/newsfirstlive-kannada/media/post_attachments/wp-content/uploads/2025/03/ROHIT_KOHLI-3.jpg)
ಟೀಮ್​ ಇಂಡಿಯಾ ಕ್ರಿಕೆಟ್​ ಜಗತ್ತಿನ ರಿಯಲ್​​ ಕಿಂಗ್​. ಒನ್​ ಡೇ ಫಾರ್ಮೆಟ್​ನಲ್ಲಿ ನಂಬರ್​ 1 ಸ್ಥಾನ. ಚಾಂಪಿಯನ್ಸ್​​ ಟ್ರೋಫಿ ಕಿರೀಟ ಎಲ್ಲಾ ಟೀಮ್​ ಇಂಡಿಯಾದ್ದೇ. ಟಿ20ಗೂ ನಾವೇ ಚಾಂಪಿಯನ್ಸ್​. ಟೆಸ್ಟ್​ನಲ್ಲೂ ನಮ್ಮ ದರ್ಬಾರ್​ ಜೋರಾಗೇ ಇದೆ. ಕಳೆದ 3 ವರ್ಷಗಳಲ್ಲಿ ಟೀಮ್​ ಇಂಡಿಯಾ ಕಂಡ ಸಕ್ಸಸ್​​ ಬೇರೆ ಯಾವ ತಂಡಕ್ಕೂ ದಕ್ಕಿಲ್ಲ.. ಇದಕ್ಕೆಲ್ಲಾ ಕಾರಣ ಯಾರು ಗೊತ್ತಾ?, ಜಗ ಮೆಚ್ಚಿದ ನಾಯಕ ರೋಹಿತ್​ ಶರ್ಮಾ.
ತಂಡಕ್ಕಾಗಿ ನಿಸ್ವಾರ್ಥ ಸೇವೆ, ತಂಡಕ್ಕಾಗಿ ಕಠಿಣ ನಿರ್ಧಾರ, ತಂಡಕ್ಕಾಗಿ ತ್ಯಾಗ. ತಂಡಕ್ಕಾಗಿಯೇ ತನ್ನ ಕರಿಯರ್​ ಮುಡಿಪು!. ಇದು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾರ ಗುಣ. ಈ ಅಪರೂಪದ ನಾಯಕನ ಮುಡಿಗೆ ಮತ್ತೊಂದು ಕಿರೀಟ ಒಲಿದಿದೆ. 12 ವರ್ಷಗಳ ಕಾಯುವಿಕೆಗೆ ಬ್ರೇಕ್​ ಬಿದ್ದು ಟೀಮ್​ ಇಂಡಿಯಾ ಚಾಂಪಿಯನ್ಸ್​ ಟ್ರೋಫಿಯ ಚಾಂಪಿಯನ್​ ಆಗಿ ಹೊರಹೊಮ್ಮಿದೆ.
/newsfirstlive-kannada/media/post_attachments/wp-content/uploads/2025/03/ROHIT_KOHLI_1.jpg)
ಅದೇನೋ ಗೊತ್ತಿಲ್ಲ, ಧೋನಿ ನಿರ್ಗಮನದ ಬಳಿಕ ಐಸಿಸಿ ಟೂರ್ನಮೆಂಟ್​ನಲ್ಲಿ ಟೀಮ್​ ಇಂಡಿಯಾಗೆ ಬ್ಯಾಡ್​​ಲಕ್​ ಅಂಟಿಕೊಂಡಿತ್ತು. BILATERAL SERIES ಸಿಂಹದಂತೆ ಘರ್ಜಿಸ್ತಾ ಇದ್ದ ಟೀಮ್​ ಇಂಡಿಯನ್ಸ್​, ಐಸಿಸಿ ಇವೆಂಟ್​ಗಳಲ್ಲಿ ಸೈಲೆಂಟ್​ ಆಗುತ್ತಿತ್ತು. ಆದ್ರೆ, ಕಳೆದ 4 ವರ್ಷಗಳಿಂದ ಟೀಮ್​ ಇಂಡಿಯಾ ಗತ್ತೇ ಬೇರೆಯಾಗಿದೆ. 7 ತಿಂಗಳ ಅಂತರದಲ್ಲಿ 2 ಐಸಿಸಿ ಟ್ರೋಫಿ ಗೆದ್ದಿದೆ. 4 ಇವೆಂಟ್​ಗಳಲ್ಲಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಈ ಬದಲಾವಣೆಗೆ ಕಾರಣ ಯಾರು ಗೊತ್ತಾ?, ಅದು ನಾಯಕ ರೋಹಿತ್​ ಶರ್ಮಾ.
