/newsfirstlive-kannada/media/post_attachments/wp-content/uploads/2025/03/ROHITH_KOHLI_IPL_SIXES.jpg)
ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಓಪನರ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಆರಂಭದಲ್ಲೇ ಎದುರಾಳಿ ಬೌಲರ್ಗಳ ಮೇಲೆ ಸಿಡಿದು ನಿಂತ ರೋಹಿತ್ ಮನಮೋಹಕವಾದ ಬ್ಯಾಟಿಂಗ್ನಿಂದ 81 ರನ್‌ಗಳನ್ನು ಚಚ್ಚಿದರು. ಇದರ ಜೊತೆಗೆ ಮಹತ್ವದ ಎರಡು ದಾಖಲೆಗಳನ್ನು ಕೂಡ ಮಾಡಿದ್ದಾರೆ.
ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯದಲ್ಲಿ ಜಾನ್ ಬೈರ್ಸ್ಟೋವ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದರು. ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಈ ಓಪನರ್ಸ್ 84 ರನ್ಗಳ ಜೊತೆಯಾಟ ಆಡಿದರು.
ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಗುಜರಾತ್ ಬೌಲರ್ಗಳನ್ನ ಚೆಂಡಾಡಿದ ರೋಹಿತ್ ಶರ್ಮಾ 9 ಬೌಂಡರಿ, 4 ಬ್ಯೂಟಿಫುಲ್ ಸಿಕ್ಸರ್ಗಳಿಂದ 81 ರನ್ ಬಾರಿಸಿದರು. ಈ ರನ್ಗಳೊಂದಿಗೆ ಎರಡು ದಾಖಲೆಗಳನ್ನು ಬರೆದರು.
ಐಪಿಎಲ್‌ನಲ್ಲಿ ರೋಹಿತ್ ಶರ್ಮಾ 7,000 ರನ್‌ಗಳನ್ನು ಪೂರೈಸಿದ ವಿರಾಟ್ ಕೊಹ್ಲಿ ನಂತರದ ಬ್ಯಾಟ್ಸ್ಮನ್ ಆಗಿದ್ದಾರೆ. 7,000ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ರೋಹಿತ್ ಶರ್ಮಾ ಪಾತ್ರರಾದರು. ಈ ದಾಖಲೆಯೊಂದಿಗೆ ರೋಹಿತ್ ಶರ್ಮಾ 300 ಸಿಕ್ಸರ್‌ಗಳನ್ನು ಬಾರಿಸಿದ ಭಾರತದ ಮೊದಲನೇ ಹಾಗೂ ವಿಶ್ವದ 2ನೇ ಆಟಗಾರ ಆಗಿದ್ದಾರೆ. ರೋಹಿತ್ ಶರ್ಮಾ ಒಟ್ಟು 302 ಸಿಕ್ಸರ್ ಬಾರಿಸಿದ್ರೆ, ಕ್ರಿಸ್ ಗೇಲ್ 357 ಸಿಕ್ಸರ್ಗಳಿಂದ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ 291 ಸಿಕ್ಸರ್ಗಳಿಂದ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