/newsfirstlive-kannada/media/post_attachments/wp-content/uploads/2025/03/ROHIT_SHARMA-4.jpg)
ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಈ ಎರಡು ತಂಡಗಳ ಹಣಾಹಣಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಪಾಲಿಗೆ ಡು ಆರ್ ಡೈ ಮ್ಯಾಚ್ ಆಗಿ ಪರಿಣಮಿಸಿದೆ. ತಂಡಗಳ ಸೋಲು-ಗೆಲುವಿಗಿಂತ ರೋಹಿತ್ ಶರ್ಮಾ ಭವಿಷ್ಯವೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ಬಿಗ್ ಬ್ಯಾಟಲ್ಗೆ ವೇದಿಕೆ ಸಜ್ಜಾಗಿದೆ. ನಮೋ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಫೈಟ್ ನಡೆಯಲಿದ್ದು, ಉಭಯ ತಂಡಗಳ ಕಾಳಗ ನೋಡೋಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಹೈವೋಲ್ಟೇಜ್ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಹಿಟ್ಮ್ಯಾನ್ ರೋಹಿತ್ ಶರ್ಮಾ. ಇದಕ್ಕೆ ಕಾರಣ ಕಳೆದ ಪಂದ್ಯದ ಆಟ.
ಚೆನ್ನೈ ವಿರುದ್ಧ ರೋಹಿತ್ ಶರ್ಮಾ ಡಕೌಟ್
ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಅಬ್ಬರಿಸಿದ್ದ ರೋಹಿತ್, ಐಪಿಎಲ್ನಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡ್ತಾರೆ ಅನ್ನೋ ಲೆಕ್ಕಾಚಾರ ಇತ್ತು. ಆದ್ರೆ, ಚೆನ್ನೈನ ಚೆಪಾಕ್ನಲ್ಲಿ ನಿರೀಕ್ಷೆ ಹುಸಿಯಾಯ್ತು. ಜಸ್ಟ್ 4 ಎಸೆತ ಎದುರಿಸಿ ಶೂನ್ಯಕ್ಕೆ ಪೆವಿಲಿಯನ್ ಸೇರಿದ ರೋಹಿತ್, ಭಾರೀ ನಿರಾಸೆ ಮೂಡಿಸಿದರು. ಅಷ್ಟೇ ಅಲ್ಲ, 19ನೇ ಬಾರಿ ಶೂನ್ಯಕ್ಕೆ ಪೆವಿಲಿಯನ್ ಸೇರಿದ ಅಪಖ್ಯಾತಿಗೆ ರೋಹಿತ್ ಗುರಿಯಾದರು.
8 ಪಂದ್ಯ.. 120 ರನ್.. ವೈಫಲ್ಯದಿಂದ ಹೊರಬರ್ತಾರಾ.?
ಸೀಸನ್-18ರ ಮೊದಲ ಪಂದ್ಯದಲ್ಲಿ ಡಕೌಟ್ ಆಗಿದ್ದ ರೋಹಿತ್, ಈ ಸೀಸನ್ನ ಮೊದಲ ಪಂದ್ಯದಲ್ಲಿ ಮಾತ್ರವೇ ವೈಫಲ್ಯ ಅನುಭವಿಸಿಲ್ಲ. ಈ ಹಿಂದಿನ 8 ಐಪಿಎಲ್ ಪಂದ್ಯಗಳಲ್ಲೂ ರನ್ ಗಳಿಸಲು ವಿಫಲರಾಗಿದ್ದಾರೆ. ಎರಂಡಕಿ ಗಡಿ ದಾಟಲು ಹೆಣಗಾಡಿದ್ದಾರೆ. ಹೀಗಾಗಿ ಇವತ್ತಿನ ಪಂದ್ಯದಲ್ಲಿ ಹಿಟ್ಮ್ಯಾನ್, ವೈಫಲ್ಯದ ಸುಳಿಯಿಂದ ಹೊರ ಬರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಪರ್ಫಾರ್ಮ್ ಮಾಡಿದ್ರೆ ಬಚಾವ್.. ಇಲ್ಲ ಬೆಂಚ್ ಫಿಕ್ಸ್..!