ICC ಟೂರ್ನಿಗೆ ಟೀಮ್ ಇಂಡಿಯಾ ಸಾರಥಿಯೇ ‘ರಾಜ​’ .!
ಟೀಮ್​ ಇಂಡಿಯಾ ಫೈನಲ್​​ ಗೆದ್ದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ನಾಯಕತ್ವಕ್ಕೆ ಜೈ ಹೋ ಅಂತಿದ್ದಾರೆ. ಆನ್​ಫೀಲ್ಡ್​​ನಲ್ಲಿ ನಾಯಕ ರೋಹಿತ್​ರ ಗೇಮ್​ ಪ್ಲಾನ್, ಸ್ಟ್ರಾಟಜಿ ಮತ್ತು ಟ್ಯಾಕ್ಟಿಕ್ಸ್​ಗೆ, ಫ್ಯಾನ್ಸ್ ಅಷ್ಟೇ ಅಲ್ಲ, ಎದುರಾಳಿಗಳೂ ಫಿದಾ ಆಗಿದ್ದಾರೆ. ಮುಂಬೈಕರ್​​​ರನ್ನ ಕಿಂಗ್ ಆಫ್ ಐಸಿಸಿ ಟೂರ್ನಮೆಂಟ್ ಅಂತ ಕರೀತಿದ್ದಾರೆ.
ರೋಹಿತ್ ಹೊಗಳೋಕೆ ಕಾರಣ ಇದೆ. ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಹಿಟ್​ಮ್ಯಾನ್​​ ಸಾರಥ್ಯದಲ್ಲಿ ಎಲ್ಲಾ ಫಾರ್ಮೆಟ್​ಗಳ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್​​ ಪ್ರವೇಶಿಸಿದೆ. 2 ಬಾರಿ ಕಪ್​ ಗೆದ್ದಿದೆ. ರೋಹಿತ್​ ನಾಯಕತ್ವದಡಿಯಲ್ಲಿಗ ಚಾಂಪಿಯನ್ಸ್​ ಟ್ರೋಫಿ ಗೆದ್ದ ಭಾರತ ತಂಡ 7 ತಿಂಗಳ ಹಿಂದಷ್ಟೇ ಟಿ20 ವಿಶ್ವಕಪ್​​ ಗೆದ್ದು ಬೀಗಿತ್ತು.
ಜೂನ್​, 2024- ಬಾರ್ಬಡೋಸ್​​, 17 ವರ್ಷಗಳ ಬಳಿಕ T20 ವಿಶ್ವಕಪ್​ ಕಿರೀಟ
ಐಸಿಸಿ ಟೂರ್ನಿಗಳಲ್ಲಿ ಪದೇ ಪದೇ ಎಡವಿದ್ದ ಟೀಮ್​ ಇಂಡಿಯಾ ಕಳೆದ ವರ್ಷ ಜೂನ್​ ಟ್ರೋಫಿ ಬರಕ್ಕೆ ಫುಲ್​ ಸ್ಟಾಫ್​ ಇಟ್ಟಿತ್ತು. ರೋಹಿತ್​ ಸಾರಥ್ಯದಲ್ಲಿ ಜಬರ್ದಸ್ತ್​ ಪ್ರದರ್ಶನ ನೀಡಿದ್ದ ಟೀಮ್​ ಇಂಡಿಯಾ, ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳ ಕನಸನ್ನ ನನಸಾಗಿಸಿತ್ತು. ಫೈನಲ್​ ಪಂದ್ಯದಲ್ಲಿ ಸೌತ್​ ಆಫ್ರಿಕಾವನ್ನ ಮಣಿಸಿ, 17 ವರ್ಷಗಳ ಬಳಿಕ ಟಿ20 ಕಿರೀಟಕ್ಕೆ ಮುತ್ತಿಕ್ಕಿತ್ತು.
