರ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಅಧಃಪತನದತ್ತ ಸಾಗಿದ್ರೆ, ಮತ್ತೊಂದೆಡೆ ಇವರಿಬ್ಬರ ಅಲಭ್ಯತೆ ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಆದಾಯಕ್ಕೆ ಬಾರೀ ಪೆಟ್ಟು ನೀಡುತ್ತೆ. ಯಾಕಂದ್ರೆ, ಇವರಿಬ್ಬರೇ ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡೋ ಕೋಳಿಗಳು. ಅಕಸ್ಮಾತ್ ಇವರಿಬ್ಬರು ಒಮ್ಮೆಲೆ ಗುಡ್​ಬೈ ಹೇಳಿದ್ರೆ, ಟೆಲಿವಿಷನ್ ರೈಟ್ಸ್, ಸ್ಪಾನ್ಸರ್ಸ್, ಜಾಹೀರಾತು ಕಂಪನಿಗಳು ಟೀಮ್ ಇಂಡಿಯಾ ಮೇಲೆ ಸುರಿಯುತ್ತಿದ್ದ ಹಣದ ಹೊಳೆ ಅರ್ಧ ನಿಲ್ಲುತ್ತೆ. ಬಂಡವಾಳವನ್ನೂ ಹೂಡಲು ಹಿಂದೇಟು ಹಾಕತ್ವೆ. ಇದು ಸಹಜವಾಗೇ ವಿಶ್ವ ಶ್ರೀಮಂತ ಕ್ರಿಕೆಟ್ ಮಂಡಳಿಯನ್ನ ನಷ್ಟಕ್ಕೆ ದೂಡುತ್ತೆ. ಹೀಗಾಗಿ ಬಿಸಿಸಿಐ ಇವರಿಬ್ಬರ ಹಠಾತ್ ನಿರ್ಗಮನಕ್ಕೆ ಬ್ರೇಕ್ ಹಾಕೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್​.. ಕ್ರಿಕೆಟ್​ಗೆ ಗುಡ್​ಬೈ ಹೇಳ್ತಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ..!

https://newsfirstlive.com/wp-content/uploads/2023/06/VIRAT-4.jpg

Load More