ರೋಹಿತ್ ಶರ್ಮಾ ಪಾಲಿಗೆ ಇವತ್ತು ಮೋಸ್ಟ್ ಕ್ರೂಶಿಯಲ್ ಮ್ಯಾಚ್. ವೈಫಲ್ಯದ ಸುಳಿಯಲ್ಲಿ ಸಿಲುಕಿರುವ ರೋಹಿತ್, ಗುಜರಾತ್ ಎದುರು ತನ್ನ ಖದರ್ ತೋರಿಸಬೇಕಿದೆ. ಇಲ್ಲದಿದ್ರೆ, ಮುಂದಿನ ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾದ ಪರಿಸ್ಥಿತಿ ಎದುರಾದರು ಅಚ್ಚರಿ ಇಲ್ಲ. ಸದ್ಯ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡ್ತಿರುವ ರೋಹಿತ್, ಇಂಪ್ಯಾಕ್ಟ್ ಫುಲ್ ಪರ್ಫಾಮೆನ್ಸ್ ನೀಡದಿದ್ದರೆ ಬೆಂಚ್ ಇಲ್ದೇ ಬೇರೆ ಗತಿ ಇಲ್ಲ.
ಯಂಗ್ಸ್ಟರ್ಸ್ ಮಿಂಚಿದ್ರೆ ಕಳೆದು ಹೋಗ್ತಾರೆ ರೋಹಿತ್!
ಮುಂಬೈ ತಂಡದಲ್ಲಿ ಯುವ ಆಟಗಾರರ ಬಳಗವೇ ಇದೆ. ಒಂದೇ ಒಂದು ಚಾನ್ಸ್ ಸಿಕ್ಕರೂ ಎನ್ಕ್ಯಾಶ್ ಮಾಡಿಕೊಳ್ಳವ ಟ್ಯಾಲೆಟೆಂಡ್ ಆಟಗಾರರು ಇದ್ದಾರೆ. ನಮನ್ ಧೀರ್, ರಾಬಿನ್ ಮಿನ್ಜ್, ವಿಲ್ ಜಾಕ್ಸ್ರಂಥ ಆಟಗಾರರು ಟಾಪ್ ಆರ್ಡರ್ನಲ್ಲಿ ಆಡೋಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ, ರೋಹಿತ್, ಮತ್ತೆ ಮತ್ತೆ ವೈಫಲ್ಯ ಅನುಭವಿಸಿದ್ದಾರೆ.
ಇದನ್ನೂ ಓದಿ:ಮುಂಬೈಯಲ್ಲಿ ಹಿಟ್ಮ್ಯಾನ್ ಅಟ್ಯಾಕ್ ಮಾಡ್ತಿಲ್ಲ, ಸೂರ್ಯ ಬೆಳಗ್ತಿಲ್ಲ.. ಗಿಲ್ ತಂಡದಲ್ಲೂ ವೀಕ್ನೆಸ್!
ರೋಹಿತ್ ಈಗ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಅಲ್ಲ. ಕೇವಲ ಆಟಗಾರನಾಗಿರುವ ರೋಹಿತ್, ಫಿಟ್ನೆಸ್ ಕೂಡ ಅದ್ಭುತವಾಗಿಲ್ಲ. ಮುಂಬೈ ಪಡೆಯಲ್ಲಿ ರೋಹಿತ್, ಸ್ಥಾನ ತುಂಬಲು ಯುವ ಆಟಗಾರರ ಬಳಗ ರೆಡಿಯಿದೆ. ಹೀಗಾಗಿ ಮ್ಯಾನೇಜ್ಮೆಂಟ್ ಖಡಕ್ ನಿರ್ಧಾರ ತೆಗೆದುಕೊಂಡ್ರೆ, ರೋಹಿತ್ ಖೇಲ್ ಖತಂ ಆಗಲಿದೆ.
ಮುಂಬೈ ಇಂಡಿಯನ್ಸ್ ಮಾಲೀಕರು, ಪಕ್ಕಾ ಬ್ಯಸಿನೆಸ್ ಮೈಂಡೆಡ್ಗಳು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2024ರ ಐಪಿಎಲ್. ಈ ಟೂರ್ನಿಗೂ ಮುನ್ನ 5 ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದನ್ನೂ ಮರೆತು ರೋಹಿತ್ ಶರ್ಮಾನ ನಾಯಕತ್ವದಿಂದ ಕೆಳಗಿಳಿಸಿದರು. ಹಾರ್ದಿಕ್ ಪಾಂಡ್ಯನ ಗುಜರಾತ್ನಿಂದ ಕರೆತಂದು ಪಟ್ಟ ಕಟ್ಟಿದ್ದರು. ಇದೀಗ ಆಟಗಾರನಾಗಿ ರೋಹಿತ್, ವೈಫಲ್ಯ ಅನುಭವಿಸ್ತಿದ್ದಾರೆ. ಹಿಂದೆ ನಾಯಕತ್ವದ ವಿಚಾರದಲ್ಲಿ ತೆಗೆದುಕೊಂಡಂತೆ ಬ್ಯಾಟಿಂಗ್ ವಿಚಾರದಲ್ಲೂ ಖಡಕ್ ನಿರ್ಧಾರ ತೆಗೆದುಕೊಳ್ಳೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