/newsfirstlive-kannada/media/post_attachments/wp-content/uploads/2024/08/ROHIT-SHARMA.jpg)
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಶುಕ್ರವಾರ ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದೆ.
ಪಂದ್ಯ ಟೈ ಆಗುತ್ತಿದ್ದಂತೆಯೇ ಕ್ಯಾಪ್ಟನ್ ರೋಹಿತ್ ಶರ್ಮಾ ಭಾರೀ ನಿರಾಸೆಗೊಂಡಿದ್ದಾರೆ. 14 ಎಸೆತಗಳಲ್ಲಿ 1 ರನ್ ಬಾಕಿತ್ತು ಅಷ್ಟೇ. ಅದನ್ನು ಕೈಚೆಲ್ಲಿದೇವು. ಸ್ಕೋರ್ ಗಳಿಸಲು ಯೋಗ್ಯವಾಗಿತ್ತು. ಆ ಸ್ಕೋರ್ ಪಡೆಯಲು ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು. ಪಂದ್ಯದುದ್ದಕ್ಕೂ ನಮಗೆ ಸ್ಥಿರತೆ ಇರಲಿಲ್ಲ. ನಾವು ಉತ್ತಮವಾಗಿ ಪ್ರಾರಂಭಿಸಿದ್ದೇವು. 10 ಓವರ್‌ಗಳ ನಂತರ ಸ್ಪಿನ್ನರ್‌ಗಳು ಬರುವಾಗ ನಿಜವಾದ ಆಟ ಪ್ರಾರಂಭವಾಗಲಿದೆ ಅನ್ನೋದು ಗೊತ್ತಿತ್ತು. ನಾವು ಪ್ರಮುಖ ವಿಕೆಟ್​​ಗಳನ್ನು ಕಳೆದುಕೊಂಡು ಹಿಂದೆ ಬಿದ್ದೇವು ಎಂದಿದ್ದಾರೆ.
ಇದನ್ನೂ ಓದಿ:‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್​ಐ ಪರಶುರಾಮ್ ಪತ್ನಿ ಕಣ್ಣೀರು
ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಜೊತೆ ಆಟದೊಂದಿಗೆ ನಾವು ಹಿಡಿತ ಸಾಧಿಸಿದ್ದೇವು. ಕೊನೆಯಲ್ಲಿ ಸ್ವಲ್ಪ ನಿರಾಶೆಯಾಯಿತು. 14 ಎಸೆತಗಳು, 1 ರನ್ ಅಗತ್ಯ ಇತ್ತು. ಹೀಗಿದ್ದೂ ನಾವು ಪಂದ್ಯವನ್ನು ಕೈಚೆಲ್ಲಿದೇವು. ಶ್ರೀಲಂಕಾ ಚೆನ್ನಾಗಿ ಆಡಿತು. ನೀವು ಬಂದು ನಿಮ್ಮ ಹೊಡೆತಗಳನ್ನು ಮತ್ತು ರನ್ ಗಳಿಸುವ ಸ್ಥಳವಲ್ಲ. ನೀವು ಉತ್ತಮವಾಗಿ ರನ್​ಗಳಿಸಲು ಪ್ರಯತ್ನಿಸಬೇಕು ಎಂದು ಬೇಸರದಿಂದ ಮಾತನಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us