2024ರಲ್ಲಿ ಟಿ20 ವಿಶ್ವಕಪ್​​ ಗೆದ್ದ ಟೀಮ್​ ಇಂಡಿಯಾ ಅದಕ್ಕೂ 7 ತಿಂಗಳ ಹಿಂದೆ ಏಕದಿನ ವಿಶ್ವಕಪ್​ನಲ್ಲಿ ಸಾಲಿಡ್​​ ಆಟವಾಡಿತ್ತು. ರೋಹಿತ್​ ಶರ್ಮಾ ನಾಯಕತ್ವದಲ್ಲಿ ತವರಿನಲ್ಲಿ ಆಡಿದ ಪ್ರತಿಷ್ಠಿತ ಕದನದಲ್ಲಿ ಅಜೇಯವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿತ್ತು. ಆದ್ರೆ, ದುರಾದೃಷ್ಟವೋ ಏನೋ, ಗೆಲುವಿನ ಅಂಚಿನಲ್ಲಿ ಎಡವಿತ್ತು. ಕಪ್​ ಗೆಲ್ಲದಿದ್ರೂ ಕೂಡ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಆಡಿದ ಆಟ ಅಭಿಮಾನಿಗಳ ಮನಗೆದ್ದಿತ್ತು.
ಇದನ್ನೂ ಓದಿ: ದೊಡ್ಡ ಗೆಲುವು, ದೊಡ್ಡ ಸಂಭ್ರಮ.. ಬೆಂಗಳೂರು, ಮೈಸೂರು ಸೇರಿ ರಾಜ್ಯದ ಜಿಲ್ಲೆಗಳಲ್ಲಿ ಹೇಗಿತ್ತು ಸೆಲೆಬ್ರೆಷನ್?
/newsfirstlive-kannada/media/post_attachments/wp-content/uploads/2025/03/Rohit-sharma-8.jpg)
ಫೈನಲ್​ನಲ್ಲಿ ಮುಗ್ಗರಿಸಿದ್ದ ಟೀಮ್​ ಇಂಡಿಯಾ
ಒನ್​ ಡೇ, ಟಿ20 ಮಾತ್ರವಲ್ಲ, ಟೆಸ್ಟ್​ ಫಾರ್ಮೆಟ್​​ನಲ್ಲೂ ರೋಹಿತ್​ ಸಾರಥ್ಯದಲ್ಲಿ ಟೀಮ್​ ಇಂಡಿಯಾ ಯಶಸ್ಸಿನ ಓಟ ನಡೆಸಿತು. ಅದ್ಭುತ ಆಟದ ಮೂಲಕ 2023ರ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ಗೆ ಕ್ವಾಲಿಫೈ ಆಗಿತ್ತು. ಆದ್ರೆ, ದುರಾದೃಷ್ಟ ಫೈನಲ್​ನಲ್ಲಿ ಟೀಮ್​ ಇಂಡಿಯಾ ಮುಗ್ಗರಿಸಿತ್ತು.
4 ವರ್ಷದ ಅವಧಿಯಲ್ಲಿ 3 ಫಾರ್ಮೆಟ್​ನ 4 ಐಸಿಸಿ ಟೂರ್ನಿಗಳಲ್ಲಿ ತಂಡವನ್ನ ಫೈನಲ್​ವರೆಗೆ ಮುನ್ನಡೆಸೋದು ಅಂದ್ರೆ ಅದೇನು ಸಾಮಾನ್ಯದ ವಿಚಾರವಲ್ಲ. ಎಷ್ಟೋ ಲೆಜೆಂಡರಿ ನಾಯಕರಿಗೆ ಒಂದು ಕಪ್​ ಗೆಲ್ಲೋದಿರಲಿ, ತಂಡವನ್ನ ಫೈನಲ್​ಗೆ ಕೊಂಡೊಯ್ಯೋದು ಕೂಡ ಸಾಧ್ಯವಾಗಿಲ್ಲ. 4 ವರ್ಷದಲ್ಲಿ 4 ಬಾರಿ ಫೈನಲ್ಸ್​ಗೆ ತಂಡವನ್ನ ಕೊಂಡೊಯ್ದು 2 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲ, ಕ್ರಿಕೆಟ್​ ಜಗತ್ತಿನ ಮನವನ್ನೂ ಗೆದ್ದಿದ್ದಾರೆ. ಜಗಮೆಚ್ಚಿದ ನಾಯಕನಿಗೆ ಹೆಮ್ಮೆಯ ಸೆಲ್ಯೂಟ್​.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us