newsfirstkannada.com

ಟಿ20 ಕ್ರಿಕೆಟ್​​.. ಧೋನಿ, ಕೊಹ್ಲಿ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ರೋಹಿತ್​​

Share :

Published January 19, 2024 at 4:15pm

Update January 19, 2024 at 4:28pm

    ಕೊಹ್ಲಿ, ಧೋನಿ ದಾಖಲೆ ಉಡೀಸ್​ ಮಾಡಿದ ಕ್ಯಾಪ್ಟನ್​ ರೋಹಿತ್​​

    ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​​, ಅತಿ ಹೆಚ್ಚು ಸಿಕ್ಸರ್​​ ಸಿಡಿಸಿದ್ಯಾರು?

    ಇಯಾನ್​​ ಮಾರ್ಗನ್​ ದಾಖಲೆ ಕುಟ್ಟಿ ಪುಡಿ ಮಾಡಿದ ಹಿಟ್​ಮ್ಯಾನ್​​!

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೇ ಟಿ20 ಪಂದ್ಯದಲ್ಲಿ ಅಫ್ಘಾನ್​​​ ತಂಡದ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ, ರಿಂಕು ಸಿಂಗ್​ ಬ್ಯಾಟಿಂಗ್​ ಕಾರಣ.

ಹೌದು, ಅಫ್ಘಾನಿಸ್ತಾನ ವಿರುದ್ಧ ಕ್ಯಾಪ್ಟನ್​ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ರು. ಕೇವಲ 69 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದರು. ಮೊದಲ 2 ಪಂದ್ಯಗಳಲ್ಲಿ ಡಕೌಟ್​ ಆಗಿದ್ದ ರೋಹಿತ್​​ ಕೊನೇ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ರು. ಈ ಮೂಲಕ ಹಲವು ದಾಖಲೆಗಳನ್ನು ಮುರಿದರು.

ಟಿ20 ಕ್ರಿಕೆಟ್‌ನಲ್ಲಿ ಕ್ಯಾಪ್ಟನ್​ ಆಗಿ ಅತಿ ಹೆಚ್ಚು ರನ್

ಟೀಂ ಇಂಡಿಯಾಗೆ ಮೂವರು ಪ್ರಮುಖ ಕ್ಯಾಪ್ಟನ್​​ಗಳು ಇದ್ದರು. ಈ ಪೈಕಿ ರೋಹಿತ್​ ಕೂಡ ಒಬ್ಬರು. ಎಂ.ಎಸ್​ ಧೋನಿ ಕ್ಯಾಪ್ಟನ್​ ಆಗಿ 72 ಟಿ20 ಪಂದ್ಯಗಳು ಆಡಿದ್ದು, 1,112 ರನ್ ಗಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್​ ಗಳಿಸಿ ಕ್ಯಾಪ್ಟನ್​​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಇನ್ನೂ, ಕೊಹ್ಲಿ 50 ಪಂದ್ಯಗಳಲ್ಲಿ 1,570 ರನ್‌ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. 54 ಪಂದ್ಯಗಳಲ್ಲಿ 1,648 ರನ್‌ ಗಳಿಸಿ ರೋಹಿತ್​ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.

ಟಿ20 ಪಂದ್ಯಗಳಲ್ಲಿ ಕ್ಯಾಪ್ಟನ್​ ಆಗಿ ಹೆಚ್ಚು ಸಿಕ್ಸರ್​​

ಅಫ್ಘಾನ್​​ ವಿರುದ್ಧದ ಕೊನೆ ಟಿ20 ಪಂದ್ಯದಲ್ಲಿ ರೋಹಿತ್​​​ ಬರೋಬ್ಬರಿ 8 ಸಿಕ್ಸರ್​ ಸಿಡಿಸಿದ್ರು. ಈ ಮೂಲಕ ಟಿ20 ಕ್ರಿಕೆಟ್​​ನಲ್ಲಿ 54 ಇನ್ನಿಂಗ್ಸ್‌ಗಳಿಂದ 90 ಸಿಕ್ಸರ್‌ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ 86 ಸಿಕ್ಸರ್​​ ಸಿಡಿಸಿದ್ದು, ಇವರನ್ನು ಮೀರಿಸಿದ್ದಾರೆ ರೋಹಿತ್​​. ಈ ಮೂಲಕ ಟಿ20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ಕ್ರಿಕೆಟ್​​.. ಧೋನಿ, ಕೊಹ್ಲಿ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ರೋಹಿತ್​​

https://newsfirstlive.com/wp-content/uploads/2024/01/Kohli_MS-Dhoni_Rohit.jpg

Load More