‘ವಿಶ್ವಕಪ್​ ಗೆಲ್ಲಲು ಈ ಆಟಗಾರ ಕಾರಣ’- ಲಕ್ಷಾಂತರ ಜನರ ಮುಂದೆ ರೋಹಿತ್​​ ಹೊಗಳಿದ್ದು ಯಾರನ್ನ?

author-image
Ganesh Nachikethu
Updated On
‘ಭಾರತ ಟಿ20 ವಿಶ್ವಕಪ್​ ಗೆಲ್ಲಲು ಈ ಮೂವರೇ ಕಾರಣ’- ಕೊನೆಗೂ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​​ ರೋಹಿತ್​​
Advertisment
  • ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ
  • ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವದ ಆಚರಣೆ..!
  • ಸಹಸ್ರಾರು ಅಭಿಮಾನಿಗಳ ಮುಂದೆ ಹಾರ್ದಿಕ್​ಗೆ ರೋಹಿತ್​​ ಶಬ್ಬಾಶ್​ ಗಿರಿ

ಸುಮಾರು 17 ವರ್ಷಗಳ ತಪ್ಪಸ್ಸಿನ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ ತವರಿಗೆ ವಾಪಸ್​ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್​ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಸಿಕ್ಕಿದೆ. ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಮ್​​ನಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವ ಆಚರಿಸಲಾಯ್ತು. ಈ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು ಟೀಮ್‌ ಇಂಡಿಯಾ ಆಟಗಾರರನ್ನು ನೋಡಿ ಕಣ್ತುಂಬಿಕೊಂಡರು.

ಇನ್ನು, ಈ ವೇಳೆ ಮಾತಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮುಂಬೈ ಯಾವತ್ತೂ ನಿರಾಸೆ ಮಾಡಿಲ್ಲ. ನಮಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ತಂಡದ ಪರವಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದರು.

ಜತೆಗೆ ವೇದಿಕೆ ಮೇಲೆಯೇ ರೋಹಿತ್ ತಮ್ಮ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಅವರನ್ನು ಹೊಗಳಿದ್ರು. ನಾನು ಹಾರ್ದಿಕ್​ ಪಾಂಡ್ಯ ಅವರನ್ನು ನೆನೆಯಲೇಬೇಕು. ಭಾರತ ತಂಡ ವಿಶ್ವಕಪ್​ ಗೆಲ್ಲಲು ಹಾರ್ದಿಕ್ ಪಾಂಡ್ಯ ಪಾತ್ರ ಬಹಳ ದೊಡ್ಡದು. ಪಾಂಡ್ಯ ಡೇವಿಡ್ ಮಿಲ್ಲರ್ ಅವರನ್ನು ಔಟ್‌ ಮಾಡಿ ಭಾರತಕ್ಕೆ ಗೆಲುವು ತಂದುಕೊಟ್ಟರು ಎಂದರು ರೋಹಿತ್​​. ಆಗ ಭಾವುಕರಾದ ಹಾರ್ದಿಕ್‌ ಪಾಂಡ್ಯ ಎದ್ದು ನಿಂತು ಅಭಿಮಾನಿಗಳಿಗೆ ಧನ್ಯವಾದಗಳು ತಿಳಿಸಿದ್ರು.

ಇದನ್ನೂ ಓದಿ:ಎಷ್ಟು ಕ್ಯೂಟ್​​ VIDEO: ಹಿಂದೆ ನಿಂತಿದ್ದ ರೋಹಿತ್; ಕೈ ಹಿಡಿದು ಮುಂದಕ್ಕೆ ಕರೆ ತಂದ ಕೊಹ್ಲಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment