newsfirstkannada.com

ಮೊದಲ​ ಪಂದ್ಯ ಡಕೌಟ್.. 2ನೇ ಪಂದ್ಯ ಡಕೌಟ್.. 3ನೇ ಪಂದ್ಯದಲ್ಲಿ ಫುಲ್​ ಟ್ರೀಟ್..!

Share :

Published January 18, 2024 at 11:17am

    ​ರೋ‘ಹಿಟ್​’​​ ರೌದ್ರಾವತಾರ.. ಅಫ್ಘಾನಿಸ್ತಾನ ಥಂಡಾ

    ಸಂಕಷ್ಟಕ್ಕೆ ಸಿಲುಕಿದ ತಂಡದ ನೆರವಿಗೆ ನಿಂತ ನಾಯಕ

    ಮೈದಾನದಲ್ಲಿ ಬೌಲರ್​ಗಳ ಚೆಂಡಾಡಿದ ಹಿಟ್​ಮ್ಯಾನ್

ಇಂಡೋ-ಅಫ್ಘನ್​ ನಡುವಿನ 3ನೇ ಟಿ20 ಪಂದ್ಯ ಆರಂಭವಾದಾಗಲೇ ಟೀಮ್​ ಇಂಡಿಯಾದ ಕಥೆ ಮುಗೀತು ಅಂತಾ ತುಂಬಾ ಜನ ಅಂದು ಕೊಂಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಎಲ್ಲರೂ ಅಂದುಕೊಂಡಿದ್ದೆಲ್ಲಾ ಸುಳ್ಳಾಗಿ ಬಿಡ್ತು. ರೋಹಿತ್​ ರುದ್ರನರ್ತನಕ್ಕೆ ಅಪ್ಘನ್ನರು ಥಂಡಾ ಹೊಡೆದ್ರೆ ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು. ಬೌಂಡರಿ, ಸಿಕ್ಸರ್​​ಗಳ ಅಬ್ಬರದ ಆಟ ಹಂಗಿತ್ತು.

14 ತಿಂಗಳ ಬಳಿಕ ಕಮ್​​ಬ್ಯಾಕ್​

ಕಳೆದ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಕೊನೆಯ ಟಿ20 ಪಂದ್ಯವನ್ನಾಡಿದ್ದ ರೋಹಿತ್​ ಶರ್ಮಾ, ಬರೋಬ್ಬರಿ 14 ತಿಂಗಳ ಟಿ20 ಫಾರ್ಮೆಟ್​​ಗೆ ಕಮ್​ಬ್ಯಾಕ್​ ಮಾಡಿದ್ರು. ಕಮ್​ಬ್ಯಾಕ್​ ಮಾಡಿದ ಮೊದಲ ಪಂದ್ಯದಲ್ಲೇ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾದರು. 2ನೇ ಟಿ20 ಪಂದ್ಯದಲ್ಲಿ ಮತ್ತೆ ಡಕೌಟ್​ ಆದರು. ಕಮ್​ಬ್ಯಾಕ್​ ಮಾಡಿದ ಬಳಿಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಆದರೆ 3ನೇ ಪಂದ್ಯದಲ್ಲಿ ಫ್ಯಾನ್ಸ್​ಗೆ ಫುಲ್​ ಟ್ರೀಟ್​ ನೀಡಿದರು.

ಅಗ್ನಿಪರೀಕ್ಷೆಯ ಕಣದಲ್ಲಿ ರೋಹಿತ್​ ರುದ್ರನರ್ತನ

ಮೊದಲ 2 ಪಂದ್ಯಗಳಲ್ಲಿ ಡಕೌಟ್​ ಆಗಿದ್ದು ರೋಹಿತ್​ ಶರ್ಮಾ ಪಾಲಿಗೆ ನಿನ್ನೆಯ ಟಿ20 ಪಂದ್ಯ ಅಗ್ನಿಪರೀಕ್ಷೆಯ ಕಣವಾಗಿತ್ತು. ಎಲ್ಲರ ಕಣ್ಣು ರೋಹಿತ್ ಶರ್ಮಾ​ ಮೇಲೆ ನೆಟ್ಟಿತ್ತು. ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದ ರೋಹಿತ್​ ನಿನ್ನೆ ರುದ್ರನರ್ತನ ಮಾಡಿದ್ರು. ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ಸುರಿಸಿ ಬಿಟ್ರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಟೀಮ್​ ಇಂಡಿಯಾ 22 ರನ್​ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 100ರ ಒಳಗೆ ಆಲೌಟ್ ಆಗುತ್ತೆ ಅನ್ನೋ ಪ್ರಿಡಿಕ್ಷನ್​ ಎಲ್ಲರದ್ದಾಗಿತ್ತು. ಎಲ್ಲಾ ನಿರೀಕ್ಷೆ ಹುಸಿಯಾಯ್ತು. ಅದಕ್ಕೆಲ್ಲಾ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ..!

ಚಿನ್ನಸ್ವಾಮಿ ಅಂಗಳದಲ್ಲಿ ಬೌಲರ್​ಗಳ ಚೆಂಡಾಡಿದ ಹಿಟ್​ಮ್ಯಾನ್

ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ರೋಹಿತ್​​ ಶರ್ಮಾ ಅಕ್ಷರಶಃ ಘರ್ಜಿಸಿದ್ರು. 69 ಎಸೆತ ಎದುರಿಸಿದ ರೋಹಿತ್​ ಶರ್ಮಾ 11 ಬೌಂಡರಿ, 8 ಸಿಕ್ಸರ್​​ ಸಿಡಿಸಿ ಆರ್ಭಟಿಸಿದ್ರು. ಅಫ್ಘನ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ ರೋಹಿತ್​ ಬರೋಬ್ಬರಿ 175.36ರ ಸ್ಟ್ರೈಕ್​ರೇಟ್​ನಲ್ಲಿ ರನ್​​ ಹೊಳೆ ಹರಿಸಿದ್ರು. ರೋಹಿತ್​ ಶರ್ಮಾ ಬೌಂಡರಿ, ಸಿಕ್ಸರ್​​ಗಳನ್ನ ಸಿಡಿಸಿ ಅಬ್ಬರಿಸ್ತಾ ಇದ್ದರೂ ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು.

ರೋಹಿತ್​ ಶರ್ಮಾನೇ T20 ಕ್ರಿಕೆಟ್​ನ ಶತಕದ ಸರದಾರ

ಕಳೆದ 2 ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ರೋಹಿತ್​ ಶರ್ಮಾ, ನಿನ್ನೆ ಸೆಂಚುರಿ ಸಿಡಿಸಿ ಮಿಂಚಿದ್ರು. ಕೇವಲ 69 ಎಸೆತಗಳಲ್ಲಿ 121 ರನ್​ಗಳ ಅಮೋಘ ಇನ್ನಿಂಗ್ಸ್​ ಕಟ್ಟಿದ್ರು. ಈ ಮೂಲಕ ಟಿ20 ಕ್ರಿಕೆಟ್​ನ ಶತಕ ಸರದಾರ ಎಂಬ ಪಟ್ಟವನ್ನ ಅಲಂಕರಿಸಿದರು. 5 ಶತಕಗಳೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದರು.

ಅದ್ಭುತ ಶತಕದ ನೆರವಿನೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾ ನಾಯಕನಾಗಿ ಹೆಚ್ಚು ರನ್​ಗಳಿಸಿದ ಸಾಧನೆಯನ್ನೂ ರೋಹಿತ್​ ಶರ್ಮಾ ಮಾಡಿದರು. ಇಷ್ಟೇ ಅಲ್ಲ.. ತಮ್ಮ ಬ್ಯಾಟಿಂಗ್​ ಅನ್ನ ಟೀಕಿಸಿದವರಿಗೆ ಬ್ಯಾಟ್​ನಿಂದಲೇ ಉತ್ತರವನ್ನ ಕೊಡೋದ್ರ ಜೊತೆ ಟಿ20 ವಿಶ್ವಕಪ್​ಗೆ ನಾನ್​ ರೆಡಿ ಸಂದೇಶವನ್ನೂ ಸಾರಿದ್ರು. ಎಲ್ಲಕ್ಕಿಂತ ಮುಖ್ಯವಾಗಿ ಅಭಿಮಾನಿಗಳಿಗೆ ಸಖತ್​ ಟ್ರೀಟ್​ ಕೊಟ್ರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮೊದಲ​ ಪಂದ್ಯ ಡಕೌಟ್.. 2ನೇ ಪಂದ್ಯ ಡಕೌಟ್.. 3ನೇ ಪಂದ್ಯದಲ್ಲಿ ಫುಲ್​ ಟ್ರೀಟ್..!

https://newsfirstlive.com/wp-content/uploads/2024/01/ROHIT-18.jpg

Load More